ಯಾವಾಗ ಯಾರ ಮನೆಯಲ್ಲಿ ಇರತಾರೋ ಗೊತ್ತಿಲ್ಲ : ನಿರಾಣಿ ವಿರುದ್ದ ಯತ್ನಾಳ ವ್ಯಂಗ್ಯ : ಗುಜರಾತ್ ಮಾದರಿ ರಾಜ್ಯದಲ್ಲಿ ಟಿಕೆಟ್ ಹಂಚಿಕೆಯಾಗಲಿ
ಬೆಳಗಾವಿ, ಡಿ, 12 : ಅವರು ಯಾವಾಗ ಸರ್ಕಾರದಲ್ಲಿ ಇರ್ತಾರೋ, ಯಾವಾಗ ಹೊರಗೆ ಇರ್ತಾರೋ, ಯಾವಾಗ ಯಾರ ಮನೆಯಲ್ಲಿ ಇರ್ತಾರೋ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ನಿರಾಣಿ ಬಗ್ಗೆ ವ್ಯಂಗ್ಯವಾಡಿದರು.
ಸೋಮವಾರ ನಗರದಲ್ಲಿ ನಡೆದ ಪಂವಮಸಾಲಿ ಮೀಸಲಾತಿ ಹೋರಾಟದ ಕುರಿತು ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಇದ್ದು ಪ್ರತಿಭಟನೆ ಮಾಡಲ್ಲ ಎಂದ ನಿರಾಣಿ ಲಕ್ಷ್ಮೇಶ್ವರದಲ್ಲಿ ಪಂಚಮಸಾಲಿ ಸಮಾವೇಶದಲ್ಲಿ ಭಾಗಿಯಾಗಿರುವ ವಿಚಾರವಾಗಿ ಮಾತನಾಡಿದ ಅವರು, ಈ ಪ್ರಶ್ನೆ ಯನ್ನು ಅವರಿಗೆ ಕೇಳಿ ಎಂದು ಮಾರು ಉತ್ತರ ನೀಡಿದರು.
ಪಂಚಮಸಾಲಿ ಸಮುದಾಯದ ಇಬ್ಬರು ಶ್ರೀಗಳು ಸೇರಿದ್ದರಿಂದ ಬೆಂಗಳೂರಲ್ಲಿ 10 ಲಕ್ಷ ಜನ ಸೇರಿದ್ರು ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ವಚನಾನಂದ ಶ್ರೀ ಹೇಳಿಕೆ ವಿಚಾರವಾಗಿ ಮಾತನಾಡಿ, ಈಗ ಅವರು ಬರಲಾರದೇ ಡಿ. 22ರಂದು ಎಷ್ಟು ಜನ ಸೇರ್ತಾರೆ ನೋಡೋಣ. ಡಿ. 22ರ ಸಮಾವೇಶಕ್ಕೆ ವಚನಾನಂದ ಶ್ರೀಗಳಿಗೆ ಆಹ್ವಾನಿಸುತ್ತೀರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಅವರಿಗೇಕೆ ಆಹ್ವಾನ ನೀಡೋದು ಸಮಾಜದ ಕಾರ್ಯಕ್ರಮ ಇದೆ ಬೇಕಾದರೆ ಬಂದು ವೇದಿಕೆ ಯ ಮುಂದೆ ಕೂರಲಿ. ಅವರಿಗೆ ವೇದಿಕೆಯ ಮೇಲೆ ಮಾತ್ರ ಕೂರೋಕೆ ಅವಕಾಶ ನೀಡಲ್ಲ. ವೇದಿಕೆ ಮೇಲೆ ಅವರಿಗೇಕೆ ಅವಕಾಶ ಕೊಡೋದು ಎಂದು ನುಡಿದರು. ಏರ್ಕಂಡೀಷನ್‍ನಲ್ಲಿ ಕುಳಿತ ಸ್ವಾಮೀಜಿಗಳಿಂದ ನಾವೇನೂ ಕಲಿಯಬೇಕಿಲ್ಲ ಎಂದು ವಚನಾನಂದ ಶ್ರೀಗಳ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷ ವಾಗ್ದಾಳಿ ನಡೆಸಿದರು.
