ಆಫ್ಘಾನಿಸ್ತಾನದಲ್ಲಿ ಮೂರು ಪ್ರತ್ಯೇಕ ಸ್ಫೋಟ: ಇಬ್ಬರು ಆತ್ಮಾಹುತಿ ಬಾಂಬರ್‌ಗಳು ಸೇರಿ 9 ಮಂದಿ ಸಾವು
ಕಾಬೂಲ್, ಅ 7: ಆಫ್ಘಾನಿಸ್ತಾನದಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಮುಂಜಾನೆ ನಡೆದ ಮೂರು ಪ್ರತ್ಯೇಕ ಸ್ಫೋಟಗಳಲ್ಲಿ ಇಬ್ಬರು ಆತ್ಮಾಹುತಿ ಬಾಂಬರ್‌ಗಳು ಸೇರಿದಂತೆ 9 ಜನರು ಸಾವನ್ನಪ್ಪಿದ್ದು, ಇತರ ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಪೂರ್ವ ಕಪಿಸಾ ಪ್ರಾಂತ್ಯದ ತಾಗಾಬ್ ಜಿಲ್ಲೆಯ ಖಿಶಾ ಚೆನಾ ಎಂಬಲ್ಲಿರುವ ತಾಲಿಬಾನ್ ಉಗ್ರರ ವಾಹನದಲ್ಲಿ ಅಡಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಪರ್ಶಿಸಿದ ನಂತರ ಓರ್ವ ಮಹಿಳೆ ಸೇರಿದಂತೆ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ.
ಸ್ಫೋಟದಿಂದ ವಾಹನ ನಾಶವಾಗಿದೆ ಎಂದು ಪ್ರಾಂತೀಯ ಪೊಲೀಸ್ ವಕ್ತಾರ ಶೈಕ್ ಶುರಿಶ್ ಕ್ಸಿನ್ಹುವಾ ಸುದ್ದಿಸಂಸ್ಥೆಗೆ ಅವರಿಗೆ ತಿಳಿಸಿದ್ದಾರೆ.
ದಕ್ಷಿಣ ಹೆಲ್ಮಾಂಡ್ ಪ್ರಾಂತ್ಯದಲ್ಲಿ ನಹ್ರಿ ಸರ್ರಾಜ್ ಜಿಲ್ಲೆಯ ಯಾಖಚಲ್ ಪ್ರದೇಶದಲ್ಲಿ ತಾಲಿಬಾನ್ ಆತ್ಮಾಹುತಿ ಬಾಂಬರ್ ಭದ್ರತಾ ತಪಾಸಣಾ ಕೇಂದ್ರದ ಮೇಲೆ ಕಾರ್ ಬಾಂಬ್ ದಾಳಿ ನಡೆಸಿದ ನಂತರ ನಾಲ್ವರು ಆಫ್ಘನ್ ಸೈನಿಕರು ಮತ್ತು ದಾಳಿಕೋರರು ಸಾವನ್ನಪ್ಪಿದ್ದಾರೆ.
ನೆರೆಯ ಕಂದಹಾರ್ ಪ್ರಾಂತ್ಯದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ, ತಾಲಿಬಾನ್ ಆತ್ಮಾಹುತಿ ಬಾಂಬರ್ ಮರೂಫ್ ಜಿಲ್ಲೆಯ ಆಫ್ಘನ್ ಗಡಿಯ ಭದ್ರತಾ ಪಡೆಯ ತಪಾಸಣಾ ಕೇಂದ್ರದ ಮೇಲೆ ನಡೆಸಿದ ದಾಳಿಯಲ್ಲಿ ಇಬ್ಬರು ಗಡಿ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ.