ಉತ್ಸಾಹದಿಂದ ಮಾಡೋಣವೇ ಈ ಕೆಲಸ
-ಪ್ರಭಾ .ಅ. ಪಾಟೀಲ
ಬೆಳಗಾವಿ
ಜೀವನವೆಂದರೆ ಅದು ಉತ್ಸಾಹದ ಚಿಲುಮೆ ಅಂದು ಕೊಳ್ಳುವವರು ಕೆಲವು ಜನ ಸಣ್ಣ ಸಣ್ಣ ಕೆಲಸದಲ್ಲೂ ಖುಷಿ ಮತ್ತು ಉತ್ಸಾಹದಿಂದ ಮಾಡುವವರು ಇನ್ನೂ ಕೆಲವು ಜನ ನನ್ನ ಸ್ನೇಹಿತೆಯೊಬ್ಬಳು ಇದ್ದಾಳೆ ಎಲ್ಲದಕ್ಕೂ ಬೇಜಾರು ಶ್ರೀಮಂತರೂ ಇದ್ದಾರೆ ಆದರೂ ಅವಳಿಗೆ ಉತ್ಸಾಹವೇ. ಇಲ್ಲ
ಎಲ್ಲದಕ್ಕೂ ಬೇಜಾರು ಅಯ್ಯೋ ಅದರಲ್ಲೇನಿದೆ ಇದರಲ್ಲೇನಿದೆ ಕುಂತರೆ ಬೇಸರ ನಿಂತರೆ ಬೇಸರ ಮನೆ ಕೆಲಸ ಮಾಡಲು ಬೇಡ ಹೊರಗೆ ಹೋಗಲು ಬೇಡ ಟೂರ್ ಹೋಗಲು ಬೇಡ ಸಿನಿಮಾ ನೋಡಲು ಬೇಡ ಏನೂ ಬೇಡ ಕೆಲಸದವರು ಮಾಡಿದ ಕೆಲಸಕ್ಕೂ ಏನಾದರೂ ಕೊಂಕು ಮಾತು ಗಂಡ ಮಕ್ಕಳಿಗಂತೂ ಅವಳೊಂದು ಸಮಸ್ಯೆ ಆಗಿದ್ದಾಳೆ ನನಗು ಆಗಾಗ ಏನಪ್ಪಾ ಇವಳು ಈ ರೀತಿ ಅಂತ ಅನಿಸುತ್ತೆ ಅದೇ ನಾವು ಮಾಡುವ ಪ್ರತಿಯೊಂದು ಕೆಲಸವೂ ಉತ್ಸಾಹದಿಂದ ಮಾಡಿದರೆ ಎಷ್ಟು ಚಂದ ಅಲ್ಲವೇ
ಉದಾಹರಣೆ ಗೇ,, ಈಗ ಒಬ್ಬ ಹೆಣ್ಣುಮಗಳು ತುಂಬು ಗಭರ್ಿಣಿ ಆದರೆ ಹುಟ್ಟಲಿರುವ ಮಗುವಿಗಾಗಿ ಸ್ವೀಟರ್ ಹೆಣೆಯುತ್ತೀರುತ್ತಾಳೆ. ಅವರ ಅತ್ತೆ ಬಂದು""ಯಾಕಮ್ಮ ಇಷ್ಟು ಕಷ್ಟ ಪಡುತ್ತೆ ಪೇಟೆಯಲ್ಲಿ ಬೇಕಾದಷ್ಟು ಸಿಗುತ್ತವೆ ಎನ್ನುತ್ತಾರೆ ಆದರೆ ಅವಳಿಗೆ ಹುಟ್ಟಲಿರುವ ಮಗುವಿಗೆ ಸ್ವೀಟರ್ ಹೆಣೆಯುವುದು ಪ್ರೀತಿಯ ಕೆಲಸ ಆಕೆಗೆ ಯಾವ ತ್ರಾಸು ಆಗುತ್ತಿಲ್ಲ ರಾತ್ರಿಯಾಗಿದ್ದು ಗೊತ್ತಿಲ್ಲ ಬೆಳಗಿ ಆಗಿದ್ದು. ತಿಳಿದಿಲ್ಲ ಅದು ಪ್ರೀತಿ ಹೀಗೆ ಯಾವುದೇ ಕೆಲಸ ಮಾಡಲು ಉತ್ಸಾಹ ಇದ್ದರೆ ಆ ಕೆಲಸ ಸರಳವಾಗುತ್ತದೆ ಉತ್ಸಾಹವಿಲ್ಲ ಕಠಿಣವಾಗುತ್ತದೆ ಬದುಕಿನಲ್ಲಿ ಉತ್ಸಾಹ ಬಹಳ ಮುಖ್ಯ ಬಹಳ ಮಹತ್ವದ್ದು
ಒಬ್ಬ ಮೇಧಾವಿ ಹೇಳುತ್ತಾರೆ ಯಾವುದೇ ಕೆಲಸ ಮಾಡಬೇಕಾದರೆ ಅದು ನನಗೆ ಆಗುವುದಿಲ್ಲ ಅಂತ ಮನಸ್ಸಿನೊಳಗೆ ಅಂದುಕೊಳ್ಳಬೇಡ ಇದೇನು ಮಹಾ ಎಂದುಕೊಳ್ಳಿ ಉತ್ಸಾಹದಿಂದ ಮಾಡುವ ಕೆಲಸ ಬಹಳ ಸರಳ ಅನಿಸುತ್ತದೆ.
