ಅಂಡಮಾನ್ ನಿಕೋಬಾರ್ ದ್ವೀಪದಲ್ಲೂ ಭೂಕಂಪನ , ಹಾನಿ ವರದಿಯಿಲ್ಲ
ಪೋರ್ಟ್ಬ್ಲೇರ್, ಆಗಸ್ಟ್ 3 ಅಂಡಮಾನ್ ನಿಕೋಬಾರ್ ದ್ವೀಪದ ರಾಜಧಾನಿ ಪೋರ್ಟ್ಬ್ಲೇರ್ ನಲ್ಲಿ ಮಂಗಳವಾರ ಭೂಕಂಪನ ಸಂಭವಿಸಿದ್ದು , ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 4.3 ಎಂದು ದಾಖಲಾಗಿದೆ.
ಇಂದು ಮುಂಜಾನೆ ಕಂಪನ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರ ತಿಳಿಸಿದೆ. ರಿಕ್ಟರ್ ಮಾಪಕನದಲ್ಲಿ ಕಂಪನದ ತೀವ್ರತೆ 4.3ಎಂದು ದಾಖಲಾಗಿದೆ.
ಕಂಪನದ ಕೇಂದ್ರ ಬಿಂದು ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ 249 ಕಿಲೋಮೀಟರ್ ದೂರದಲ್ಲಿತ್ತು ಎಂದೂ ಭೂಕಂಪನ ಇಲಾಖೆ ವರದಿ ಹೇಳಿದೆ. ಸದ್ಯ ಯಾವುದೇ ಪ್ರಾಣಹಾನಿ ಮತ್ತು ಆಸ್ತಿ ಪಾಸ್ತಿಗೆ ನಷ್ಟವಾಗಿರುವ ವರದಿಯಾಗಿಲ್ಲ ಎಂದು ಹೇಳಲಾಗಿದೆ.
ಯುಎನ್ಐ ಕೆಎಸ್ಆರ್ 0932