ಮಹಲಿಂಗಪುರ

ಸಂಘಟನೆಗಳನ್ನು ಒಡೆಯುವವರು ತಲೆಹಿಡುಕರು : ಗುಂಜಿಗಾವಿ

ಸಂಘಟನೆಗಳನ್ನು ಒಡೆಯುವವರು ತಲೆಹಿಡುಕರು : ಗುಂಜಿಗಾವಿ

ಮಹಾಲಿಂಗಪುರ: ಸಂಘಟನೆ ಎಂಬುದು ಸ್ವಾರ್ಥದ ತೆವಲಿಗಾಗಿ ಅಲ್ಲ, ರಾಷ್ಟ್ರ, ಧರ್ಮ, ಮಾತೆಯರ ರಕ್ಷಣೆಗಾಗಿ. ಸಂಘಟನೆಗಳಿಂದ ಬದುಕು ಸಾರ್ಥಕ, ಸಂಘಟನೆಗಳನ್ನು ಒಡೆಯುವವರು ತಲೆಹಿಡುಕರು ಎಂದು ಕರ್ನಾಟಕ ರಾಜ್ಯ ಶ್ರೀರಾಮ ಸೇನಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾವಿ ಹೇಳಿದರು.  

ಸಮೀಪದ ರನ್ನ ಬೆಳಗಲಿಯ ಬಂದ ಲಕ್ಷ್ಮೀ ದೇವಸ್ಥಾನದಲ್ಲಿ ಶ್ರೀರಾಮ ಸೇನಾ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಶ್ರೀರಾಮ ಸೇನೆ ಮತ್ತು ದುರ್ಗಾ ಸೇನಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ತಮ್ಮ  ದಿಕ್ಸೂಚಿ ಭಾಷಣದಲ್ಲಿ ಅವರು,  ನಮ್ಮ ದೇವಾಲಯಗಳು ಮುಂದೆ ಮಸೀದಿ, ಚರ್ಚ್‌ ಗಳಾಗಿ ಬದಲಾಗದಿರಲಿ, ಪಕ್ಷಕ್ಕಾಗಿ, ಜಾತಿಗಾಗಿ ಸಂಘಟನೆ ಬೇಡ, ದೇಶಕ್ಕಾಗಿ ಧರ್ಮಕ್ಕಾಗಿ ಸಂಘಟನೆ. ಹಿಂದೂ ಸಮಾಜಕ್ಕೆ ಭಯ ಉಂಟು ಮಾಡಲು ಪುಟ್ಟ ಪುಟ್ಟ ಕಂದಮ್ಮಗಳನ್ನು ಜೀವಂತ ಸಮಾಧಿ ಮಾಡಲಾಗಿದೆ. ಪ್ರತಿ ಆಲದ ಮರಕ್ಕೆ ನೂರಾರು ಹಿಂದೂ ಯುವಕರನ್ನು ನೇಣಿಗೇರಿಸಲಾಗಿದೆ ಆದರೂ ಸಂಘಟನೆ, ಹೋರಾಟ ನಿಂತಿಲ್ಲ, ಈಗಲೂ ಯಾವುದೇ ಭಯ ಬೇಡ, ಧರ್ಮರಕ್ಷಣೆಗಾಗಿ, ನಿಮ್ಮ ಅಕ್ಕ, ತಂಗಿಯರ ರಕ್ಷಣೆಗಾಗಿ ಕುಂಟು ನೆಪ ಹೇಳದೆ ಯುವಕರು ಒಟ್ಟಾಗಿ ಬನ್ನಿ ಎಂದರು.  