ಗುಜರಾತ್ ಮಾದರಿ ಕರ್ನಾಟಕದಲ್ಲಿ ಬಿಜೆಪಿ ಟಿಕೆಟ್ ಹಂಚಿಕೆಯಾಗಲಿ : ಯತ್ನಾಳ
ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲೂ ಟಿಕೇಟ್ ಹಂಚಿಕೆ ಮಾಡುವ ಮೂಲಕ ಹೊಸ ಹೊಸ ಜನರಿಗೆ ಅವಕಾಶ ನೀಡಬೇಕು. ಕರ್ನಾಟಕದ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳುತ್ತೆ ಎಂದು ಶಾಸಕ ಬಸನಗೌಡಾ ಪಾಟೀಲ ಇಂದಿಲ್ಲಿ ವರಿಷ್ಠರಿಗೆ ಮನವಿ ಮಾಡಿದರು.
ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಟಿಕೆಟ್ ಹಂಚಿಕೆ ಮಾಡ್ತಾರೆ ಅನ್ನೋ ವಿಚಾರವಾಗಿ ಮಾತನಾಡಿ, ಈ ಸಾರಿ ಗುಜರಾತ್ ಮಾದರಿಯಲ್ಲೇ ಟಿಕೆಟ್ ಹಂಚಿಕೆ ಮಾಡ್ತಾರೆ ಬಹಳಷ್ಟು ಬದಲಾವಣೆ ಮಾಡ್ತಾರೆ. ಯಾರ ಮೇಲೆ ಆರೋಪ ಇದೆ ಅಂತವರನ್ನ ತೆಗೆಯುವುದು. ಒಂದೇ ಕುಟುಂಬದಲ್ಲಿ ಎರಡು ಮೂರು ಟಿಕೆಟ್ ಸಿಗುವುದಿಲ್ಲ. ಒಂದೇ ಕುಟುಂಬದಲ್ಲಿ ಬಹಳ ಜನ ಜಾಕೆಟ್ ಹೊಲಸಿಕೊಂಡು ಕುಳುತಿದ್ದಾರೆ. ಅಪ್ಪ, ಮಕ್ಕಳು, ಅಣ್ಣ ತಮ್ಮ ಅವರಿಗೆ ಟಿಕೆಟ್ ಸಿಗುವುದಿಲ್ಲ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಸಿಗುತ್ತದೆ ಎಂದು ನುಡಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾರಿಗೆ ಬೇಕು ಎಲ್ಲವನ್ನೂ ಬೊಮ್ಮಾಯಿ ಅವರೇ ಇಟ್ಟುಕೊಂಡು ಕೂಳ್ಳಲಿ. ಹತ್ತು ಬೇಡಾ ಎಲ್ಲ ಅವರು ಇಟ್ಟುಕೊಂಡಿರಲಿ. ಮೂರ್ನಾಲ್ಕು ತಿಂಗಳು ಉಳಿದಿದೆ ಅಷ್ಟರಲ್ಲಿ ಎನೂ ಅಭಿವೃದ್ಧಿ ಮಾಡೋಕೆ ಆಗುತ್ತೆ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಮಂತ್ರಿ ಆಗಬೇಕು ಅಂತಾ ಸುಮ್ಮನಿದ್ದಾರೆ.
ಸಮೀಕ್ಷೆಯಲ್ಲಿ ಬಿಜೆಪಿ ಹಿನ್ನಡೆ ಆಗ್ತಿದೆಯಾ ಎಂಬ ವಿಚಾರವಾಗಿ ಮಾತನಾಡಿ, ಗುಜರಾತ್‍ನಲ್ಲಿ, ಉತ್ತರ ಪ್ರದೇಶದಲ್ಲಿ ಹಾಗೇ ಹೇಳಿದ್ರೂ ಬಿಜೆಪಿ ಬಂತೂ. ಕರ್ನಾಟಕದಲ್ಲಿ ನರೇಂದ್ರ ಮೋದಿ ಪ್ರವಾಸ ಮಾಡುತ್ತಾರೆ. ಯಡಿಯೂರಪ್ಪ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರನ್ನಾಗಿ ಮಾಡಿದ್ದಾರೆ. ಯಡಿಯೂರಪ್ಪ ವಿಚಾರದಲ್ಲಿ ಶಾಸಕ ಯತ್ನಾಳ ಸಾಪ್ಟ್ ಕಾರ್ನರ್ ತೋರಿಸಿದರು. ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಕ್ಷೇತ್ರ ಸಂಚಾರ ಮಾಡಬೇಕು. ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಂಚಾರ ಮಾಡ್ತಾರೆ. ನಾನು ಕ್ಷೇತ್ರದಲ್ಲಿ ಸಂಚಾರ ಮಾಡುವ ಅಗತ್ಯವಿಲ್ಲ ರಾಜ್ಯಾದ್ಯಂತ ಸಂಚಾರ ಮಾಡ್ತೇನಿ ಎಂದು ತಿಳಿಸಿದರು.