ಮಹಲಿಂಗಪುರ

ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಬಹಳ ದೊಡ್ಡದು : ಶಾಸಕ ಸಿದ್ದು ಸವದಿ

ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಬಹಳ ದೊಡ್ಡದು : ಶಾಸಕ ಸಿದ್ದು ಸವದಿ

71 ನೇ ಸಹಕಾರ ಸಪ್ತಾಹ  

ಮಹಾಲಿಂಗಪುರ 14: ಯಾವುದೇ ದೇಶದ ಪ್ರಗತಿ ಹೊಂದಬೇಕಾದರೆ ಸಹಕಾರಿ ಸಂಘಗಳ ಕೊಡುಗೆ ಬೇಕೇ ಬೇಕು. ಭಾರತದಂತ ಬಹು ಜನಸಂಖ್ಯೆಯುಳ್ಳ ದೇಶಕ್ಕೆ ಪೂರ್ವಜರ ಕೊಡುಗೆ ದೊಡ್ಡದಿದೆ ತಮ್ಮ ತಮ್ಮಲ್ಲಿ ಸಹಕಾರ ವೃದ್ಧಿಸಿಕೊಂಡು ಮಾದರಿ ಜೀವನ ನೆಡೆಸಿದ್ದು ಇಂದು ಜಗತ್ತಿಗೆ ಮಾದರಿ ಸಹಕಾರಿ ತತ್ವಕ್ಕೆ ಕಾರಣವಾಗಿದೆ. ಮನುಷ್ಯ ಅಭಿವೃದ್ದಿ ಹೊಂದಬೇಕಾದರೆ ಪರಸ್ಪರ ಸಹಕಾರ ಮುಖ್ಯ ಹಾಗೆ ದೇಶದ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಸಹಕಾರಿ ಸಂಘಗಳ ಪಾತ್ರ ಬಹಳ ದೊಡ್ಡದಿದೆ ಎಂದು ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಹೇಳಿದರು. 

ಅವರು ನಗರದ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ ಬಾಗಲಕೋಟ, ಮಹಾಲಿಂಗಪುರ ಅರ್ಬನ ಕೋ ಆಫ್ ಬ್ಯಾಂಕ್, ಪಿ ಕೆ ಪಿ ಎಸ್ ಮಹಾಲಿಂಗಪುರ, ಕನಕದಾಸ ಪತ್ತಿನ ಸಹಕಾರಿ ಸಂಘ, ಶಿವಲಿಂಗೇಶ್ವರ ಅರ್ಬನ ಕೋ ಆಫ್ ಲಿ ಸೈದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ತಾಲೂಕಾ ಮಟ್ಟದ 71 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ "ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ "ಎಂಬ ಧ್ಯೇಯ ವಾಕ್ಯದಲ್ಲಿ ಈ ವರ್ಷ ಸಹಕಾರಿ ಸಪ್ತಾಹ ಆಚರಿಸಲಾಗುತ್ತಿದೆ.ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕೃಷಿ ಪತ್ತಿನ ಸಹಕಾರ ಕ್ಷೇತ್ರಕ್ಕೆ ಬುನಾದಿ ಹಾಕಿದ್ದು. 1904 ರಲ್ಲಿ ಗದಗ ಜಿಲ್ಲೆಯ ಕನಗಿನಹಾಳ ಗ್ರಾಮದ ಸಣ್ಣರಾಮನಗೌಡ ಸಿದ್ದರಾಮನಗೌಡ ಪಾಟೀಲ, ಅವರು ಅಂದು ಗ್ರಾಮದಲ್ಲಿನ ಕೆಲ ಸಮಾನ ಮನಸ್ಕ ರೈತರನ್ನು ಒಗ್ಗೂಡಿಸಿ ದೇಶದ ಮೊದಲ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿದರು. 

ಇಂದು ಇಡೀ ದೇಶದ ಆಧಾರವೇ ಸಹಕಾರ ಸಂಘಗಳು ಇಂದು ದೇಶದಲ್ಲಿ ಇಂದು 7 ಲಕ್ಷಕ್ಕೂ ಅಧಿಕ ಸಹಕಾರ ಸಂಘಗಳ ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕೃಷಿ ಮತ್ತು ಸಂಬಂದಿಸಿದ ಕ್ಷೇತ್ರಗಳಲ್ಲಿ ಜನರ ಜೀವನದ ಅವಿಬಾಜ್ಯ ಅಂಗಗಳಾಗಿ . ದೇಶದ ಸಾಮಾಜಿಕ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. 

