10 ತಿಂಗಳ ಪುಟ್ಟ ಮಗುವನ್ನು ಬಿಟ್ಟು ಭಾರತೀಯ ಸೇನೆಯಲ್ಲಿ ಸೇವೆಗಾಗಿ ಹೊರಟ ಮಹಿಳೆ : ವಿಡಿಯೋ ವೈರಲ್, ದೃಶ್ಯ ಕಂಡು ಕಣ್ಣಿರಾದ ಜನಾ

10 ತಿಂಗಳ ಪುಟ್ಟ ಮಗುವನ್ನು ಬಿಟ್ಟು ಭಾರತೀಯ ಸೇನೆಯಲ್ಲಿ ಸೇವೆಗಾಗಿ ಹೊರಟ ಮಹಿಳೆ : ವಿಡಿಯೋ ವೈರಲ್, ದೃಶ್ಯ ಕಂಡು ಕಣ್ಣಿರಾದ ಜನಾ

ಬೆಳಗಾವಿ : ಯಾವದೇ ತಾಯಿಗೆ ತಾನು ಹೆತ್ತ ಕಂದಮ್ಮನ ಬಿಟ್ಟು ಒಂದು ತಾಸು ಕಳೆಯುವದು ಅಂದರೆ ತುಂಬಾ ಕಷ್ಟ ಅಂತದರಲ್ಲಿ ತಾಯಿಯೋರ್ವಳು ತಾನು ಹೆತ್ತ 10 ತಿಂಗಳು ಕಂದಮ್ಮನನ್ನು (ಮಗುವನ್ನು) ಬಿಟ್ಟು ಭಾರತೀಯ ಸೇನೆಯಲ್ಲಿ ಸೇವೆ ಮಾಡಲು ರೈಲು ಕಣ್ಣಿರು ಹಾಕುತ್ತ ಹೊರಟಿರುವ ದೃಶ್ಯ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಪುಟ್ಟ ಕಂದಮ್ಮನ ತಾಯಿ ಅಗಲಿಕೆಯ ವಿಡಿಯೋ ನೋಡಿ‌ಕಂಡವರು ಕಣ್ಣಿರಿಡುವಂತೆ ಮಾಡಿದೆ. 


    ಹೌದು ಓದುಗರೇ ಇಂತಹ ವಿಡಿಯೋ ಒಂದು ನಂದಗಾವ್ ಎಂಬ ಗ್ರಾಮದ ಈ ಮಹಿಳೆಯು ಭಾರತೀಯ ಸೇನೆಯಲ್ಲಿ ಸೇವೆಗೆ ತೆಳುತ್ತಿದ್ದಾಗ ಆ ಮಹಿಳೆಯ ಕುಟುಂಬಸ್ಥರು ಆ ಮಹಿಳೆಯನ್ನು ರೈಲು ನಿಲ್ದಾಣದಿಂದ ಬಿಳಕೊಡಲು ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. 


    ಆದರೆ ಮಹಿಳೆಯು ರೈಲು ಬರುವ ಮುಂಚೆ ಅವರ ಕುಟುಂಬಸ್ಥರನ್ನು ಕೊನೆಯದಾಗಿ ಅಪ್ಪುಗೆಯಿಂದ ತಬ್ಬಿಕೊಳ್ಳುವಷ್ಟರಲ್ಲಿ ರೈಲು ತನ್ನ ಹೊರಡುವ ಸ್ಥಳದಲ್ಲಿ ನಿಲ್ಲುತ್ತದೆ. 


   ಕುಟುಂಬಸ್ಥರ ಜೊತೆ ತಾನು ಹೆತ್ತ ಕಂದಮ್ಮನನ್ನು ಬಿಟ್ಟು ಕಣ್ಣಿರು ಹಾಕುತ್ತ ರೈಲು ಹತ್ತುವ ದೃಶ್ಯವು ಕಂಡವರ ಕಣ್ಣಿನ ಅಂಚಿನಲ್ಲಿ ನೀರು ಬರುವ ಹಾಗೆ ಮಾಡುವಂತಾಗಿದೆ. 


  ಎನು ಅರಿಯದ ಮುಗ್ದ ಕಂದಮ್ಮ ತನ್ನ ತಾಯಿಯನ್ನು ಬಿಟ್ಟು ಹೇಗೆ ಬದುಕತ್ತದೆ. ಹಾಗೂ ತಾಯಿ 10 ತಿಂಗಳ ಹಸುಗೂಸನ್ನು ಬಿಟ್ಟು ದೂರ ಇರುವದು ಕಷ್ಟ ಸಾಧ್ಯ ಅನ್ನುವದು ನಾವೆಲ್ಲರು ಅರಿಯಬೇಕಾದ ಸಂಗತಿ ಇದಾಗಿದೆ. 

ಸುದ್ದಿ ಓದಿ