ಕಂಪನಿಗಳಲ್ಲಿ ಕೆಲಸ ದೊರಕಿಸಲು ಹಲವಾರು ಕೌಶಲ್ಯಗಳು ಅವಶ್ಯ : ಡಾ. ಎಸ್. ರೋಹಿತರಾಜ
ಲೋಕದರ್ಶನ ವರದಿ
ಬೆಳಗಾವಿ 22: ಒಂದು ವಾರ ನಡೆಯುಲಿರುವ ಪ್ಲೇಸಮೆಂಟನ ಪೂರ್ವಭಾವಿ ತರಬೇತಿ ನೀಡಲು ಹಲವಾರು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗುತ್ತಿದ್ದು, ಪರಿಚಯ ನಿರ್ಮಿತಿ, ವೃತ್ತಿ ಒಲವು, ಸಾಮೂಹಿಕ ಚರ್ಚೆ, ವೈಯಕ್ತಿಕ ಮುಖ ಸಂದರ್ಶನ ಮುಂತಾದವುಗಳ ಕುರಿತು ಸಭೆಗಳು ಜರುಗಲಿವೆ ಎಂದು ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಡಾ. ಎಸ್. ರೋಹಿತರಾಜ ಹೇಳಿದರು.
ಜೈನ ಎಂಜನೀಯರಿಂಗ ಕಾಲೇಜಿನ ಎಂಬಿಎ ಮೂರನೇ ಸೆಮಿಸ್ಟರದ ವಿದ್ಯಾರ್ಥಿಗಳಿಗೆ ಒಂದು ವಾರ ಆಯೋಜಿಸಲಾಗಿರುವ ಪ್ಲೇಸಮೆಂಟಗೆ ಪೂರ್ವ ತರಬೇತಿಯ ಪ್ರಥಮ ದಿನದಂದು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಕ್ಯಾಂಪಸ್ ಪ್ಲೇಸಮೆಂಟ ಕುರಿತು, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಪ್ಲೇಸಮೆಂಟ ಪ್ರಕ್ರಿಯೆಯನ್ನು ವಿವರಿಸುತ್ತ, ವಿದ್ಯಾರ್ಥಿಗಳು ಅದಕ್ಕಾಗಿ ಹೇಗೆ ತಯಾರಿಸಿಕೊಳ್ಳಬೇಕೆಂಬುದರ ಕುರಿತು ವಿವರಿಸಿದರು. ಸರಿಯಾದ ಸಮಯದಲ್ಲಿ ಸಣ್ಣ ಹೆಜ್ಜೆಯೂ ದೊಡ್ಡ ಜಿಗಿತ ಸಾಧಿಸಲು ಅಣಿಗೊಳಿಸುತ್ತದೆ. ಕಲಿಯುತ್ತಿರುವ ಪ್ರತಿಯೋರ್ವನಿಗೂ ಪದವೀಧರನಾದ ನಂತರ, ಒಳ್ಳೆಯ ಕಂಪನಿಯಲ್ಲಿ ಉತ್ತಮ ಕೆಲಸ ಪಡೆಯಬೇಕೆಂಬ ಕನಸು ಇರುತ್ತದೆ. ಹೆಚ್ಚಿನ ಅಂಕ ಸಂಪಾದನೆಗಳ ಜೊತೆಗೆ ಕಂಪನಿಗಳಲ್ಲಿ ಕೆಲಸ ದೊರಕಿಸಲು ಹಲವಾರು ಕೌಶಲ್ಯಗಳು ಅವಶ್ಯವಾಗಿವೆ. ವೃತ್ತಿ ಒಲವಿನ ಜೊತೆಗೆ ವ್ಯೂಹಾತ್ಮಕ ಮಾರ್ಗವೂ ಇರಬೇಕಾದುದು ಅತ್ಯವಶ್ಯವೆಂದರು.
ಜೈನ ಕಾಲೇಜಿನ ಪ್ಲೇಸಮೆಂಟ ಅಧಿಕಾರಿ ಪ್ರೊ. ರಘು ಓಝಾ, ಕ್ಯಾಂಪಸ್ ಪ್ಲೇಸಮೆಂಟಿನಲ್ಲಿ ಯಶಸ್ವಿಯಾಗುವದು, ಕಾಲೇಜು ಜೀವನದ ಕಠೋರ ಹಂತವಾಗಿದೆ. ಪದವೀಧರರಾದ ಮೇಲೆ ಕ್ಯಾಂಪಸ್ ಪ್ಲೇಸಮೆಂಟಿನಲ್ಲಿ ಸಂದರ್ಶನಕ್ಕಾಗಿ ಉತ್ತಮ ತಯಾರಿ ತುಂಬಾ ಅವಶ್ಯಕ. ಜೆಸಿಇ ಎಂಬಿಎದಲ್ಲಿ ಬರಲಿರುವ ಹಲವಾರು ಅವಕಾಶಗಳ ಬಗ್ಗೆ ಮಾತನಾಡಿದರು.
ಜೆಸಿಇ ಎಂಬಿಎದ ಸಂಯೋಜನಾಧಿಕಾರಿ ಸೂಕ್ತವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವದೂ, ಆಯ್ಕೆ ಸಮೀತಿಗೆ ಬಹು ಕಠಿಣ ಸಮಸ್ಯೆಯಾಗಿರುತ್ತದೆ. ಕೇವಲ ಅಭ್ಯರ್ಥಿಗಳ ಅಂಕಗಳಿಕೆ ಅಷ್ಟೇ ಮುಖ್ಯವಲ್ಲ. ಕಂಪನಿಯು ಬಹು ಪ್ರಭುದ್ಭ ಅಭ್ಯರ್ಥಿಗಳ ಆಯ್ಕೆ ಆಗಬೇಕೆಂದು ಬಯಸುತ್ತದೆ. ಕೇವಲ ಗ್ರಂಥಿಯ ಜ್ಞಾನವಷ್ಟೇ ಸಾಲದು ಇನ್ನೂ ಹೆಚ್ಚಿನದನ್ನು ಕಂಪನಿ ಬಯುಸತ್ತದೆ. ಪ್ರಾಂಶುಪಾಲರು ಹಾಗೂ ನಿರ್ದೇಶಕ ಡಾ. ಕೆ.ಜಿ. ವಿಶ್ವನಾಥ, ಎಂಬಿಎ ವಿಭಾಗವನ್ನು ಶ್ಲಾಘಿಸಿ, ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಪ್ಲೇಸಮೆಂಟ ಸಂಯೋಜನಾಧಿಕಾರಿ ಪ್ರೊ. ರವಿ ಪ್ರಕಾಶ, ಕಂಪ್ಯೂಟರ ಸೈನ್ಸ ಮುಖ್ಯಸ್ಥ ಡಾ. ಉತ್ತಮ, ಸಿಇಒ ಬ್ರೈಟ್‌ಬಿ.. ಅಭಿಷೇಕ ಜಕ್ಕಣ್ಣವರ, ಸಾಫ್ಟವೇರ್ ಎಂಜನೀಯರ ಅಮೀರಖಾನ ಉಪಸ್ಥಿತರಿದ್ದರು.