ಶ್ರಮಿಕರ ಸೇವೆಯೇ ಭಗವಂತನ ಸೇವೆ: ಹುರಕಡ್ಲಿ.
ಮಹಾಲಿಂಗಪೂರ 03: ಕಳೆದ ಹಾಗೂ ಈ ಬಾರಿ ಕೊರೋನಾ ಪರಿಹಾರಕ್ಕಾಗಿ ಪುರಸಭಾ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ ಅವರು ಅನೇಕ ಮಾಗರ್ೋಪಾಯಗಳನ್ನು ಕಂಡುಕೊಂಡು ಬಡವರಿಗೆ ನೀಡಿ ಮಾನವೀಯತೆ ಮೆರೆಯುತ್ತಾ ಮಾದರಿಯಾಗಿದ್ದಾರೆಂದು ಹಮಾಲರ ಸಂಘದ ಅಧ್ಯಕ್ಷ ಪೈಗಂಬರ್ ಪೆಂಡಾರಿ ಹೇಳಿದರು. ಸ್ಥಳೀಯ ಎಪಿಎಂಸಿ ಶ್ರಮಿಕರ ಸಭಾಭವನದಲ್ಲಿ ಸಿ.ಎಂ.ಹುರಕಡ್ಲಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಎಪಿಎಂಸಿ ವೇಮನ್, ಕಾರಕೂನರಿಗೆ, ಹಮಾಲರಿಗೆ ಕಷಾಯ ಪುಡಿ, ಕನೇರಿಮಠದ ಔಷಧಯುಕ್ತ ಜಲ, ಮಾಸ್ಕ್, ಸ್ಯಾನಿಟೈಜರ್ , ಕಸದ ಡಬ್ಬಿ, 20 ಲೀಟರ್ ಕುಡಿಯುವ ನೀರಿನ ಕ್ಯಾನ್ ಗಳ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಚನ್ನಬಸು ಹುರಕಡ್ಲಿ ಮಾತನಾಡಿ, ನಾನೂ ಸಹ ಹಮಾಲನಾಗಿ, ಕಾರಕೂನನಾಗಿ ಕೆಲಸ ಮಾಡಿ ಇಂದು ಈ ಸ್ಥಾನಕ್ಕೆ ಬಂದಿದ್ದೇನೆ ಹಾಗಾಗಿ ನನಗೆ ಸಮಾನರು ಮತ್ತು ಕಾರಕೂನರ ಕಷ್ಟ ಏನೆಂದು ಚೆನ್ನಾಗಿ ಗೊತ್ತು, ಅಂತಹ ಬಡ ಶ್ರಮ ಜೀವಿಗಳ ಸೇವೆಯೇ ಭಗವಂತನ ಸೇವೆ ಎಂದು ಭಾವಿಸಿದ್ದೇನೆ ಎಂದರು.ಹಮಾಲರು ಮತ್ತು ಕಾರಕೂನರು, ವೇಮನ್ ರ ಸಂಘದ ವತಿಯಿಂದ ಚನ್ನಬಸು ಹುರಕಡ್ಲಿಯವರನ್ನು ಸನ್ಮಾನಿಸಲಾಯಿತು. ಬಜಾರ ಹಮಾಲರ ಸಂಘದ ಅಧ್ಯಕ್ಷ ಕುತುಬರ್ ಪೆಂಡಾರಿ,ಉಪಾಧ್ಯಕ್ಷ ಅಜರ್ುನ ನಾಯಕ, ಕಾರ್ಯದಶರ್ಿ ಬಾಬು ಜಮಾದಾರ, ಖಜಾಂಚಿ ಪ್ರಕಾಶ ಚವ್ಹಾನ್, ಕಾರಕೂನರ ಸಂಘದ ಉಪಾಧ್ಯಕ್ಷ ಚಂದ್ರು ಮಿಜರ್ಿ, ಖಜಾಂಚಿ ಮಲ್ಲಪ್ಪ ಬೀಳಗಿ ಹಾಗೂ ಮಹಾಲಿಂಗಪ್ಪ ಜಿಟ್ಟಿ, ಸಂಗಪ್ಪ ಕಾಡೇಶನವರ, ಪ್ರಕಾಶ ಬಾಡನವರ, ಬಸವರಾಜ ಗಿರಿಸಾಗರ ಇತರರು ಇದ್ದರು