ಹಿಡಕಲ್ ಜಲಾಶಯದ ಉದ್ಯಾನ ಮೈಸೂರು ಬೃಂದಾವನ ರೀತಿ ಅಭಿವೃದ್ಧಿಯ ಉಮೇಶ ಕತ್ತಿ ಕೊನೆಯ ಆಸೆ ಸಿಎಂ ಈಡೇಸುತ್ತಾರೆ : ಸಚಿವ ಸುಧಾಕರ ವಿಶ್ವಾಸ
ಬೆಳಗಾವಿ, ಸೆ, 8 : ಸಚುವ ಉಮೇಶ ಕತ್ತಿ ಅವರ ಕೊನೆಯ ಆಸೆಯಂತೆ ಹಿಡಕಲ್ ಜಲಾಶಯದ ಬಳಿ ಮೈಸೂರು ಬೃಂದಾವನ ರೀತಿಯ ಮಾದರಿಯಲ್ಲಿ ಉದ್ಯಾನ ವನ ನಿರ್ಮಾಣ ಮಾಡಬೇಕು ಎನ್ನುವ ಆಸೆಯನ್ನು ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರು ಈಡೇಸುತ್ತಾರೆ ಅನ್ನುವ ಭರವಸೆ ನನಗೆ ಇದೆ. ಅವರ ಆಸೆ ನೆರವೇರಿಸಲು ನಾನು ಕೂಡಾ ಸಿಎಂ ಮೇಲೆ ಒತ್ತಡ ಹಾಕುತ್ತೇನೆ ಎಂದು ಸಚಿವ ಡಿ. ಸುಧಾಕರ ಅವರು ಹೇಳಿದರು.
ಇದೇ ವೇಳೇ ಮಾಧ್ಯಮದವರು ಕೇಳಿದ ಉಮೇಶ ಕತ್ತಿ ಅವರು ಹಿಡಕಲ್ ಉದ್ಯಾನವನ್ನು ಮೈಸೂರು ಬೃಂದಾವನ ಮಾದರಿ ರೀತಿ ನಿರ್ಮಾಣ ಮಾಡುವ ಕೊನೆಯ ಆಸೆ ಹೊಂದಿದ್ದರು. ಅದು ಆಸೆಯಾಗಿ ಉಳಿಯುತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದರು. ಅವರು ಇಂದು ನಮ್ಮ ಜೊತೆ ಇಲ್ಲದೆ ಹೋದರು ಕೂಡಾ ಅವರ ಸಮಯದೃಷ್ಠಿಯ ಯೋಜನೆಗಳನ್ನು ನಮ್ಮ ಸರಕಾರ ಮುಂದುವರೆಸಿಕೊಂಡು ಹೋಗುತ್ತದೆ ಎಂದು ತಿಳಿಸಿದರು.
ಹಿರಿಯರಾಗಿದ್ದ ಉಮೇಶ ಕತ್ತಿ ಅವರ ನಿಧನದಿಂದ ನಾಡಿಗೆ ಹಾಗಾ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರಿಗೆ ಎದೆನೋವು ಉಂಟಾಗಿ ಆಸ್ಪತ್ರೆಗೆ ದಾಖಲಾದಾಗ ಮೊದಲು ಕರೆ ನನಗೆ ಬಂತು. ಸುದ್ದಿ ತಿಳಿದ 8 ನಿಮಿಷಗಳಲ್ಲಿ ನಾನು ಆಸ್ಪತ್ರೆಗೆ ಹೋದೆ. ಅಲ್ಲಿ ಹೃದಯ ತಜ್ಞರನ್ನು ಕರೆಯಿಸಿ ಸತತ ಒಂದು ಗಂಟೆಗಳ ಕಾಲ ಪ್ರಯತ್ನ ಮಾಡಿದರೂ ವಿಧಿ ಆಟದ ಮುಂದೆ ನಮ್ಮ ಪ್ರಯತ್ನ ಗಳು ಯಶಸ್ಸು ಆಗಲಿಲ್ಲ. ನಮ್ಮ ಮಾರ್ಗದರ್ಶಕರಾದ ಅರಣುಸಿಂಗ್ ಅವರ ಜೊತೆ ಕತ್ತಿ ಅವರ ಮನೆಗೆ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಸಮಾಧಿ ಗೆ ಭೇಟಿ ನೀಡಲಿದ್ದೇವೆ ಎಂದರು.
