ಪ್ರಕರಣಗಳನ್ನು ಹಂಚುವ ಪರಮಾಧಿಕಾರ ಮುಖ್ಯ ನ್ಯಾಯಮೂತರ್ಿಗಳಿಗೆ: ಸುಪ್ರೀಂ

ಪ್ರಕರಣಗಳನ್ನು ಹಂಚುವ ಪರಮಾಧಿಕಾರ ಮುಖ್ಯ ನ್ಯಾಯಮೂತರ್ಿಗಳಿಗೆ: ಸುಪ್ರೀಂ

ಹೊಸದಿಲ್ಲಿ 06: ಸವರ್ೊಚ್ಚ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಪ್ರಕರಣಗಳನ್ನು ನ್ಯಾಯಾಧೀಶರುಗಳಲ್ಲಿ ಹಂಚಿ ಹಾಕುವ ವರಿಷ್ಠ ನ್ಯಾಯಮೂತರ್ಿಗಳ ಮಾಸ್ಟರ್ ಆಫ್ ರೋಸ್ಟರ್ ಪಾತ್ರವನ್ನು  ಸುಪ್ರೀಂ ಕೋಟರ್್ ಎತ್ತಿಹಿಡಿದಿದೆ.  

ಪ್ರಕರಣಗಳನ್ನು ಹಂಚಿ ಹಾಕುವ ವಿಷಯದಲ್ಲಿ ವರಿಷ್ಠ ನ್ಯಾಯಮೂತರ್ಿಗಳು ಐವರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡ 'ವರಿಷ್ಠ ಮಂಡಳಿ' ಯ (ಕೊಲೆಜಿಯಂ) ಓರ್ವ ಸದಸ್ಯರೆಂದು ಪರಿಭಾವಿಸಲಾಗದು; ಹಾಗೆ ಮಾಡಿದಲ್ಲಿ ಸುಪ್ರೀಂ ಕೋಟರ್ಿನ ದಿನವಹಿ ಕಾರ್ಯಕಲಾಪಗಳು ಸುಲಲಿತವಾಗಿ ಮತ್ತು  ಸಾಂಗವಾಗಿ ನಡೆಯುವುದೇ ಕಷ್ಟವಾಗಬಹುದು ಎಂದು ಸುಪ್ರೀಂ ಕೋಟರ್್ ಹೇಳಿದೆ.  

ವರಿಷ್ಠ ನ್ಯಾಯಮೂತರ್ಿಗಳು ನ್ಯಾಯಾಧೀಶರುಗಳಿಗೆ ಕೇಸುಗಳನ್ನು ಹಂಚಿ ಹಾಕುವ ಈಗಿನ ರೋಸ್ಟರ್ ಪದ್ಧತಿಯನ್ನು ಪ್ರಶ್ನಿಸಿ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಅವರು ಸಲ್ಲಿಸಿದ್ದ ಅಜರ್ಿಗೆ ಸಂಬಂಧಪಟ್ಟು ಸುಪ್ರೀಂ ಕೋಟರ್್ ಇಂದು ಈ ಆದೇಶ ನೀಡಿತು.  

ಸಿಜೆಐ ಅವರು ಮಾಸ್ಟರ್ ಆಫ್ ರೋಸ್ಟರ್ ಎಂಬ ವಿಷಯದಲ್ಲಿ ಯಾವುದೇ ವಿವಾದ ಇಲ್ಲ ಎಂದು ಸುಪ್ರೀಂ ಕೋಟರ್್ ಸ್ಪಷ್ಟಪಡಿಸಿತು.  

ತಾವೇ ಆಯ್ಕೆ ಮಾಡುವ ನಾಯಾಧೀಶರುಗಳಿಗೆ ಅಥವಾ ನಿದರ್ಿಷ್ಟ ನ್ಯಾಯಾಧೀಶರಿಗೆ ಪ್ರಕರಣಗಳನ್ನು ಹಂಚಿಕೆ ಮಾಡುವ ಸಿಜೆಐ ಅವರ ಈಗ ಚಾಲ್ತಿಯಲ್ಲಿರುವ  ಮಾಸ್ಟರ್ ಆಫ್ ರೋಸ್ಟರ್ ಪದ್ಧತಿಯು ಮಾರ್ಗಸೂಚಿ ಇಲ್ಲದ, ಪ್ರಶ್ನಾತೀತವಾದ, ಸ್ವೇಚ್ಚಾಚಾರದ ಅಧಿಕಾರವಾಗಿರಲು ಸಾಧ್ಯವಿಲ್ಲ ಎಂದು ಶಾಂತಿ ಭೂಷಣ್ ಆರೋಪಿಸಿದ್ದರು. 

ಸಿಜೆಐ ಅವರ ಮಾಸ್ಟರ್ ಆಫ್ ರೋಸ್ಟರ್ ಅಧಿಕಾರವನ್ನು ಪ್ರಶ್ನಿಸಿ ತಾನು ಈ ಅಜರ್ಿ ಸಲ್ಲಿಸುತ್ತಿರುವುದು ನ್ಯಾಯಾಲಯವನ್ನು ಬಲಪಡಿಸುವಉದ್ದೇಶದ್ದಾಗಿದೆಯೇ ಹೊರತು ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ ಎಂದು ಶಾಂತಿಭೂಷಣ್ ಹೇಳಿದ್ದರು.   

ಸುದ್ದಿ ಓದಿ