ಇಂದು ಚಿತ್ರ ವಸಂತ ಚಿತ್ರಕಲಾ ಸ್ಪರ್ಧೆ

ಇಂದು ಚಿತ್ರ ವಸಂತ ಚಿತ್ರಕಲಾ ಸ್ಪರ್ಧೆ
ಲೋಕದರ್ಶನ ವರದಿ ಇಂದು ಚಿತ್ರ ವಸಂತ ಚಿತ್ರಕಲಾ ಸ್ಪರ್ಧೆ ಗದಗ: ಯುವಕರಲ್ಲಿ ಕಲಾಸಕ್ತಿ ಬೆಳೆಸುವ ಉದ್ದೇಶದಿಂದ ವಿಜಯ ಲಲಿತಕಲಾ ಕಾಲೇಜು, ರಾಜೀವ ಗಾಂಧೀ ನಗರ, ಗದಗ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮುಖಾಂತರ ಚಿತ್ರ ವಸಂತ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಅನ್ನದಾನೇಶ್ವರ ಪ.ಪೂ ಕಾಲೇಜಿನ ಪ್ರಾಚಾರ್ಯರಾದ ಸಿ.ಎಸ್ ಅರಸನಾಳ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ.ಜಿ ಗಿರಿತಮ್ಮಣ್ಣವರ ಪ್ರಾಚಾರ್ಯರು ಸ.ಪ.ಪೂ ಕಾಲೇಜ ಗದಗ. ರಮಾಕಾಂತ ದೊಡ್ಡಮನಿ ಉಪನ್ಯಾಸಕರು ಕೆ.ವಿ.ಎಸ್.ಆರ್ ಕಾಲೇಜ ಗದಗ. ವಿಜಯ ಕಿರೇಸೂರ ಅಧ್ಯಕ್ಷರು ಗದಗ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಗದಗ. ಭಾಗವಹಿಸಲಿದ್ದಾರೆ. ಡಾ. ಸಿ.ವಿ ಬಡಿಗೇರ ಪ್ರ.ಪ್ರಾಚಾರ್ಯರು ವಿಜಯ ಲಲಿತ ಕಲಾ ಕಾಲೇಜ ಗದಗ ಇವರು ಉಪಸ್ಥಿತ ವಹಿಸಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು 9513142928 ಸಂಪರ್ಕಿಸಿ ಭಾಗವಹಿಸಲು ಅವಕಾಶವಿದೆ. ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಾಗುವದು. ವಿದ್ಯಾಥಿಗಳು ಗೋಗಲ್ ಮೀಟ ಲಿಂಕ ನೊಂದಿಗೆ ಹಾಜರಿರಲು ಪ್ರಾಚಾರ್ಯರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಸುದ್ದಿ ಓದಿ