ಇದೇ ವೇಳೆ ಸಚಿವ ಬೈರತಿ ಬಸವರಾಜ ಮಾತನಾಡಿ, ಉಮೇಶ ಕತ್ತಿ ಅವರ ಕೊನೆ ಆಸೆಯಂತೆ ಹಿಡಕಲ್ ಜಲಾಶಯದ ಬಳಿ ಉದ್ಯಾನ ನಿರ್ಮಾಣಕ್ಕೆ ನಾವೇಲ್ಲ ಸಚಿವರು ಸೇರಿ ಅವರ ಆಸೆ ಈಡೇರಿಸುತ್ತೇವೆ ಎಂದರು. ನಾವು ನಾಲ್ಕು ಸಚಿವರು ಅರುಶಿಂಗ್ ಅವರ ಜೊತೆ ಕತ್ತಿ ಅವರ ಮನೆಗೆ ಬೇಟ್ಟಿ ನೀಢತಾ ಇದ್ದೇವೆ ಎಂದು ನುಡಿದರು. ಕತ್ತಿ ಸಹೋದರರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದೇವೆ ಎಂದು ನುಡಿದರು.
ಇದೇ ವೇಳೆ ಎಮ್.ಟಿಬಿ ನಾಗರಾಜ್ ಅವರು ಮಾತನಾಡಿ, ಉಮೇಶ ಕತ್ತಿ ಅವರ ಅಕಾಲಿಕ ನಿಧನದಿಂದ ಪಕ್ಷಕ್ಕೆ ಹಾಗೂ ಕುಟುಂಬಕ್ಕೆ ಹಾಗೂ ಅಭಿಮಾನಿಗಳು ದುಃಖದ ಸಾಗರದಲ್ಲಿ ಮುಳುಗಿದ್ದೇವೆ. ಉಮೇಶ ಕತ್ತಿ ಅವರು ದೂರದೃಷ್ಟಿ ಇದ್ದ ಓರ್ವ ನಾಯಕರಾಗಿದ್ದರು. 25 ವರ್ಷದಿಂದಲೇ ರಾಜಕೀಯ ಜೀವನದ ಬದುಕಿನಲ್ಲಿ ಬೆಳೆದ ಬಂದಿದ್ದರು. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನುಡಿದರು.
ಮತ್ತೋರ್ವ ಸಚಿವ ಮುನಿರತ್ನ ಮಾತನಾಡಿ, ಉಮೇಶ ಕತ್ತಿ ಇಲ್ಲದಿರುವದು ದುಃಖಕರ ಸಂಗತಿ. ಬರುವ ಅಧಿವೇಶನದಲ್ಲಿ ನಮ್ಮ ಜೊತೆ ಇರಬೇಕಾದ ವ್ಯಕ್ತಿ ಇವತ್ತು ಇಲ್ಲ. ಇದು ಬಹಳ ನೋವಿನ ವಿಷಯ. ಶನಿವಾರ ನಾನು ಅವರನ್ನು ಭೇಟಿ ಯಾಗಿದ್ದೆ, ನನ್ನ ಇಲಾಖೆಗೆ ಸಂಬಂಧಿಸಿದಂತೆ ಮತ್ತು ಅವರ ಇಲಾಖೆಗೆ ಸಂಬಂಧಿಸಿದ ಚರ್ಚೆ ಮಾಡಿದೆ. ಆದರೆ ಇವತ್ತು ನಮ್ನ ಜೊತೆ ಇಲ್ಲ. ಅವರು ಆಸ್ಪತ್ರೆಗೆ ದಾಖಾಲಾದಾಗ ನಾನು ಅಲ್ಲಿ ಇದ್ದೆ. ಆದರೆ ಆಸ್ಪತ್ರೆಗೆ ಬರುವ ಮುಂಚೆನೆ ಅವರಿಗೆ ನೋವು ಹೆಚ್ಚಾಗಿದೆ. ಅವರು ಬದುಕುವದು ಕಷ್ಟ ಇದೆ ಅಂತಾ ವೈದ್ಯರು ಹೇಳಿದ್ದರು. ಆದರೆ ಉಮೇಶ ಕತ್ತಿ ಅವರನ್ನು ನಾವು ಉಳಿಸಿಕೊಂಡಿಲ್ಲ. ಈ ವಿಷಯದಲ್ಲಿ ನಮ್ಮ ಸರಕಾರ ಮೂರು ದಿನಗಳ ಕಾಲ ಶೋಕಾಚರಣೆ ಆಚರಿಸುತ್ತಿದ್ಸೆವೆ. ಯಾವದೇ ಕಾರಣಕ್ಕೂ ನಮ್ಮ ಮುಖ್ಯಮಂತ್ರಿ ಗಳು ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯದಲ್ಲಿ ಉಮೇಶ ಕತ್ತಿ ಆಶಯದಂತೆ ನಾವು ನಾವು ಚರ್ಚಿಸಿ, ಈ ಭಾಗಕ್ಕೆ ಅತಿ ಹೆಚ್ವು ಅಭಿವೃದ್ಧಿ ಆಗುವ ನಿಟ್ಟಿನಲ್ಲಿ ನಾವು ಮಾಡುತ್ತೇವೆ ಎಂದು ನುಡಿದರು.
