ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ
ರಾಮದುರ್ಗ 20: ಉಬಯ ಸರಕಾರಗಳು ವಿಕಲಚೇತನರಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿ ಸ್ವಾವಲಂಬಿ ಜೀವನ ನಡೆಸಲು ಅನುಮಾಡಿಕೊಡುತ್ತವೆ ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಪಟ್ಟಣದ ತಾಲೂಕ ಪಂಚಾಯತ ಆವರಣದ ಶಾಸಕರ ಕಛೇರಿಯಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಂದಾ ವಿಕಲಚೇತನರಿಗೆ 15 ತ್ರೀಚಕ್ರ ವಾಹನಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದ ಅವರು ಸಯಂ ಉದ್ಯೋಗ ಮಾಡಲು ವಿಕಲಚೇತನರು ಮುಂದೆ ಬರಬೇಕು, ರಸ್ತೆ ಮೇಲೆ ವಾಹನ ಚಲಿಸುವಾಗ ರಸ್ತೆ ನಿಯಮಗಳನ್ನು ಪಾಲಿಸುತ್ತಾ ವಾಹನವನ್ನು ಸುಸ್ಥಿತಿಯಲ್ಲಿಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲೇಶಿ ಯಾದವಾಡ ಮಾತನಾಡುತ್ತಾ ರಸ್ತೆ ನಿಯಮಗಳನ್ನು ಪಾಲಿಸದೆ ಯುವಕರು ಬೇಕಾ ಬಿಟ್ಟಿ ವಾಹನ ಚಾಲನೆ ಮಾಡುವದರಿಂದಾ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ, ಎಲ್ಲರೂ ರಸ್ತೆ ನಿಯಮಗಳುನ್ನು ಕಡ್ಡಾಯವಾಗಿ ಪಾಲಿಸಿದರ ನಿಮ್ಮ ಕುಟುಂಬಕ್ಕು ಹಾಗೂ ಇತರರಿಗೂ ಒಳ್ಳಯದು ಎಂದು ಸಲಹೆ ನೀಡಿದರು.
ರಸ್ತೆ ಮೇಲೆ ದ್ವಿಚಕ್ರ ಅಥವಾ ತ್ರಿಚಕ್ರಗಳನ್ನು ಚಾಲನೆ ಮಾಡುವಾಗ ಕಡ್ಡಾಯವಾಗಿ ವಾಹನದ ನೊಂದಣಿ ಹಾಗೂ ವಿಮೆಯ ಪತ್ರಗಳನ್ನು ಗಾಡಿಯ ಜೋತೆ ಇಡುವದರೊಂದಿಗೆ ಹೆಲ್ಮೇಟ್ ಕೊಡ್ಡಾಯವಾಗಿ ಧರಿಸಿ ನಿಮ್ಮ ಜೀವನದ ರಕ್ಷಣೆ ಮಾಡಿಕೊಳ್ಳಬೇಕೆಂದು ಸಿಪಿಐ ಶಶಿಕಾಂತ ವರ್ಮಾ ಹೇಳಿದರು. ಬಿಜೆಪಿ ಮಂಡಲ ಅಧ್ಯಕ್ಷ ರಾಜು ಬೀಳಗಿ, ಪರುಸಭೆ ಅಧ್ಯಕ್ಷ ಶಂಕರ ಬನ್ನೂರ, ಉಪಾಧ್ಯಕ್ಷ ರಾಘು ದೊಡಮನಿ, ಹಾಗೂ ಸದಸ್ಯರು, ತಹಶೀಲ್ದಾರ ಗೀರಿಶ ಸ್ವಾಧಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮುರಳೀದರ ದೇಶಪಾಂಡೆ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ಮಂಜುಳಾ ರಗಟೆ, ತಾಲೂಕಾ ವಿಕಲಚೇತನರ ಪುನರವಸತಿ ಕಾರ್ಯಕರ್ತೆ ಗೀತಾ ಅಬ್ಬಿಗೇರಿ ಹಾಗೂ ಇತರರು ಉಪಸ್ಥಿತರಿದ್ದರು.