ಎರಡೇ ನಿಮಿಷದಲ್ಲಿ ಫಾಸ್ಟ್ ಫುಡ್ ಸಿದ್ಧಪಡಿಸುತ್ತೆ ಈ ರೊಬೊರ್ಟ್!
ಕ್ಯಾಲಿಫೋರ್ನಿಯಾ: ಅಕ್ಟೋಬರ್ 04: ಇದೀಗ ಫಾಸ್ಟ್ ಫುಡ್ ಮತ್ತು ಆನಿಯನ್ ರಿಂಗ್ಸ್ ತಂತ್ರಜ್ಞಾನ ರೂಪ ಪಡೆದುಕೊಳ್ಳುತ್ತಿದೆ. ಹೌದು ಅತ್ಯುತ್ತಮ ತಂತ್ರಜ್ಞಾನದ ಮೂಲಕ ಫಾಸ್ಟ್ ಫುಡ್ ಮತ್ತು ಆನಿಯನ್ ರಿಂಗ್ಸ್ ಸೇರಿದಂತೆ ಹಲವನ್ನು ಫಾಟಫಟ್ ಎಂದು ತಯಾರು ಮಾಡಲು ಯೋಚಿಸಿದೆ ದಕ್ಷಿಣ ಕ್ಯಾಲಿಫೋರ್ನಿಯಾದ ಕಂಪನಿ.
ಆ ಕಾರಣದಿಂದ ಫ್ರೆಂಚ್ ಫ್ರೈಸ್ ಹಲವು ಕರಿದ ಪದಾರ್ಥಗಳ ತಯಾರಿಕೆಗೆ ಒಂದು ರೊಬೊರ್ಟ್ ಅನ್ನು ಕಂಡು ಹಿಡಿದಿದೆ. ಅದರ ಹೆಸರೇ ಫ್ಲಿಪ್ಪಿ ೨ ರಾಬರ್ಟ್. ಇದು ತಾನಾಗಿಯೇ ಫ್ರೆಂಚ್ ಫ್ರೈಸ್, ಆನಿಯನ್ ರಿಂಗ್ಸ್ ಸೇರಿ ಹಲವು ಎಣ್ಣೆಯುಕ್ತ ಖಾದ್ಯಗಳನ್ನು ತಯಾರಿಸುತ್ತದೆ.
ಕ್ಯಾಮೆರಾಗಳು ಮತ್ತು ಕೃತಕ ಬುದ್ಧಿಮತ್ತೆಯಿಂದ ನಿರ್ದೇಶಿಸಲ್ಪಟ್ಟ ಆಟೋ ಪ್ಲಾಂಟ್‌ಗಳಂತಹ ದೊಡ್ಡ ರೊಬೊಟಿಕ್ ಫ್ರೀಜರ್ ನಿಂದ ಫ್ರೆಂಚ್ ಫ್ರೈಸ್ ಮತ್ತು ಇತರ ಆಹಾರಗಳನ್ನು ತೆಗೆದುಕೊಂಡು, ಅವುಗಳನ್ನು ಬಿಸಿ ಎಣ್ಣೆಯಲ್ಲಿ ಅದ್ದಿ, ನಂತರ ಸಿದ್ಧಪಡಿಸಿದ ಉತ್ಪನ್ನವನ್ನು ಟ್ರೇಗೆ ಇಡುತ್ತದೆ.
ಫ್ಲಿಪ್ಪಿ 2 ಏಕಕಾಲದಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಅಡುಗೆ ಸಿಬ್ಬಂದಿಯ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಡ್ರೈವ್-ಥ್ರೂ ವಿಂಡೋಗಳಲ್ಲಿ ಆರ್ಡರ್ ವಿತರಣೆಯನ್ನು ವೇಗಗೊಳಿಸುತ್ತದೆ ಎಂದು ಮಿಸೊ ಹೇಳುತ್ತಾರೆ.