ಉಮೇಶ ಕತ್ತಿ ನಿಧನ ನಾಡಿಗೆ, ಬಿಜೆಪಿಗೆ ತುಂಬಲಾರದ ನಷ್ಟ : ರಾಜ್ಯ ಬಿಜೆಪಿ ಉಸ್ತುವಾರಿ ಅರುಣಶಿಂಗ್
ಸಚಿವ ಉಮೇಶ ಕತ್ತಿ ಅವರು ವ್ಯಕ್ತಿಗತವಾಗಿ ನನಗೆ ಗೆಳೆಯರಾಗಿದ್ದರು, ದೆಹಲಿ, ಬೆಂಗಳೂರು ಅಥವಾ ಬೆಳಗಾವಿ ಇರಲಿ ನನ್ನ ಜೊತೆ ಗಂಟೆಗಳ ಕಾಲ ಚರ್ಚೆ ಮಾಡುತ್ತಿದ್ದು, ರಾಜ್ಯದ ಅಭಿವೃದ್ಧಿ ಹಾಗೂ ಬಿಪಿಪಿ ಪಕ್ಷ ಕಟ್ಟುವ ಕುರಿತು ಮಾತನಾಡುತ್ತಿದ್ದೇವು. ಅವರು ಬಿಂದಾಸ್ ಇರುತ್ತಿದ್ದರು. ಅಂತಹ ವ್ಯಕ್ತಿ ಈಗ ನಮ್ಮ ಬಳಿ ಇಲ್ಲ, ಅವರನ್ನು ಕಳೆದಕೊಂಡು ರಾಜ್ಯಕ್ಕೆ ಮತ್ತು ಬಿಜೆಪಿ ಪಕ್ಷಕ್ಕೆ ನಷ್ಟವಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಇಂದಿಲ್ಲಿ ಹೇಳಿದರು.
ಸಚಿವ ಉಮೇಶ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಕುಟುಂಬದವರನ್ನು ಭೇಟಿಯಾಗಲು ರಾಜ್ಯ ಉಸ್ತುವಾರಿ ಅರುಣಶಿಂಗ್ ಅವರ ಜೊತೆ ಬೆಳಗಾವಿಗೆ ಆಗಮಿಸಿದ ಅವರು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದರು.
ನಾನು ನಮ್ಮ ರಾಜ್ಯದ ಕೆಲವು ಸಚಿವರು ಉಮೇಶ ಕತ್ತಿ ಅವರ ಮನೆಗೆ ಹೋರಟಿದ್ದೇವೆ. ಅವರ ಕುಟುಂಸ್ಥರಿಗೆ ಸಾಂತ್ವನ ಹೇಳುತ್ತೇವೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ನಿನ್ನೆ ಅವರ ಅಂತ್ಯಕ್ರಿಯೆಗೆ ನಾನು ಬರಬೇಕು ಅಂದಿದ್ದೆ ಆದರೆ ವಿಮಾನದ ಸಂಪರ್ಕ ಆಗದ ಹಿನ್ನೆಲೆಯಲ್ಲಿ ಇವತ್ತು ಉಮೇಶ ಕತ್ತಿ ಅವರ ಮನೆಗೆ ಭೇಟಿ ನೀಡಿ ಧೈರ್ಯ ಹೇಳುವದಾಗಿ ತಿಳಿಸಿದರು. ರಾಜ್ಯ ಹಿರಿಯ ರಾಜಕಾರಣಿ, ಪಕ್ಷದ ಮುಖಂಡ ನಮ್ಮ ಏಕಾಏಕಿ ಬಿಟ್ಟು ಅಗಲಿದ್ದು ಅತೀವ ನೋವು ತಂದಿದೆ ಎಂದರು.