ಏತ ನೀರಾವರಿ ಯೋಜನೆ ಸಿದ್ದರಾಮಯ್ಯ ಸರ್ಕಾರವಿದ್ದಾಗ ಜಾರಿಗೆ ತರಲಾಗಿದೆ: ಉಮಾಶ್ರೀ
ಮಹಾಲಿಂಗಪುರ : ಈ ಭಾಗದ ಸುಮಾರು 14 ಹಳ್ಳಿಗಳ ರೈತರ ಶ್ರೇಯೋಭಿವೃದ್ಧಿಗಾಗಿ ನೀರು ಹರಿಸುವ ಉದ್ಧೇಶದಿಂದ ಸಸಾಲಟ್ಟಿ ಏತ ನೀರಾವರಿ ಯೋಜನೆಯನ್ನು ನಮ್ಮ ಕಾಂಗ್ರೆಸ್ ಪಕ್ಷದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಜಾರಿಗೆ ತರಲಾಗಿದೆ ಎಂದು ಮಾಜಿ ಸಚಿವೆ ಉಮಾಶ್ರೀ ತಿಳಿಸಿದರು.
ರವಿವಾರ ಮಹಾಲಿಂಗಪುರ ತಾಲೂಕು ಹೋರಾಟಕ್ಕೆ ಬೆಂಬಲಿಸಿ ಮಾತನಾಡುವ ಸಂದರ್ಭದಲ್ಲಿ ರೈತ ಮುಖಂಡರು ಸಸಾಲಟ್ಟಿ ಏತ ನೀರಾವರಿಯ ಬಗ್ಗೆ ತೋಡಿಕೊಂಡ ಸಮಸ್ಯೆಗೆ ಸ್ಪಂದಿಸಿ ಮಾತನಾಡಿದರು. ನಮ್ಮ ಕಾಂಗ್ರೆಸ್ ಸರ್ಕಾರವಿದ್ದಾಗ ಈ ಯೋಜನೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಅನೇಕ ತೊಂದರೆಗಳು ಎದುರಾದವು. ಅವುಗಳನ್ನು ತಾಂತ್ರಿಕವಾಗಿ ನಿವಾರಿಸಿ ಅಸಾಧ್ಯವಾದದ್ದನ್ನು ಸಾಧ್ಯಪಡಿಸಿ, 2017ರಲ್ಲಿ ನನ್ನ ಶಾಸಕತ್ವದಲ್ಲಿ ಸರ್ಕಾರದಿಂದ ಸಸಾಲಟ್ಟಿ ಏತ ನೀರಾವರಿ ಯೋಜನೆಗೆ ಅಂದಿನ ಜಲಸಂಪನ್ಮೂಲ ಸಚಿವ ಎಂ ಬಿ. ಪಾಟೀಲ್ ರಿಂದ 140ಕೋಟಿ ರೂ.ಗಳ ಅನುದಾನವನ್ನು ಬಜೆಟ್ನಲ್ಲಿ ತೆಗೆದಿರಿಸಲಾಗಿತ್ತು.
ಆದರೆ ಇಂದಿನ ರಾಜ್ಯ ಭಾಜಪ ಸರ್ಕಾರ ರೈತ ಮುಖಂಡರು ಹೇಳುವಂತೆ ಯೋಜನೆಯ ಹೆಸರನ್ನು ಶಿವಲಿಂಗೇಶ್ವರ ಏತ ನೀರಾವರಿ ಎಂದು ಹೆಸರಿಟ್ಟು ಕೃಷ್ಣಾನದಿಯಿಂದ ಘಟಪ್ರಭಾ ಕಾವಲಿಯ ಸುಲ್ತಾನಪುರ್ ಗೇಟಿಗೆ ನೀರು ಹರಿಸುವ ಬದಲು ತೇರದಾಳ ಗೇಟ್ ಗೆ ಹರಿಸಿ ದಿಕ್ಕು ಬದಲಿಸಿ ಸುಮಾರು 14 ಹಳ್ಳಿಗಳಾದ ಸಸಾಲಟ್ಟಿ ಸೇರಿದಂತೆ ಸಂಗಾನಟ್ಟಿ, ಮಧಬಾವಿ, ಮಾರಾಪುರ, ಢವಳೇಶ್ವರ, ಸೈದಾಪುರ, ಬಿಸನಾಳ, ಕೆಸರಗೊಪ್ಪ, ಗೋಲಬಾವಿ ನಮ್ಮ ಭಾಗದಲ್ಲಿದ್ದರೆ ಕಪ್ಪಲಗುದ್ದಿ, ಮರಾಕುಡಿ, ಹಳ್ಳೂರ, ಮುನ್ಯಾಳ, ಹಂದಿಗುಂದ ಈ ಹಳ್ಳಿಗಳು ಬೆಳಗಾವಿ ಜಿಲ್ಲೆಯಲ್ಲಿ ಬರುತ್ತವೆ ಒಟ್ಟಾರೆ ಭಾವನಾತ್ಮಕವಾಗಿ ನಮ್ಮ ಭಾಗದಲ್ಲಿಯೇ ಬರತಕ್ಕಂತಹ ಹಳ್ಳಿಗಳಾಗಿದ್ದು ಇಲ್ಲಿಯ ರೈತಾಪಿ ವರ್ಗಕ್ಕೆ ಬಹಳ ದೊಡ್ಡ ವಂಚನೆಯಾಗಿದೆ ಎಂದರು.
