ಅಂತರರಾಷ್ಟ್ರೀಯ

ನ್ಯೂಯಾರ್ಕ್ ನಲ್ಲಿ ಡಿಸೆಂಬರ್ 7ರಿಂದ ಶಾಲೆಗಳು ಪುನರಾರಂಭ

ನ್ಯೂಯಾರ್ಕ್ ನಲ್ಲಿ  ಡಿಸೆಂಬರ್ 7ರಿಂದ  ಶಾಲೆಗಳು ಪುನರಾರಂಭ

ನ್ಯೂಯಾರ್ಕ್, ನವೆಂಬರ್ 30: ಕೊರೊನಾ  ಸಾಂಕ್ರಾಮಿಕ ಪ್ರಸರಣದ  ನಂತರ  ಶಾಲೆಗಳನ್ನು ಪುನರಾರಂಭಿಸುವುದಾಗಿ ನ್ಯೂಯಾರ್ಕ್ ನಗರ ಮೇಯರ್ ಬಿಲ್ ಡಿ ಬ್ಲಾಸಿಯೊ ಪ್ರಕಟಿಸಿದ್ದಾರೆ.

ಕೊರೊನಾ  ಸಾಂಕ್ರಾಮಿಕ ವ್ಯಾಪಿಸಿದ ನಂತರ ನ್ಯೂಯಾರ್ಕ್ ನಗರದಲ್ಲಿ  ಡಿಸೆಂಬರ್ 7 ರಿಂದ  ಸಾರ್ವಜನಿಕ ಶಾಲೆಗಳು ಮತ್ತೆ ತೆರೆಯುವುದಾಗಿ ನ್ಯೂಯಾರ್ಕ್ ನಗರದ ಮೇಯರ್ ಬಿಲ್ ಡಿ ಬ್ಲಾಸಿಯೊ ಪ್ರಕಟಿಸಿದ್ದಾರೆ.

 3 ಕೆ, ಪ್ರಿಕೆ,  ಹಾಗೂ  ಕೆ -5 ವಿದ್ಯಾರ್ಥಿಗಳಿಗಾಗಿ ನ್ಯೂಯಾರ್ಕ್ ನಗರದ 75 ಶಾಲೆಗಳು  ತೆರೆಯಲಿವೆ ಎಂದು ಮೇಯರ್ ಟ್ವೀಟ್ ಮಾಡಿದ್ದಾರೆ.

ನ್ಯೂಯಾರ್ಕ್ ನಗರದಲ್ಲಿ ಕೊರೊನಾ ಕಾರಣದಿಂದ  ಶಾಲೆಗಳನ್ನು ಮುಚ್ಚಲಾಗಿತ್ತು. ಅಮೆರಿಕಾದಲ್ಲಿ  ಈವರೆಗೆ  13,363,182 ಕೊರೊನಾ  ಪ್ರಕರಣಗಳು ವರದಿಯಾಗಿದ್ದು,   ಸೋಂಕಿನಿಂದ   2,66,813 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಸುದ್ದಿ ಓದಿ