ಕುಷ್ಟಗಿ

ಚುನಾವಣೆಯಲ್ಲಿ ಯಾರನ್ನೋ ಆರಿಸಿದರೆ ಉಪಯೋಗವಿಲ್ಲ, ದೇಶದ ಭವಿಷ್ಯ ಮುಖ್ಯ : ದೇವೇಂದ್ರಪ್ಪ

ಚುನಾವಣೆಯಲ್ಲಿ ಯಾರನ್ನೋ ಆರಿಸಿದರೆ ಉಪಯೋಗವಿಲ್ಲ, ದೇಶದ ಭವಿಷ್ಯ ಮುಖ್ಯ : ದೇವೇಂದ್ರಪ್ಪ

ಕುಷ್ಟಗಿ: ಚುನಾವಣೆಯಲ್ಲಿ ಯಾರನ್ನೋ ಆರಿಸಿ ತಂದರೆ ಉಪಯೋಗವಿಲ್ಲ, ದೇಶದ ಭವಿಷ್ಯ ಮುಖ್ಯ. ಈಗಿರುವ ಕಾಂಗ್ರೆಸ್ ಮುಖಂಡರು ಲೂಟಿಕೋರರು ಎಂದು ದೇವೇಂದ್ರಪ್ಪ ಬಳೂಟಗಿ ಹೇಳಿದರು. 

    ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ   ಈಗಿರುವ ಕಾಂಗ್ರೆಸ್ ಮುಖಂಡರು ಲೂಟಿಕೋರರು ಬಂದಿದ್ದಾರೆ. ಹಣ ಮಾತ್ರ ರಾಜಕಾರಣ ಎಂದು ತಿಳಿದಿದ್ದಾರೆ. ಅವರ ಸಿದ್ದಾಂತಗಳು ಸರಿಯಲ್ಲ. ನಾನೊಬ್ಬನೇ ಎನ್ನುವ ಪಕ್ಷದಲ್ಲಿ ನಾನು ಇರುವುದಿಲ್ಲ. ನಾನು ಯಾವುದೇ ಆಮೀಷಕ್ಕೆ ಒಳಗಾಗಿ ಬಿಜೆಪಿ ಸೇರಿಲ್ಲ. ಕಾಂಗ್ರೆಸ್ನಲ್ಲಿದ್ದಾಗ ಅವರ ಹತ್ತು  ರೂಪಾಯಿ ಸಹ  ತಿಂದಿಲ್ಲ.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಾಗ ಲೆಟರಪ್ಯಾಡ ಖಚರ್ು 2500ರೂ. ಸಹ  ಕೊಟ್ಟಿದ್ದೇನೆ.  ರಾಜಕೀಯ ನಿವೃತ್ತಿ ಯಾಗಬೇಕು ಅಂದುಕೊಂಡಿದ್ದೆ, ಆದರೆ ಅಭಿಮಾನಿಗಳ ಒತ್ತಾಯಕ್ಕೆ ರಾಜಕೀಯದಲ್ಲಿ ಇದ್ದೇನೆ. ನಾನಾಗಲೀ ನನ್ನ ಸಹೋದರರಾಗಲೀ ಯಾರೂ ಶಾಸಕರಿಂದ ದೊಡ್ಡ ಕೆಲಸ  ಕಾಮಗಾರಿ ಪಡೆದಿಲ್ಲ. ಮೂಲತ ಗುತ್ತಿಗೆದಾರರಾಗಿದ್ದು ಯಾವುದೇ ಬೋಗಸ್ ಬಿಲ್ ಕೂಡ ಮಾಡಿಲ್ಲ, ನಾನು ಕುಸ್ತಿಗೂ ರೆಡಿ, ಎಲ್ಲದಕ್ಕೂ ರೆಡಿ, ನನ್ನನ್ನು ಕೆದಕಿದರೆ ನಾವು ಸುಮ್ಮನಿರಲ್ಲ.  ಇಪ್ಪತ್ತು ಮೂವತ್ತು ವರ್ಷಗಳಿಂದ ವ್ಯಾಪಾರ ಉದ್ಯೋಗ ಮಾಡುತ್ತಾ ಬಂದಿದ್ದು  ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಹೇಳಿದರು.  

      ಸು.10 ವರ್ಷ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಮಾಡಿದೆ. ಇತ್ತೀಚೆಗೆ ಅಲ್ಲಿ ಆದ ಬದಲಾವಣೆಗಳಿಂದ ಕಾಂಗ್ರೆಸ್ಗೆ ವಿದಾಯ ಹೇಳಿ ಬಿಜೆಪಿ ಕಡೆ ಹೋಗಬೇಕಾಯಿತು. ಪಕ್ಷ ಬಿಟ್ಟು ಗಂಭೀರ ಆರೋಪ ಮಾಡಲ್ಲ. ನಾವೆಲ್ಲ ರಾಜಕೀಯ ಸಿದ್ಧಾಂತ ಇಟ್ಟಕೊಂಡು ಮಾತನಾಡಬೇಕಾಗುತ್ತದೆ. ಶಾಸಕ ಅಮರೇಗೌಡ ಬಯ್ಯಾಪುರ  ಬಗ್ಗೆ ಹೇಳುವುದಾದರೆ ಏಕಚಕ್ರಾಧಿಪತಿ ನೀತಿ  

