ಪ್ರಧಾನಿ ಮೋದಿ ಭೇಟಿ ಬಳಿಕವೇ ನೂತನ ಸಂಪುಟ ರಚನೆ:ಆರ್.ಅಶೋಕ್

ಪ್ರಧಾನಿ ಮೋದಿ ಭೇಟಿ ಬಳಿಕವೇ ನೂತನ ಸಂಪುಟ ರಚನೆ:ಆರ್.ಅಶೋಕ್

ಬೆಂಗಳೂರು,ಜು.28 ಸಚಿವ ಸಂಪುಟ ರಚನೆ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಧಾನಿ ನರೇಂದ್ರಮೋದಿಯವರನ್ನು ಭೇಟಿ ಮಾಡಲಿದ್ದು,ಪ್ರಧಾನಿ ಭೇಟಿ ಬಳಿಕವೇ ಸಂಪುಟ ರಚನೆಯಾಗಲಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಹುಶಃ ಒಂದು ವಾರದಲ್ಲಿಯೇ ಸಂಪುಟ ರಚನೆ ಆಗಬಹುದು ಎಂದ ಅವರು,
ಹಿರಿಯರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಬಗ್ಗೆ ನಮ್ಮ ಪಕ್ಷದಲ್ಲಿ ಈ ರೀತಿಯ ಯಾವುದೇ ನಿಯಮಗಳಿಲ್ಲ.ಹಿರಿತನವನ್ನು ನೋಡಿ ಸಚಿವ ಸ್ಥಾನ ನೀಡಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿ ಓದಿ