ಮಹಲಿಂಗಪುರ

ಸುಂದರ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯ : ಎಸ್‌.ಎನ್ ಪಾಟೀಲ

ಸುಂದರ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯ : ಎಸ್‌.ಎನ್ ಪಾಟೀಲ

ಪುರಸಭೆಯಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ 

ಮಹಾಲಿಂಗಪುರ 26 : ಜಗತ್ತಿನ ಪ್ರತಿ ನಗರ, ಪಟ್ಟಣ, ಹಳ್ಳಿಗಳಲ್ಲಿ ನಗರ ಸ್ವಚ್ಛವಾಗಿಡುವವರ ನಮ್ಮ ಹೆಮ್ಮೆಯ ಪೌರ ಕಾರ್ಮಿಕರು ಅವರು ದಿನಾಲೂ ಬೆಳ್ಳಿಗೆ 4.30 ಕ್ಕೆ ಎದ್ದು ನಗರ ಸ್ವಚ್ಛತೆಗೆ ಅನಿಯಾಗುತ್ತಾರೆ. ಅವರಿಂದಲೇ ಆರೋಗ್ಯವಂತ ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಆವರ ಸೇವೆ ಬೆಲೆ ಕಟಲಾಗದು ಎಂದು ಪುರಸಭೆ ಮ್ಯಾನೇಜರ ಎಸ್‌.ಎನ್ ಪಾಟೀಲ ಹೇಳಿದರು. 

 ನಗರದ ಪುರಸಭೆ ಸಭಾಭವನದಲ್ಲಿ ಹಮ್ಮಿಕೊಂಡ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಸಿ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಅವರು ಪಟ್ಟಣದ ಅಂದ ಹೆಚ್ಚಿಸುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದ್ದು, ಇವರ ಸತತ ಪ್ರಯತ್ನದಿಂದ ಮಾತ್ರ ಗ್ರಾಮ, ಪಟ್ಟಣಗಳು ಶುದ್ದ ಮತ್ತು ಸ್ವಚ್ಚವಾಗಿರಲು ಸಾಧ್ಯ, ಅಲ್ಲದೆ ಪೌರಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೋಳಿಸಿದ್ದು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಅವರು ತಮ್ಮ ವೈಯಕ್ತಿಕ ಆರೋಗ್ಯದ ಕಡೆ ಗಮನ ಹರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಹೇಳಿದರು. 

ನಂತರ ಮಾತನಾಡಿದ ಸಮುದಾಯ ಸಂಘಟನಾಧಿಕಾರಿ ಸಿ ಎಸ್ ಮಠಪತಿ ಪೌರ ಕಾರ್ಮಿಕರು ನಗರದ ನರ ಗಾಡಿಗಳಾಗಿ ನಗರ ವ್ಯವಸ್ಥೆ ಸ್ವಚ್ಛ ಮತ್ತು ಸುಂದರವಾಗಿ ಇಡುವಲ್ಲಿ ಇವರು ಗಾಳಿ ಮಳೆ ಚಳಿಯನ್ನು ಲೆಕ್ಕಿಸದೆ ತಮ್ಮ ಜೀವದ ಹಂಗು ತೊರೆದು ಕೆಲಸ ನಿರ್ವಹಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆಯುತ್ತಾರೆ. ಅವರಿಲ್ಲದೆ ನಗರ ಅಂದವಾಗಿರಲು ಸಾಧ್ಯವಿಲ್ಲ. ನಗರದ ಸಂದಿ ಗೊಂದಿಗಳನ್ನು ಲೆಕ್ಕಿಸದೆ, ಕೆಲಸ ಮಾಡಿ ನಗರದಲ್ಲಿ ರೋಗಗಳು ಭಾರದಂತೆ ನಗರ ಸ್ವಚ್ಛತೆಗಾಗಿ ಶ್ರಮ ವಹಿಸುತ್ತಾರೆ.ಅವರಿಲ್ಲದೆ ದಿನವನ್ನು ಊಹಿಸುವದು ಕಷ್ಟ ಸಾಧ್ಯ ಎಂದು ಹೇಳಿದರು. 

ನಂತರ ಮಾತನಾಡಿದ ವ್ಹಿ. ಜಿ ಕುಲಕರ್ಣಿ ಪೌರ ಕಾರ್ಮಿಕರನ್ನು ಇಂದು ವಿಶ್ವ ನೆನೆಯುತ್ತಿದೆ. ಇವರಿಲ್ಲದೆ ವಿಶ್ವ ಸ್ವಚ್ಛವಾಗಿರಲು ಸಾಧ್ಯವಿಲ್ಲ ಅವರಿಗೂ ಒಂದು ದಿನ ನಿಗದಿ ಮಾಡಿ ವಿಶ್ವ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚ್ಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಎಂದು ಹೇಳಿದರು. 

ಈ ಸಂಧರ್ಭದಲ್ಲಿ ಪೌರಕಾರ್ಮಿಕರನ್ನು ಮತ್ತು ನೂತನವಾಗಿ ಬೆಳಗಲಿ ಪಟ್ಟಣ ಪಂಚಾಯತಿಗೆ ಮುಖ್ಯಾಧಿಕಾರಿಗಳಾಗಿ ಪದೋನ್ನತಿ ಹೊಂದಿದ ನಾಮದೇವ ಲಮಾಣಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಕಂದಾಯ ನೀರೀಕ್ಷಕರಾದ ಬಿ ಎನ್, ಬಳಿಗಾರ,ಪೌರಕಾರ್ಮಿಕರ ಸಂಘದ ಅಧ್ಯಕ್ಷರಾದ ಎಂ ಕೆ ದಳವಾಯಿ, ಎಂ ಎಂ ಮುಗಳಖೊಡ,ರವಿ ಹಲಸಪ್ಪಗೋಳ, ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ, ಮಾನಿಂಗ ಕಿರಿಕಿರಿ, ವಿರೇಶ ಜೀಗೇರಿ, ರಾಜೇಶ್ವರಿ ಸೊರಗಾಂವಿ, ರಾಮು ಮಾಂಗ, ಮಾಲಿಂಗ ಮಾಂಗ, ಲಕ್ಷ್ಮೀ ಪರೀಟ,ಡಿ.ಕೆ ಜಮಖಂಡಿ ಸೇರಿ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