ಉತ್ಸಾಹ ಇಲ್ಲದೆ ಇದ್ದಾಗ,,,,, ಮನೆಯಲ್ಲಿ ಕಸ ಹೊಡೆಯುವುದು ಭಾರವೆನಿಸುತ್ತದೆ ಒಂದು ಹೆಣ್ಣಿಗೆ ಅದೇ ತಾಯಿ ಮನೆಯಿಂದ ತವರವರು ಬರುತ್ತಾರೆಂದರೆ ಮತ್ತು ವಿಶೇಷ ಅತಿಥಿಗಳು ಬರುತ್ತಾರೆ ಎಂಬುದು ಗೊತ್ತಾದಾಗ ಆಕೆಗೆ ಮನೆ ತೋರಿಸಬೇಕು ಎನ್ನುವ ಉತ್ಸಾಹ ಹೆಚ್ಚು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಮನೆಯನ್ನು ಸ್ವಚ್ಛ ಮಾಡಿ ರಂಗೋಲಿ ಇಟ್ಟು ಏನೆಲ್ಲಾ ಕೆಲಸ ಮಾಡಿದರು ಭಾರವೆನಿಸುವುದಿಲ್ಲ ಅದೇ ಕೆಲಸ ಮೊದಲು ಕಠಿಣ ಎನಿಸುತ್ತಿತ್ತು ಈಗ ಸರಳ ಎನಿಸಿದೆ ಏಕೆ ಈಗ ಉತ್ಸಾಹವಿದೆ
ಈಗ ಒಬ್ಬ ವಿದ್ಯಾಥರ್ಿ ಅಭ್ಯಾಸವನ್ನು ಪ್ರೀತಿಯಿಂದ ಮಾಡಿದರೆ ಅದರಲ್ಲಿ ಸಾಧನೆಯ ಹಾದಿಯಲ್ಲಿ ಮೆಟ್ಟಿಲು ಆಗುತ್ತದೆ ಅದೇ ಅಭ್ಯಾಸವನ್ನು ಹೇಗಪ್ಪಾ ಮಾಡೋದು ಎಂದುಕೊಂಡು ರಾತ್ರಿ-ಹಗಲು ಓದಿದರೂ ತಲೆಗೆ ಹೋಗುವುದಿಲ್ಲ ಪ್ರೀತಿಯಿಂದ ಉತ್ಸಾಹದಿಂದ ಒಂದು ಗಂಟೆ ಓದಿದರೂ ಸಾಕು ಆ ವಿಷಯ ಅವನ ತಲೆಯಲ್ಲಿ ಉಳಿಯುತ್ತದೆ
ವಿದ್ವಾಂಸರೊಬ್ಬರು ಹೇಳುತ್ತಾರೆ ಮನುಷ್ಯನೇ ಏನು ಮಾಡಬೇಡ ಉತ್ಸಾಹ ತುಂಬಿ ಕೋ ಎಷ್ಟು ಅಂದರೆ ನೂರು ವರ್ಷ ಮಾಡುವ ಉತ್ಸಾಹ ತುಂಬಿ ಕೋ ಬದುಕಿನಲ್ಲಿ ಉತ್ಸಾಹ ಇರಬೇಕು ನೂರು ವರ್ಷ ಉತ್ಸಾಹದಿಂದ ಬದುಕಬೇಕು ಏನು ಮಾಡಿದರೂ ಉತ್ಸಾಹದಿಂದ ಮಾಡು
[ನಾವೆಲ್ಲಾ ಒಂದು ಸಂಕಲ್ಪ ಮಾಡೋಣ ಯಾವುದೇ ಕೆಲಸವಿದ್ದರೂ ಪ್ರೀತಿಸೋಣ ಉತ್ಸಾಹದಿಂದ ಮಾಡೋಣ ಇದಕ್ಕೆ ನೀವೇನನ್ನುತ್ತೀರಿ,,,,,,]