ತಂಬಾಕು ಸೇವನೆ ಮಾರಣಾಂತಿಕ ಕ್ಯಾನ್ಸರ್ ಖಾಯಿಲೆಗೆ ಆಹ್ವಾನ: ಲಿಂಗದಾಳ
ಗದಗ 09: ಇಂದು ಜನರು ಹೆಚ್ಚು ತಂಬಾಕು ಸೇವೆಗೆ ವ್ಯಸನಿಗಳಾಗುತ್ತಿರುವುದರಿಂದ ಸಮುದಾಯದಲ್ಲಿ ಕ್ಯಾನ್ಸರ್ ಖಾಯಿಲೆಯ ತೀವ್ರತೆ ಹೆಚ್ಚಾಗುತ್ತಿದೆ ಆದ್ದರಿಂದ ಜನರು ತಂಬಾಕು ಸೇವನೆ ಮಾಡಿ ಮಾರಣಾಂತಿಕ ಕ್ಯಾನ್ಸರ್ ರೋಗವನ್ನು ತಾವೇ ಆಹ್ವಾನಿಸಿಕೊಳ್ಳುತ್ತಿರುವಿರಿ ಆದ್ದರಿಂದ ತಂಬಾಕು ಸೇವನೆ ಬೇಡ ಎಂದು ಆರೋಗ್ಯ ನೀರೀಕ್ಷಣಾಧಿಕಾರಿ ಸಿದ್ದಪ್ಪ ಎನ್ ಲಿಂಗದಾಳ ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಟಗೇರಿ ಗದಗ ಇವರ ಸಂಯುಕ್ತಾಶ್ರಯದಲ್ಲಿ ಅಡವಿಸೋಮಾಪೂರ ಸಣ್ಣತಾಂಡೆಯಲ್ಲಿ ಏರಿ್ಡಸಲಾಗಿದ್ದ ವಿಶ್ವ ಕ್ಯಾನ್ಸರ ದಿನಾಚರಣೆ ಕಾರ್ಯಕ್ರಮದಲ್ಲಿ “ಆರೈಕೆಯ ಅಂತರವನ್ನು ಕಡಿತಗೊಳಿಸಿ” ಎಂಬ ಘೋಷವಾಕ್ಯದೊಂದಿಗೆ ಅವರು ಮಾತನಾಡಿದರು.
ಇಂದು ಜನರು ತಮಗರಿವಿಲ್ಲದಂತೆ ತಂಬಾಕು, ಗುಟಕಾ ಸಿಗೇಟ್ ಮುಂತಾದ ವ್ಯಸನಗಗಳಿಗೆ ದಾಸರಾಗಿ, ಕ್ಯಾನ್ಸರ್ ರೋಗಕ್ಕೆ ನೀವೇ ತುತ್ತಾಗುತ್ತಿದ್ದಿರಿ ಆರಿಂದ ತಂಬಾಕು ಸೇವನೆ ಇಂದೇ ನಿಲ್ಲಿಸಿರಿ, ಮತ್ತು ತಮ್ಮ ಜೀವನ ಶೈಲಿಯ ಒತ್ತಡದ ಬದುಕನ್ನು ಬದಲಾಯಿಸಿಕೊಂಡು ಮತ್ತು ಉತ್ತಮ ಆರೋಗ್ಯ ಸಂಪತ್ತನ್ನು ವೃದ್ದಿಸಿಕೊಳ್ಳಿರಿ, ನೀವು ನಿಮ್ಮ ಕುಟುಂಬದ ಅಭಿವೃದ್ದಿಗಾಗಿ ಬದಲಾಗಿ ಮತ್ತು ಆರೋಗ್ಯ ಇಲಾಖೆ ಎನ್.ಸಿ.ಡಿ. ಕಾರ್ಯಕ್ರಮದಲ್ಲಿ ತಪಾಸಣೆ ಮಾಡಿಸಿಕೊಂಡು ಪ್ರಥಮ ಹಂತದಲ್ಲಿಯೇ ರೋಗಕ್ಕೆ ಚಿಕಿತ್ಸೆಯನ್ನು ಪಡೆಯಬೇಕೆಂದು ಹೇಳಿದರು.
