ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ: ಡಾ. ಬೆಳಗಲಿ
ರಬಕವಿ-ಬನಹಟ್ಟಿ 14: ಕೊರೊನಾ ಎರಡನೇಯ ಅಲೆಯಲ್ಲಿ ಕೋರೊನಾ ವಾರಿಯರ್ಸಗಳಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾದುದು. ಪ್ರತಿನಿತ್ಯ ಮನೆಮನೆಗೆ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಮಾತೃ ಸ್ವರೂಪರು ಎಂದು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ನ ಮಾಜಿ ಉಪಾಧ್ಯಕ್ಷ ಹಾಗೂ ತೇರದಾಳ ಕ್ಷೇತ್ರದ ಕಾಂಗ್ರೆಸ್ ಧುರೀಣ ಡಾ. ಎ. ಆರ್. ಬೆಳಗಲಿ ಹೇಳಿದರು.
ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಮಾತನಾಡಿದರು. ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಗೌರವಯುತವಾಗಿ ಕಾಣಬೇಕು. ಜೀವದ ಹಂಗು ತೋರೆದು ಸಲ್ಲಿಸುತ್ತಿರುವ ಸೇವೆಯನ್ನು ತುಂಬಾ ಆದರದಿಂದ ಕಾಣಬೇಕು. ಜನರ ಮನವೊಲಿಸಿ ಲಸಿಕೆ ಹಾಕಿಸುವುದು, ಓಷಧಿ ಕಿಟ್ ವಿತರಿಸುವುದು ಹಾಗೂ ಆರೋಗ್ಯ ಮಾಹಿತಿ ನೀಡುತ್ತಿರುವ ಇವರ ಕಾರ್ಯ ಅಸಾಧಾರಣವಾದುದು. ಮುಂಬರುವ ದಿನಗಳಲ್ಲಿ ಜನರನ್ನು ಜಾಗೃತಿಗೊಳಿಸುವಲ್ಲಿ ಹೆಚ್ಚಿನ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.ಸುಮಾರು 60ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಗೈದು, ಪುಷ್ಪಾರ್ಷನೆ ಮಾಡಿ, ದಿನಸಿ ಕಿಟ್ ನೀಡಿ, ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಬಸವರಾಜ ಕೊಕಟನೂರ, ಅರುಣ ಗಾಣಿಗೇರ, ಯುಥ ಕಾಂಗ್ರೆಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸೂರಜ ಅವಟಿ, ಶಂಕರ ಕೆಸರಗೊಪ್ಪ, ಎನ್.ಎಸ್.ಯು.ಆಯ್. ಅಧ್ಯಕ್ಷ ಕಾರ್ತಿಕ ಹನಗಂಡಿ, ಆಕಾಶ ಬಿರಾದಾರಪಾಟೀಲ, ಮಹಾಂತೇಶ ಕೊಟಕನೂರ, ಪಾರೂಖ ಪಕಾಲಿ, ಸಚೀನ ಮಾಂಗ, ಲಾಲಾಸಾಬ ಪೆಂಡಾರಿ, ದಾನೇಶ ಮೈತ್ರಿ, ಡಿ.ಕೆ.ಶಿವಕುಮಾರ ಅಭಿಮಾನಿ ಬಳಗದ ಕಾರ್ಯಕರ್ತರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.