ಮಹಲಿಂಗಪುರ

ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬನೆಗೆ ದಾರಿ ಶ್ಲಾಘನೀಯ : ಸಹಜಾನಂದ ಶ್ರೀ

ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬನೆಗೆ ದಾರಿ ಶ್ಲಾಘನೀಯ : ಸಹಜಾನಂದ ಶ್ರೀ

ಮಹಾಲಿಂಗಪುರ,09 : ಜಾತಿ ಭೇದವಿಲ್ಲದೇ ಸರ್ವ ಧರ್ಮದ ಮಹಿಳೆಯರಿಗೂ ಉಚಿತ ಉದ್ಯೋಗ ತರಬೇತಿ ನೀಡಿ ಅವರ ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕಿಗೆ ದಾರಿಯಾಗುತ್ತಿರುವ ಸ್ಫೂರ್ತಿ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಹೇಳಿದರು. 

ಸ್ಫೂರ್ತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಸ್ಥಳೀಯ ಕಾನಿಪ ಸಂಘದ ಸಹಯೋಗದಲ್ಲಿ  ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಭಾಭವನದಲ್ಲಿ ಜರುಗಿದ ಮಹಿಳೆಯರಿಗೆ ಉಚಿತ ಸ್ವಯಂ ಉದ್ಯೋಗ ತರಬೇತಿ ಶಿಬಿದರದ ಸವಿಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಪುರಸಭೆ ಉಪಾಧ್ಯಕ್ಷೆ ಶಿಲಾ ಬಾವಿಕಟ್ಟಿ ಮಾತನಾಡಿ, ಶಿಬಿರದಲ್ಲಿ ತರಬೇತಿ ಪಡೆದ ಅರ್ಹ ಮಹಿಳೆಯರಿಗೆ ಪುರಸಭೆಯಿಂದ ಸಹಾಯದ ಭರವಸೆ ನೀಡಿದರು. 

ಪುರಸಭಾ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಸ್ಥಳೀಯ ಬಸವನಗರದಲ್ಲಿ ತರಬೇತಿ ಶಿಬಿರ ಏರಿ​‍್ಡಸಿ ಇನ್ನೂ ಹೆಚ್ಚಿನ ಮಹಿಳೆಯರಿಗೆ ತರಬೇತಿ ನೀಡುವುದಾಗಿ ಹೇಳಿದರು. 

ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಬಸವರಾಜ ಬಳಗಾರ, ವಿಜಯ ತಮದಡ್ಡಿ, ಪತ್ರಕರ್ತ ನಾರನಗೌಡ ಉತ್ತಂಗಿ ಮಾತನಾಡಿದರು. ಚಿದಾನಂದ ಮಠಪ, ಶಿವಾನಂದ ಕೊಣ್ಣೂರ ಇತರರಿದ್ದರು. 

ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಅಧ್ಯಕ್ಷತೆ ವಹಿಸಿ, ತರಬೇತುದಾರ ಎಂ.ಗುಡ್ಡಪ್ಪ ಸ್ವಾಗತಿಸಿ ನಿರೂಪಿಸಿದರು. 


ಸುದ್ದಿ ಓದಿ