ಅವರದ್ದು. ಯಾರನ್ನೂ ತಮ್ಮ ಜೊತೆ ಕರೆಯುವದಿಲ್ಲ. ಚುನಾವಣೆ ಸಮೀಸಿದ್ದರೂ ನಮಗೆ ಯಾವುದೆ ಬೆಲೆ ಕೊಡಲಿಲ್ಲ. ಅಲ್ಲದೇ ನನ್ನನ್ನು ಸೇರಿಸಿಕೊಂಡಾಗ ಅವರ ಸೋಲಾಯಿತು. ನಂತರ 2018 ರಲ್ಲಿ ಗೆಲುವು ಆದಾಗ ಅದನ್ನು ಶಾಸಕರು ನನ್ನ ಸ್ವಂತ ವರ್ಚಸ್ಸು ಎಂದರು. ಇಂತಹ ನೀತಿಯೇ ನನಗೆ ಅಸಮಾಧಾನ ತಂದಿತು ಎಂದು ಹೇಳಿದರು. 

ಪ್ರಸ್ತುತ ಕಾಂಗ್ರೆಸ್ ನಲ್ಲಿ ನಾನೇ ಎಲ್ಲಾ ನನ್ನಿಂದಲೆ ಎಲ್ಲಾ ಎನ್ನುವ ವಾತಾವರಣವಿದ್ದು ಮುಖಂಡರಿಗೆ ಬೆಲೆ ಇಲ್ಲ. ಕುಷ್ಟಗಿ ಕಾಂಗ್ರೆಸ್ ಪಕ್ಷದಲ್ಲಿ ಸವರ್ಾಧಿಕಾರಿ ಧೋರಣೆಯಿದ್ದು ನನಗೆ ಅಸಮಾಧಾನವಾಗಿ ಬಿಜೆಪಿ ಸೇರಬೇಕಾಯಿತು ಎಂದು ಬಿಜಪಿ ಮುಖಂಡ ದೇವೇಂದ್ರಪ್ಪ ಬಳೂಟಗಿ ಪರೋಕ್ಷವಾಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ವಿರುದ್ಧ ಆರೋಪಿಸಿದರು.  

ಬಿಜೆಪಿ ಭಾರತ ದೇಶಕ್ಕೆ ಅನಿವಾರ್ಯ, ಮೊದಲು ದೇಶ ಮುಖ್ಯ. ಪ್ರಧಾನಿ ನರೇಂದ್ರ ಮೋದಿ ಭಾರತ ತಲೆ ಎತ್ತುವ ಹಾಗೆ ಕೆಲಸ ಮಾಡುತ್ತಿದ್ದಾರೆ. 

ಕೋವಿಡ್ ಸಮಯದಲ್ಲಿ ದೇಶದ ಜನತೆಗೆ ಅನೇಕ ಕೊಡುಗೆ ನೀಡಿದ್ದಾರೆ. ಇತರೆ ದೇಶಗಳು ದಿವಾಳಿಯಾದರೂ ಭಾರತ ಪ್ರಜ್ವಲಿಸುವ ಹಾಗೆ ಮಾಡಿದ್ದಾರೆ. ರೈತರಿಗೂ ಸಹ ಅನೇಕ ಯೋಜನೆಗಳನ್ನು ತಂದಿದ್ದು, ಪಿಎಂ ಕಿಸಾನ್ ನೇರವಾಗಿ ಅಕೌಂಟ್ಗೆ ಜಮಾ ಆಗುತ್ತಿದೆ. ಜುಜುಬಿ ಕೆಲಸ ಬಿಜೆಪಿ ಮಾಡಲ್ಲ. ಸರಕಾರ ಪೊಳ್ಳು ಭರವಸೆ ಕೊಡುವುದು ಸಹಜ ಆದರೆ ಬಿಜೆಪಿ ಹೀಗೆ ಮಾಡಲ್ಲ. ಹೀಗಾಗಿ ನಾನು ಮನಸ್ಸು ಪರಿವರ್ತನೆ ಆಯಿತು. ಅದಕ್ಕೆ ಬಿಜೆಪಿ ಸೇರಿದೆ ಎಂದರು.  

       ಮುಖಂಡರಾದ ಜಿಕೆ ಹಿರೇಮಠ, ರಾಜೇಶ ಪತ್ತಾರ, ಕಲ್ಲೇಶ ತಾಳದ, ಬಸವರಾಜ ಬುಡಕುಂಟಿ, ಅಂಬಣ್ಣ ಭಜಂತ್ರಿ, ಜೆಜೆ ಆಚಾರ, ಚಂದ್ರು ವಡಿಗೇರಿ ಇದ್ದರು 

ಸುದ್ದಿ ಓದಿ