ಹೆಸ್ಕಾ ಪರೀಕ್ಷೆ ಅಕ್ರಮ : ಬೆಳಗಾವಿ ಪೊಲೀಸರಿಂದ ಮತ್ತೆ ಇಬ್ಬರ ಬಂಧನ, ಲ್ಯಾಪ್‍ಟ್ಯಾಪ್, ಮೋಬಾಯಿಲ್, ಇಲೆಕ್ಟ್ರಾನಿಕ್ ಡಿವೈಸ್ ವಶಕ್ಕೆ

ಹೆಸ್ಕಾ ಪರೀಕ್ಷೆ ಅಕ್ರಮ : ಬೆಳಗಾವಿ ಪೊಲೀಸರಿಂದ ಮತ್ತೆ ಇಬ್ಬರ ಬಂಧನ, ಲ್ಯಾಪ್‍ಟ್ಯಾಪ್, ಮೋಬಾಯಿಲ್, ಇಲೆಕ್ಟ್ರಾನಿಕ್ ಡಿವೈಸ್ ವಶಕ್ಕೆ

ಬೆಳಗಾವಿ, ಸೆ, 5 : ಹೆಸ್ಕಾ ಪರೀಕ್ಷೇಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾಗಿ ಜಿಲ್ಲಾ ಪೊಲೀಸರು ಮತ್ತೆ ಇಬ್ಬರನ್ನು ಬಂಧಿಸಿ ಬಂಧಿತರಿಂದ ಲ್ಯಾಪ್‍ಟಾಪ್ ಮತ್ತು ಮೋಬೈಲ್‍ಗಳನ್ನು ವಶಪಡಿಕೊಂಡಿದ್ದಾರೆ.

      ಬಂಧಿತರನ್ನು ಬೆಳಗಾವಿ ಜಿಲ್ಲೆಯ ಶಿರಹಟ್ಟಿ ಬಿ.ಕೆ. ಗ್ರಾಮದ ಬೀರಪ್ಪ ಲಕ್ಷ್ಮಣ ಹಣಗಂಡಿ (24) ಸಾ: ಹನಗಂಡಿ ಹಾಗೂ ಸಾ: ಅರಭಾವಿಯ ಶಿವಾನಂದ ದುಂಡಪ್ಪ ಹಳ್ಳೂರ (23) ಇವರನ್ನು ಬಂಧಿಸಲಾಗಿದೆ. ಬೀರಪ್ಪ ಲಕ್ಷ್ಮಣ ಹಣಗಂಡಿ ಸಾ: ಹನಗಂಡಿ ಈತ ಖಾಸಗಿ ಕೆಲಸ ಮಾಡುತ್ತಿದ್ದು, ಈತನು ಶಿರಹಟ್ಟಿ ಬಿ.ಕೆ. ಗ್ರಾಮದಲ್ಲಿ ಹೆಸ್ಕಾ ಪರೀಕ್ಷೆಯಲ್ಲಿ ಅಕ್ರಮ ನಡೆಯಲು ಪ್ರಶ್ನೆಗಳಿಗೆ ಪ್ರಿಂಟ್ ತೆಗೆಯಲು ಲ್ಯಾಪಟಾಪ್ ತಂದವನು ಮತ್ತು ಸ್ಮಾರ್ಟ್ ವಾಚ ಖರಿದಿ ಮಾಡಿ ತಂದು ಕೊಟ್ಟವನಾಗಿದ್ದಾನೆ. ಈತನಿಂದ ಪೊಲೀಸರು ಒಂದು ಮೊಬೈಲ್ ಮತ್ತು ಒಂದು ಲ್ಯಾಪಟಾಪ ಜಪ್ತಿ ಮಾಡಿದ್ದಾರೆ.

      ಶಿವಾನಂದ ದುಂಡಪ್ಪ ಹಳ್ಳೂರ ಈತ ಇಲೆಕ್ಟ್ರಾನಿಕ್ ಡಿವೈಸ್ ತಗೆದುಕೊಂದು ಪರೀಕ್ಷೆ ಬರೆಯಲು ಹೋದವನು. ಈತನಿಂದ 5 ಮೊಬೈಲ್ ಮತ್ತು ಇಲೆಕ್ಟ್ರಾನಿಕ್ ಡಿವೈಸ್ ಜಪ್ತಿ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು ತಿಳಿಸಿದ್ದಾರೆ.


ಸುದ್ದಿ ಓದಿ