ಅಂಗಡಿಗಳ ಮೇಲೆ ತಂಬಾಕು ದಾಳಿ, ದಂಡ
ಮುಂಡಗೋಡ:ತಾಲೂಕಿನ ಇಂದೂರ ಗ್ರಾಮದಲ್ಲಿ ತಾಲೂಕು ಮಟ್ಟದ ತನಿಖಾದಳದ ಸದಸ್ಯರು ಅಂಗಡಿಗಳ ಮೇಲೆ ತಂಬಾಕು ದಾಳಿ ನಡೆಸಿ ದಂಡ ವಿಧಿಸಿ ಪ್ರಕರಣ ದಾಖಲಿಸಿಕೊಂಡು ಕೋಟ್ಪಾ-2003 ಆಕ್ಟ್ ಕುರಿತು ಜಾಗೃತಿ ಮೂಡಿಸಿದರು.
ತಹಶೀಲ್ದಾರ ಶಂಕರ ಗೌಡಿ ಮಾರ್ಗದರ್ಶನದಲ್ಲಿ ತಾಲೂಕು ಮಟ್ಟದ ತನಿಖಾದಳದ ಸದಸ್ಯರು ಅಂಗಡಿಗಳ ಮೇಲೆ ದಾಳಿ ನಡೆಸಿ 560ರೂ. ದಂಡ ವಿಧಿಸಿದರು. 5 ಅಂಗಡಿಕಾರರ ಮೇಲೆ ಪ್ರಕರಣ ದಾಖಲಿಸಿಕೊಂಡು ಎಚ್ಚರಿಕೆ ನೀಡಿದರು. ನಾಮಫಲಕಗಳನ್ನು ಅಳವಡಿಸದ ಅಂಗಡಿಕಾರರಿಗೆ ಕಡ್ಡಾಯವಾಗಿ ನಾಮಫಲಕ ಅಳವಡಿಸುವಂತೆ ಸೂಚಿಸಿದರು.
ದಾಳಿಯಲ್ಲಿ ಡಾ.ಭರತ ಡಿ.ಟಿ, ಎಸ್.ಎಸ್.ಪಟ್ಟಣಶೆಟ್ಟಿ, ಎನ್.ಎಚ್.ಹಿರೇಮಠ, ಜಾಕೀರ ಶಹಾ, ಪ್ರಸಾದ ಎ, ಕೆಂಚಪ್ಪ ಜಾಲಿಕಡ್ಡಿ, ಎಸ್.ಎನ್.ಕೊಟಗುಣಶಿ, ರತ್ನಾ ಕರಗಿನಕೊಪ್ಪ, ಹೇಮಲತಾ ನಾಯ್ಕ, ಸುರೇಖಾ ಅಣ್ವೇಕರ, ರೂಪಾ ಹೆಬ್ಬಳ್ಳಿ ಇದ್ದರು. ದಂಡದ ಹಣವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಜಂಟಿ ಖಾತೆ ನಂ.31581678198ಗೆ ಸಂದಾಯ ಮಾಡಲಾಯಿತು ಎಂದು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ತಿಳಿಸಿದರು.