ಸಮುದಾಯ ಆರೋಗ್ಯಾಧಿಕಾರಿಗಳಾದ ಲೂದಿಯಾ ಕೆ ಮಾತನಾಡಿ ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗವು ಬರುವುದೆಂದು ತಮಗೆಲ್ಲಾ ಗೊತ್ತಿದ್ದರು ಯಾಕೆ? ತಂಬಾಕು ಸೇವಿಸುತ್ತಿದ್ದಿರಿ, ನಿಮ್ಮ ಕುಟುಂಬದ ಒಳಿತಿಗಾಗಿಯಾದರು ತಾವು ತಂಬಾಕು ಸೇವನೆ ನಿಲ್ಲಿಸಿರಿ. ರಾತ್ರಿ ಮಲಗುವ ಸಮಯದಲ್ಲಿ ನಿಮ್ಮ ಬಾಯಿಯನ್ನು ಸ್ವಚ್ಛವಗಿ ತೊಳೆದುಕೊಳ್ಳಿರಿ ಯಾಕೆಂದರೆ ಕ್ಯಾನ್ಸರ್ ರೋಗವು ದೇಹದ ಯಾವುದೇ ಭಾಗಕ್ಕೆ ಬರಬಹುದು ಆದ್ದರಿಂದ ತಮಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿ ವೈಧ್ಯರಲ್ಲಿ ಪರೀಕ್ಷಿಸಿಕೊಳ್ಳಿರಿ, ಅಥವಾ ನಮ್ಮ ಕ್ಷೇಮ ಆರೋಗ್ಯ ಕೇಂದ್ರಕ್ಕೆ ಬನ್ನಿರೆಂದರು.
ಮತ್ತು ಕ್ಯಾನ್ಸರ್ ಒಂದು ಅಸಾಂಕ್ರಾಮಿಕ ಕಾಯಿಲೆಯಾಗಿದ್ದು ಅದು ಒಬ್ಬರಿಂದ ಒಬ್ಬರಿಗೆ ಹರಡುವದಿಲ್ಲ. ಅಸಾಂಕ್ರಾಮಿಕ ಕಾಯಿಲೆಗಳಲ್ಲಿ ಮೊದಲನೇಯದಾಗಿ ಹ್ಲದಯ ಸಂಬಂಧಿ ಕಾಯಿಲೆಯಿಂದ ಹೆಚ್ಚಿನ ಜನ ಮರಣ ಹೊಂದುತ್ತಿದ್ದು, ನಂತರ ಎರಡನೇಯದಾಗಿ ಕ್ಯಾನ್ಸರ್‌ನಿಂದಾಗಿ ಜನರು ಸಾವನ್ನಪ್ಪುತ್ತಿದ್ದಾರೆ. ಪೌಷ್ಠೀಕ ಆಹಾರ ಸೇವೆ ಮತ್ತು ವೈಧ್ಯರಲ್ಲಿ ತಪಾಸಣೆ ಮಾಡಿಕೊಳ್ಳುವುದನ್ನು ಯಾರು ಮರೆಯಬೇಡಿರಿ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿಯ ಸದಸ್ಯರಾದ ದೇವಕ್ಕ ಲಾಲಪ್ಪ ಲಮಾಣಿ ಹಾಗೂ ಸದಸ್ಯರಾದ ವೆಂಕಟೇಶ ಉದ್ಘಾಟಿಸಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಎಫ್.ಎನ್.ಅತ್ತಿಕಟ್ಟಿ ಸಹಾಯಕಿ ಸವಿತಾ ಲಮಾನಿ ಆಶಾ ಕಾರ್ಯಕರ್ತೆ ಮಂಜುಳಾ ಆರಿ ಮುಂತಾದವರು ಉಪಸ್ಥಿತರಿದ್ದರು.