ರಾಜ್ಯ ಸಹಕಾರಿ ಕ್ಷೇತ್ರಕ್ಕೆ 120 ವರ್ಷಗಳ ಇತಿಹಾಸವಿದ್ದು. ರಾಜ್ಯದಲ್ಲಿ ಇಂದು ಸಹಕಾರ ಕ್ಷೇತ್ರ ಉತ್ತಮವಾಗಿ ಬೆಳವಣಿಗೆ ಹೊಂದಿದೆ. ಮಹಾತ್ಮಾ ಗಾಂಧಿಜಿ ಅವರು ದೇಶ ಹಾಗೂ ಜನರ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಅಗತ್ಯವೆಂದು. ಹೇಳಿದರು ರಾಜ್ಯ ಸರ್ಕಾರವು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡಿ ದೇಶದಲ್ಲಿ ಮೊದಲ ಸ್ಥಾನ ಹೊಂದುವಂತಾಗಲಿ. ಅಧ್ಯಕ್ಷರು ನಿರ್ದೇಶಕರು, ಸಿಬ್ಬಂದಿಗಳು ಪ್ರಾಮಾಣಿಕ ಮತ್ತು ನಿಸ್ವಾರ್ಥಗಳಾಗಿ ಸೆವೆ ಮಾಡಿದರೆ ಯಾವ ಸಂಘವು ಹಿಂದುಳಿಯಲು ಸಾಧ್ಯವಿಲ್ಲ ಎಂದರು. 

ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ ಕೆ ಎಲ್ ಇ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಶಿವಲಿಂಗ ಸಿದ್ನಾಳ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿ ಎರಡನೆಯ ಸ್ಥಾನದಲ್ಲಿದ್ದು ಉತ್ತಮ ಅಭಿವೃದ್ಧಿ ಸಾಧಿಸಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಹೆಚ್ಚಿನ ಪ್ರಗತಿಗೆ ಸಹಕರಿಸಬೇಕು. 

ರಾಜ್ಯದ ಸಹಕಾರ ಮಹಾಮಂಡಳವು ರೈತರ ಅಭಿವೃದ್ಧಿಗಾಗಿ ಈ ವರ್ಷ್‌ 36 ಲಕ್ಷ ರೈತರಿಗೆ 27 ಸಾವಿರ ಕೋಟಿ ರೂಪಾಯಿ ಬೆಳೆ ಸಾಲ ವಿತರಿಸುವ ಗುರಿ ಹೊಂದಿದೆ. ಸಹಕಾರ ಸಂಸ್ಥೆಗಳ ಸದಸ್ಯರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ 41 ಲಕ್ಷ ಸದಸ್ಯರು ಇದರಲ್ಲಿ ನೊಂದಣಿಯಾಗುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ 47 ಸಾವಿರ ಸಹಕಾರ ಸಂಸ್ಥೆಗಳು ಕ್ರಿಯಾಶೀಲ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಇದರಲ್ಲಿ 2 ಕೋಟಿ 72 ಲಕ್ಷ ಸದಸ್ಯರಿದ್ದಾರೆ.ದೇಶದಲ್ಲಿ ಸಹಕಾರ ಸಂಘ ಸಂಸ್ಥೆಗಳಲ್ಲಿ ಒಟ್ಟು 30 ಕೋಟಿ ಸದಸ್ಯರಿದ್ದಾರೆ. ಇದು ವಿಶ್ವದ ಅತೀ ದೊಡ್ಡ ಸಹಕಾರ ಕ್ಷೇತ್ರವಾಗಿದೆ. 

ಹೈನುಗಾರಿಕೆ ಕೃಷಿ ಪತ್ತಿನ ಸಹಕಾರ ವ್ಯವಸ್ಥೆ, ಪಟ್ಟಣ ಸಹಕಾರ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಅತ್ಯುತ್ತಮ ಸೇವೆ ಸಲ್ಲಿಸುತ್ತಿವೆ ಇದರಿಂದ ಉದ್ಯೋಗ ಸೃಷ್ಟಿಯಾಗಿ ರಾಷ್ಟ್ರದ ಜಿ ಡಿ ಪಿ ಹೆಚ್ಚಿಸುವ ಪ್ರಮುಖ ಪಾತ್ರ ವಹಿಸುತ್ತಿವೆ. ಮುಂದಿನ 2047 ರ ಹೊತ್ತಿಗೆ ಭಾರತ 30 ಟ್ರಿಲಿಯನ ಅಂದರೆ (ಮೂವತ್ತು ಲಕ್ಷ ಕೋಟಿ )ಆರ್ಥಿಕತೆ ಹೊಂದಿ ವಿಶ್ವದ ಸುಪರ ಪಾವರ ದೇಶವಾಗಿ ಹೊರ ಹೊಮ್ಮುವ ಗುರಿ ಹೊಂದಿದ್ದು ಇದನ್ನು ಸಾದಿಸಲು ಸಹಕಾರ ಕ್ಷೇತ್ರದ ಕೊಡುಗೆ ಬಹು ದೊಡ್ಡದಿದೆ ಎಂದರು. 

