ರಾಮದುರ್ಗ

ನರ್ಸಗಳ ಸೇವೆಯು ಅತಂತ್ಯ ಪ್ರಶಂಸನೀಯ: ಯಾದವಾಡ

ನರ್ಸಗಳ ಸೇವೆಯು ಅತಂತ್ಯ ಪ್ರಶಂಸನೀಯ: ಯಾದವಾಡ

ರಾಮದುರ್ಗ10: ಜೀವದ ಹಂಗು ತೊರೆದು ಕೋವಿಡ್ ಒಂದು ಮತು ಎರಡನೇಯ ಅಲೆಯಲ್ಲಿ ಸೋಂಕಿತರನ್ನು ಆರೈಕೆಮಾಡಿದ ವೈದ್ಯರು ಮತ್ತು ನರ್ಸಗಳ ಸೇವೆಯು ಅತ್ಯಂತ್ಯ ಪ್ರಶಂಸನೀಯವಾದುದು, ಸಮಾಜ ಅವರಿಗೆ ಹೆಮ್ಮೆ ವ್ಯಕ್ತಪಡಿಸುತ್ತದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಅಭಿಮಾನ ವ್ಯಕ್ತಪಡಿಸಿದರು. ಪಟ್ಟಣದ ಬಿಸಿಎಂ ವಸತಿ ನಿಯದಲ್ಲಿ  ತಾಲೂಕ ಆಡಳಿತದಿಂದಾ ಪ್ರಾರಂಭಿಸಿದ ಕೊವಿಡ್ ಕಾಳಜಿ ಕೇಂದ್ರದಲ್ಲಿ ಸೋಂಕಿತರಿಗೆ ಆಯುಷ ಇಲಾಖೆಯಿಂದ ಉಚಿತ ಔಷಧ ಕಿಟ್ಗಳನ್ನು ವಿತರಿಸಿ ಮಾತನಾಡಿದರು.

ಆದಿಕಾಲದಿಂದಲೂ ಆಯುವೇಧಿಕ ಔಷಧಿಕ್ಕೆ ತನ್ನದೆ ಆದ ಘನತೆ ಇದೆ, ಋಷಿಮುನಿಗಳ ಪರಂಪರೆ ಇದೆ ಎಂದು ನುಡಿದರು,  ಗಿಡಮೂಲಿಕೆಯಂದಾ ತಯಾರಿಸಿದ ಆಯುವರ್ೇಧಿಕ ಔಷಧಗಳನ್ನು ಆಯುಷ್ ಇಲಾಖೆಯಿಂದಾ ಕೋವಿಡ್ ಸೋಂಕಿತರಿಗೆ ನೀಡಿ ಅವರಲ್ಲಿ ನಿರೋಧಕ ಶಕ್ತಿಯು ಹೆಚ್ಚಸಲು ಸಹಾಯವಾಗಲಿದೆ ಹಾಗೂ ಪಟ್ಟಣ ನೇಕಾರ ಪೇಟೆಯಲ್ಲಿರುವ ಸರಕಾರಿ ಆಯುವರ್ೇಧ ಆಸ್ಪತ್ರೆಯನ್ನು ತಾಲೂಕಿನ ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಎಂದು ಹೇಳಿದರು 

ಸರಕಾರಿ ಆಯುವರ್ೇಧ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀರೇಶ ಗೊರಾಬಾಳ ಆಯುವರ್ೇಧಿಕ ಔಷಧಿಗಳ ಮಹತ್ವ ಮತು ಅವುಗಳ ಬಳಕೆ ಬಗ್ಗೆ ಸೋಂಕಿತರಿಗೆ ತಿಳಿಸದರು. ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾಖರ್ಾನೆ ಅಧ್ಯಕ್ಷ ಮಲ್ಲಣ್ಣಾ ಯಾದವಾಡ, ತಹಶೀಲ್ದಾರ ಮಲ್ಲಿಕಾಜರ್ುನ ಹೆಗ್ಗನ್ನವರ, ಸರಕಾರಿ ಹೊಮಿಯೋಪತಿಕ ಚಿಕಿತ್ಸಾಲಯ ಹಳೇ ತೊರಗಲ್ದ ವೈಧ್ಯಾಧಿಕಾರಿ ಡಾ ಸೈಯದ ರಜಾಕ್. ಡಾ, ತ್ರೀದೇವಿ ಸುತಾರೆ, ಡಾ. ವೀಣಾ ಮೇಗೆರಿ, ವಿರುಪಾಕ್ಷಯ್ಯ ಮೇಟಿ ಪುರಸಭೆ ಮುಖ್ಯಾಧಿಕಾರಿ ಎಸ್ ಜಿ ಅಂಭಿಗೇರ ಹಾಗೂ ಇತರರು ಹಾಜರಿದ್ದರು. ಪಟ್ಟಣದ ಬಿಸಿಎಂ ವಸತಿ ನಿಯದಲ್ಲಿ  ತಾಲೂಕ ಆಡಳಿತದಿಂದಾ ಪ್ರಾರಂಭಿಸಿದ ಕೋವಿಡ್ ಕಾಳಜಿ ಕೇಂದ್ರದಲ್ಲಿ ಸೋಂಕಿತರಿಗೆ ಆಯುಷ ಇಲಾಖೆಯಂದಾ ಉಚಿತ ಔಷಧ ಕಿಟಗಳನ್ನು ವಿತರಿಸುತ್ತಿರುವ ಶಾಸಕ ಮಹಾದೇವಪ್ಪ ಯಾದವಾಡ 

ಸುದ್ದಿ ಓದಿ