ಪ್ರಖರ ವಾಗ್ಮಿ ಭಾಗ್ಯಶ್ರೀಗೌಡ ಚಡಚಣ ಮಾತನಾಡಿ, ನಾರಿಯನ್ನು ದೇವತೆಯಂತೆ ಪೂಜಿಸುವ ಜಗತ್ತಿನ ಏಕೈಕ ಧರ್ಮ ಹಿಂದೂ ಧರ್ಮ. ಇಂತಹ ನಮ್ಮ ಸನಾತನ ಧರ್ಮದ ಜಯಂತಿಗಳಿಗೆ, ಕಾರ್ಯಕ್ರಮಗಳಿಗೆ ಪೊಲೀಸರ ಅನುಮತಿ ಬೇಕು ಆದರೆ ನಮ್ಮ ದೇಶವನ್ನು ಕೊಳ್ಳೆ ಹೊಡೆದವರ ಜಯಂತಿಗೆ ಮತ್ತು ನಮಾಜು ಮಾಡಲು ಅನುಮತಿಯ ಅವಶ್ಯಕತೆ ಇಲ್ಲದಿರುವುದು ದೊಡ್ಡ ದುರಂತ, ಇದು ಬದಲಾಗಬೇಕು. ಅಂದು ಒಬ್ಬ ಓರಂಗಜೇಬ, ಒಬ್ಬ ಆದಿಲ್ ಶಾಹಿ ಇದ್ದರು ಆದರೆ ಇಂದು ಮನೆ ಮನೆಯಲ್ಲಿ ಓರಂಗಜೇಬ, ಆದಿಲ್ ಶಾಹಿ ಇದ್ದಾರೆ ಹಾಗಾಗಿ ಮನೆ ಮನೆಯಲ್ಲಿ ಜೀಜಾಬಾಯಿ, ಶಿವಾಜಿಯಂತಹ ದೇಶಪ್ರೇಮಿ, ಧರ್ಮಪ್ರೇಮಿಗಳು ಹುಟ್ಟಬೇಕು,  ನಮ್ಮ ದೇಶದ ಇತಿಹಾಸವನ್ನು ಮುಚ್ಚಿ ಹಾಕಿರುವ ಮೆಕಾಲೇ ಶಿಕ್ಷಣ ತೊಲಗಬೇಕೆಂದರು.  

ಅಂತರಾಷ್ಟ್ರೀಯ ಯೋಗ ಗುರು ಯೋಗಿ ರಾಜಶ್ರೀ ಸದಾಶಿವ ಗುರೂಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.  

ಶ್ರೀರಾಮ ಸೇನಾ ರನ್ನಬೆಳಗಲಿ ಘಟಕದ ನೂತನ ಅಧ್ಯಕ್ಷರಾಗಿ ಮಹಾಂತೇಶ ಜೀರಗಾಳ, ಕಾರ್ಯಧ್ಯಕ್ಷರಾಗಿ ಮಹಾಲಿಂಗಪ್ಪ ಹೊಸಪೇಟಿ ಮತ್ತು ದುರ್ಗಾ ಸೇನೆಯ ಅಧ್ಯಕ್ಷರಾಗಿ ಅನ್ನಪೂರ್ಣೇಶ್ವರಿ ಮಂಡಿ ಮತ್ತು ಕಾರ್ಯಾಧ್ಯಕ್ಷರಾಗಿ ವೀಣಾ ಬಡಿಗೇರ ಪದಗ್ರಹಣ ಮಾಡಿದರು.  

ಶ್ರೀರಾಮ ಸೇನಾ ಜಿಲ್ಲಾ ಉಪಾಧ್ಯಕ್ಷ ಅನಿಲ ಕಿರಿಕಿರಿ, ಮುಧೋಳ ತಾಲೂಕ ಅಧ್ಯಕ್ಷ ಅರ್ಜುನ ನಾಗರಾಳ, ಮಹಾಲಿಂಗಪುರ ವಿಭಾಗೀಯ ಸಂಚಾಲಕ ಈಶ್ವರ ಕ್ವಾನ್ಯಾಗೋಳ, ಕಾರ್ಯಾಧ್ಯಕ್ಷ ವಿಷ್ಣುಗೌಡ ಪಾಟೀಲ, ಬಸವರಾಜ ದೊಡ್ಡಹಟ್ಟಿ, ಸದಾಶಿವ ಸಂಕ್ರಟ್ಟಿ, ಪರಮಾನಂದ ಕ್ವಾನ್ಯಾಗೋಳ, ಮಹಾಂತೇಶ ಜೀರಗಾಳ, ಗಂಗಾಧರ, ಮಂಜು, ಕೃಷ್ಣ, ಮಹಾದೇವ ಧರ್ಮಟ್ಟಿ, ಮಹದೇವ ಹೊಸಪೇಟಿ, ಸಂತೋಷ ಹೂಗಾರ, ನೀಲಕ್ಕ, ರೇಖಾ ಬಳೆಗಾರ, ಸಿದ್ದು, ಮಹಾಲಿಂಗ ಮಾಳಿ ಇತರರಿದ್ದರು.  

ನಾಗವೇಣಿ ನಾಗರಾಳ ಪ್ರಾರ್ಥಿಸಿ, ಶಿಕ್ಷಕ ಎಚ್‌.ಜಿ.ಚಂದಪ್ಪನವರ ನಿರೂಪಿಸಿದರು. 


ಸುದ್ದಿ ಓದಿ