ದಿವ್ಯ ಸಾನಿಧ್ಯ ವಹಿಸಿದ ಸಹಜಾನಂದ ಮಹಾಸ್ವಾಮಿಗಳು ಹಾಗೂ ವೇದಿಕೆ ಮೇಲಿರುವ ಎಲ್ಲ ಗಣ್ಯ ಮಾನ್ಯರು ಸಹಕಾರ ಪಿತಾಮಹ ಶ್ರೀ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರ ಭಾವಚಿತ್ರಕ್ಕೆ ಪುಷ​‍್ಾರೆ್ಪಣ ಮಾಡಿದರು. 

ನಗರದ ಸಿದ್ದಾರೂಢ ಮಠದ ಪ. ಪೂ . ಷ, ಬ್ರ, ಶ್ರೀ ಸಹಜಾನಂದ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ ಜೀವಕ್ಕೆ ಗಾಳಿ ಎಷ್ಟು ಮುಖ್ಯವೋ ಬದುಕಿಗೆ ಸಹಕಾರ ಅಷ್ಟೇ ಮುಖ್ಯ, "ಗಾಳಿ ಇಲ್ಲದಿದ್ದರೆ ಜೀವ ಹೋಗುತ್ತದೆ. ಸಹಕಾರ ಇಲ್ಲದಿದ್ದರೆ ಬದುಕು ನಿಲ್ಲುತ್ತದೆ."ಸಹಕಾರವೇ ಜೀವನ ಸೂತ್ರವಾದರೆ ಬದುಕು ಸ್ವರ್ಗಮಾಯವಾಗುತ್ತದೆ. ಎಂದರು. 

ಕಾರ್ಯಕ್ರಮಕ್ಕೂ ಮುನ್ನ ಬಾಗಲಕೋಟ ಜಿಲ್ಲಾ ಸಹಕಾರ ಯೂನಿಯನ ಉಪಾಧ್ಯಕ್ಷರಾದ ರಾಮಗೊಂಡ ಎಸ್ ಮಿರ್ಜಿ ಸಪ್ತವರ್ಣದ ಸಹಕಾರ ಧ್ವಜಾರೋಹಣ ನೆರವೇರಿಸಿದರು. 

ಈ ಸಂಧರ್ಭದಲ್ಲಿ ರಂಗಣ್ಣಗೌಡ ಪಾಟೀಲ,ಲಕ್ಕಪ್ಪ ಪಾಟೀಲ, ರಾಮನಗೌಡ ಪಾಟೀಲ ಮಾತನಾಡಿದರು ಯಲ್ಲಣ್ಣಗೌಡ ಪಾಟೀಲ, ಶೇಖರ ಅಂಗಡಿ, ಮಹಾಲಿಂಗಪ್ಪಾ ಜಕ್ಕಣ್ಣವರ, ಜಿ ಎಸ್ ಗೊಂಬಿ,ಮಾಲಾ ಬಾವಲತ್ತಿ, ಚಂದ್ರಶೇಖರ ಆದಬಸಪ್ಪಗೋಳ, ಮಲ್ಲಿಕಾರ್ಜುನ್ ಹುಂಡೇಕಾರ, ಸುರೇಶ ಹಾದಿಮನಿ, ಈರಯ್ಯ ಹಿರೇಮಠ, ಶ್ರೀಮತಿ ವಿಜಯಲಕ್ಷ್ಮಿ ಪಾಟೀಲ, ಮಹಾಲಿಂಗ ನಾಯಕ ಚಿನ್ನಪ್ಪ ಬಾಯಪ್ಪಗೋಳ, ಶ್ರೀಮತಿ ಜಯಶ್ರೀ ಸವದಿ,ಶ್ರೀನಿವಾಸ ಸಾರವಾಡ, ಎಂ ಎಂ ಮರನೂರ ಈರ​‍್ಪ ಡಿನ್ನಮನಿ ಸೇರಿ ಹಲವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

ಈ ಸಂಧರ್ಭದಲ್ಲಿ ರಬಕವಿ ಬನಹಟ್ಟಿ ತಾಲೂಕಿನ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರು,ನಿರ್ದೇಶಕರು. ಸದಸ್ಯರು ಸಿಬ್ಬಂದಿಗಳು ಭಾಗವಹಿಸಿದ್ದರು. ಹಲವು ಗಣ್ಯ ಮಾನ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ನಿಂಗರಾಜ ಗುಡಿ ನಿರೂಪಿಸಿದರು. ಅನ್ನಪೂರ್ಣಾ ಹೇಮವಾಡಗಿ ವಂದಿಸಿದರು. 


ಸುದ್ದಿ ಓದಿ