3 ಕೋಟಿ 77 ಲಕ್ಷ ದಾಟಿದ ಜಾಗತಿಕ ಕೊವಿಡ್ ಪ್ರಕರಣಗಳ ಸಂಖ್ಯೆ
ವಾಷಿಂಗ್ಟನ್, ಅ 13; ಜಾಗತಿಕ ಕೊವಿಡ್ ಪ್ರಕರಣಗಳ ಸಂಖ್ಯೆ 3 ಕೋಟಿ 77 ಲಕ್ಷ ದಾಟಿದ್ದು, ಸಾವಿನ ಸಂಖ್ಯೆ 1,078,860ಕ್ಕೆ ಏರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ. ಸದ್ಯ, ವಿಶ್ವದಾದ್ಯಂತ ಒಟ್ಟು ಪ್ರಕರಣಗಳ ಸಂಖ್ಯೆ 3,77,38,569, ಸಾವಿನ ಸಂಖ್ಯೆ 1,078,868ರಷ್ಟಿದೆ ಎಂದು ವಿಶ್ವವಿದ್ಯಾಲಯದ ಸಿಸ್ಟಮ್ಸ್ ಸೈನ್ಸ್ ಮತ್ತು ಇಂಜನಿಯರಿಂಗ್ ಕೇಂದ್ರ ತನ್ನ ನವೀಕೃತ ಮಾಹಿತಿ ಸಂಚಿಕೆಯಲ್ಲಿ ತಿಳಿಸಿದೆ.
ಅಮೆರಿಕದಲ್ಲಿ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿದ್ದು, ಈ ಸಂಖ್ಯೆ ಕ್ರಮವಾಗಿ 78,03,884 ಮತ್ತು 2,14,063ರಷ್ಟಿದೆ ಎಂದು ಕೇಂದ್ರ ತಿಳಿಸಿದೆ. ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಕ್ರಮವಾಗಿ 71,20,538 ಮತ್ತು 1,09,150 ರಷ್ಟಿದೆ. ನಂತರದ ಸ್ಥಾನದಲ್ಲಿ ಬ್ರೆಜಿಲ್ (51,03,408), ರಷ್ಯಾ (13,05,093), ಕೊಲಂಬಿಯಾ (9,19,083) ಮತ್ತು ಅರ್ಜೆಂಟೈನಾ ಇವೆ. ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ ಈವರೆಗೆ 1,50,689 ಪ್ರಕರಣಗಳು ವರದಿಯಾಗಿವೆ. 20,000ಕ್ಕೂ ಅಧಿಕ ಸಾವುಗಳು ವರದಿಯಾಗಿರುವ ದೇಶಗಳಲ್ಲಿ ಮೆಕ್ಸಿಕೋ (42,965), ಇಟಲಿ (36,205) ಮತ್ತು ಪೆರು (33,305) ಸೇರಿವೆ.