ಪೌರ ಕಾಮರ್ಿಕರ ಕಾರ್ಯ ಶ್ಲಾಘನೀಯ: ಶಾಸಕ ಮಹಾದೇವಪ್ಪ ಯಾದವಾಡ
ಲೋಕದರ್ಶನ ವರದಿ
ರಾಮದುರ್ಗ, ಜುಲೈ 20: ಕೊರೊನಾ ವೈರಸ್ದಿಂದ ದೇಶವೇ ತಲ್ಲಣಗೊಂಡು ಆತಂಕದಲ್ಲಿ ಇದ್ದ ಸಂದರ್ಭದಲ್ಲಿಯೂ ಪೌರ ಕಾಮರ್ಿಕರು ತಮ್ಮ ಜೀವದ ಹಂಗು ತೊರೆದು ನಗರವನ್ನು ಸ್ವಚ್ಚಗೊಳಿಸುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಶಾಸಕ ಮಹಾದೇವಪ್ಪ ಯಾದವಾಡ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಸೀಲ್ಕ ಉಳಿದ ಆಹಾರ ಪದಾರ್ಥಗಳನ್ನು ಪೌರ ಕಾಮರ್ಿಕರಿಗೆ ಪಟ್ಟಣದ ಶಾಸಕರ ಕಛೇರಿಯಲ್ಲಿ ವಿತರಿಸಿ ಮಾತನಾಡಿದ ಅವರು ಸರಕಾರದ ಹಲವಾರು ಇಲಾಖಾ ನೌಕರರು ಲಾಕ್ ಡೌನ್ ವೇಳೆಯಲ್ಲಿ ಮನೆಯಲ್ಲಿ ಕಳೆದರೆ ಆಶಾ, ಅಂಗನವಾಡಿ ಕಾರ್ಯಕರ್ತರು, ಸರಕಾರಿ ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಹಾಗೂ ಪೌರ ಕಾಮರ್ಿಕರು ಕರ್ತವ್ಯದಲ್ಲಿ ತೋರಿದ ನಿಷ್ಠೆಯು ಇತರ ಇಲಾಖೆಯ ನೌಕರರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಪುರುಸಭೆಯಿಂದ ನೀಡಿದ ಹ್ಯಾಂಡ್ ಗ್ಲೌಸ್, ಶೂ ಮತ್ತು ಗೌನಗಳನ್ನು ಧರಿಸಿ ಕರ್ತವ್ಯಕ್ಕೆ ತರಳಿ ತಮ್ಮ ಆರೋಗ್ಯದ ಕಡೆಗೂ ಗಮನ ನೀಡಿ ಪೌರ ಕಾಮರ್ಿಕರು ಕೆಸಲ ಮಾಡುವಂತೆ ಅವರು ಸಲಹೆ ನೀಡಿದರು. ತಹಶೀಲ್ದಾರ ಗೀರಿಶ ಸ್ವಾದಿ ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಮುರಳೀದರ ದೇಶಪಾಂಡೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೆ ಎಸ್ ಕಕರ್ಿ, ಪುರಸಭೆ ಅಧಿಕಾರಿ ಚಂದನ್ ಪಾಟೀಲ, ಶಿವು ಗೊರವನಕೊಳ್ಳ ಹಾಗೂ ಇತರರು ಇದ್ದರು.