ಇವರು ಹೆಸರು ಬದಲಿಸಿ ಯೋಜನೆ ತಯಾರಿಸಿದ್ದಾರೆ ಎಂದರೆ ಒಳಗಡೆ ಏನೋ ಮಸಲತ್ತು ನಡೆದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ನಾವು ತಂದ ಯೋಜನೆಯ ಮೊತ್ತ ಏನಾಯ್ತು ಎಂಬುವುದರ ಬಗ್ಗೆ ಸಂಬಂಧಿಸಿದವರು ವಿವರಣೆ ನೀಡಬೇಕು. ಮೂಲ ಸಸಾಲಟ್ಟಿ ಅಥವಾ ತೇರದಾಳ ಕ್ಷೇತ್ರದಲ್ಲಿ ಕಾಮಗಾರಿಯ ಪೂಜೆ ನಡೆಯಬೇಕು. ಅಲ್ಲದೇ ಯೋಜನೆಯಲ್ಲಿ ಜನಪ್ರತಿನಿಧಿಗಳು ಪಾರದರ್ಶಕತೆ ಪ್ರದರ್ಶಿಸಿ ಈ ಭಾಗದಲ್ಲಿಯ ರೈತರ ಗೊಂದಲ ಆತಂಕಗಳನ್ನು ದೂರಮಾಡಬೇಕು ಎಂದರು.
ಇತ್ತೀಚೆಗೆ ರೈತ ಮುಖಂಡರು ಸೇರಿ ಸಸಾಲಟ್ಟಿ ಏತ ನೀರಾವರಿ ಕುರಿತು ನಾವು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಅವರು ಕೆಲಸಕ್ಕೆ ಬಾರದ, ಕೆಲಸವಿಲ್ಲದ ಮತ್ತು ಏನೂ ಅರಿಯದ ಜನ ಎಂದು ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಹಾಗಾದರೆ ತಾವು ಎಲ್ಲವನ್ನೂ ಬಲ್ಲವರಾಗಿ ನಮ್ಮ ಹೋರಾಟಕ್ಕೆ ಫಲಿಸಿದ ಸಸಾಲಟ್ಟಿ ಏತನೀರಾವರಿ ಯೋಜನೆಯಲ್ಲಿಯ ನಮ್ಮ ಭಾಗದ 9ಹಳ್ಳಿಗಳನ್ನು ಹೇಗೆ ಬಿಟ್ಟಿದ್ದೀರಿ ಶಾಸಕರಾಗಿ ನಿಮ್ಮ ಜವಾಬ್ದಾರಿ ನಿಮಗೆ ಕಾಣಲಿಲ್ಲವೇ ಇದಕ್ಕೆ ಉತ್ತರಿಸಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲವಾದರೆ ನಮ್ಮ ಹಕ್ಕಿಗಾಗಿ ಉಗ್ರ ಹೋರಾಟ ಮಾಡುತ್ತೇವೆ.
ಗಂಗಾಧರ ಮೇಟಿ,
ರಾಜ್ಯ ಸಂಚಾಲಕ ರೈತ ಸಂಘ ಹಾಗೂ ಹಸಿರು ಸೇನೆ.
ಮುಖ್ಯಾಂಶಗಳು.
* ಮೂಲ ಡಿಪಿಆರ್ ದಂತೆ ಯೋಜನೆ ಸಿದ್ಧಗೊಳ್ಳಬೇಕು.
* ಮೂಲಕ ಸಸಾಲಟ್ಟಿ ಅಥವಾ ಕ್ಷೇತ್ರದಲ್ಲಿ ಕಾಮಗಾರಿಗೆ ಪೂಜೆಯಾಗಬೇಕು.
* ಕಾಂಗ್ರೆಸ್ ಸರ್ಕಾರವಿದ್ದಾಗಿನ ಯೋಜನೆ ಹಾಗೂ ತೆಗೆದಿರಿಸಲಾದ ಮೊತ್ತ ಏನಾಯ್ತು.
* ಸರ್ಕಾರ ಪಾರದರ್ಶಕತೆ ಪ್ರದರ್ಶಿಸಿ ರೈತರಲ್ಲಿರುವ ಗೊಂದಲ ಆತಂಕ ನಿವಾರಿಸಬೇಕು.