ಗೋಕಾಕ ತಾಲೂಕಿನಲ್ಲಿ ಅನಾಹುತ ಸೃಷ್ಟಿಸಿದ ಭಾರಿ ಮಳೆ : ಗ್ರಾಮಕ್ಕೆ ಜಲಧಿಗ್ಭಂಧನ : ಮನೆಗಳು, ರಸ್ತೆಗಳು ಜಲಾವೃತ, ನದಿಯ ಪ್ರವಾಹದಂತಾದ ಗ್ರಾಮ

ಗೋಕಾಕ ತಾಲೂಕಿನಲ್ಲಿ ಅನಾಹುತ ಸೃಷ್ಟಿಸಿದ ಭಾರಿ ಮಳೆ : ಗ್ರಾಮಕ್ಕೆ ಜಲಧಿಗ್ಭಂಧನ : ಮನೆಗಳು, ರಸ್ತೆಗಳು ಜಲಾವೃತ, ನದಿಯ ಪ್ರವಾಹದಂತಾದ ಗ್ರಾಮ

ಬೆಳಗಾವಿ, ಸೆ, 5 : ಸೋಮವಾರ ಮುಂಜಾನೆ 11 ಗಂಟೆಗೆ ಸುಮಾರು ಅರ್ಧ ಗಂಟೆ ಸುರಿದ ಭಾರಿ ಮಳೆಯಿಂದಾಗಿ ಅನಾಹುತ ಸೃಷ್ಠಿಯಾಗಿದ್ದು, ಗ್ರಾಮದಲ್ಲಿಯೇ ನದಿಯಂತೆ ಕೊಡಿ ಹರಿದು ಮನೆಗಳು ಹಾಗೂ ರಸ್ತೆಗಳೆಲ್ಲಾ ಜಲಾವೃತಗೊಂಡು ಮನೆಗಳು ನೀರುಪಾಲಾದ ಘಟನೆ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ವ್ಯಾಪ್ತಿಯ ಮಾಜಿಕವಾಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.


ಜಿಲ್ಲೆಯ ಗೋಕಾಕ ತಾಲೂಕಿನ ಮಾನಿವಾಡಿ ಹಾಗೂ ಕೊಣ್ಣೂರು ಗ್ರಾಮದಲ್ಲಿ ಸುಮಾರು ಅರ್ಧ ಗಂಟೆಯವರೆಗೆ ಸುರಿದ ಭಾರಿ ಮಳೆಯಿಂದ ಗುಡ್ಡ ಪ್ರದೇಶದಲ್ಲಿ ಹೊಳೆಯ ರೀತಿ ಭಾರಿ ಪ್ರಮಾಣದ ಮಳೆ ನೀರು ಹರಿದು ಬಂದು ರಸ್ತೆಗಳಲ್ಲಿ ನದಿಯಂತೆ ಭಾಸವಾಗಿತ್ತು. ಬಳಿಕ ಈ ನೀರು ಗ್ರಾಮಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ನೋಡು ನೋಡುತ್ತಿದ್ದಂತೆ ಮನೆಗಳು ಜಲವಾವೃತಗೊಂಡವು.


ಬಳಿಕ ಈ ಸುದ್ದಿ ತಿಳಿದ ಪೊಲೀಸ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಜನರ ರಕ್ಷಣೆಯನ್ನು ಮಾಡಿದ್ದಾರೆ. ಗೋಕಾಕ ತಾಲೂಕಿನ ಕೆಲವು ಗ್ರಾಮಗಳಲ್ಲಿ ಈ ಬೃಹತಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳೆಲ್ಲಾ ನೀರು ತುಂಬಿಕೊಂಡು ವಾಹನ ಸವಾರರು ಕೂಡಾ ತಮ್ಮ ವಾಹನಗಳನ್ನು ನಡೆಸಲು ಪರದಾಡುವಂತಾಗಿದೆ. ಮನೆಗಳಿಂದ ಜನರು ರಕ್ಷಣೆ ಪಡೆಯಲು ಹೊರ ಓಡಿ ಬಂದು ರಸ್ತೆಗಳಲ್ಲಿ ನಿಲ್ಲುವಂತಾ ದೃಶ್ಯಗಳು ಕಂಡು ಬಂದವು.



ಸುದ್ದಿ ಓದಿ