ಪವಿತ್ರ ಕ್ಷೇತ್ರ ಧರ್ಮಸ್ಥಳದ ಹೆಸರು ಇಂದೀಗ ಭಕ್ತರ ಆಶಾಕಿರಣ

ಪವಿತ್ರ ಕ್ಷೇತ್ರ ಧರ್ಮಸ್ಥಳದ ಹೆಸರು ಇಂದೀಗ ಭಕ್ತರ ಆಶಾಕಿರಣ

            ಧರ್ಮಸ್ಥಳ 22:  ಶ್ರೀ ಮಂಜುನಾಥ ಸ್ವಾಮಿಯ ಭಕ್ತರಿಗೆ ಆಶಾಕಿರಣಕೆಲವು ತಿಂಗಳ ಹಿಂದೆ ಕೇರಳ ಮತ್ತು ರಾಷ್ಟ್ರೀಯ ಮಾಧ್ಯಮಗಳಿಂದ ಬಾರಿ ಪ್ರಮಾಣದಲ್ಲಿ ಸುದ್ದಿಯಾಗಿದ್ದು, ಪವಿತ್ರ ಕ್ಷೇತ್ರ ಧರ್ಮಸ್ಥಳದ ಹೆಸರು ಇಂದೀಗ ಭಕ್ತರ ಆಶಾಕಿರಣವಾಗಿದೆ. ರಾಜ್ಯದ ಯಾವುದೇ ಸುದ್ದಿ ಮಾಧ್ಯಮಗಳು ಅಷ್ಟೋಂದು ಪ್ರಚಾರ ಮಾಡಿರಲಿಲ್ಲ. ಆದರೆ ಸುಳ್ಳು ಮೂರು ದಿನ ಇರಲ್ಲ ಎನ್ನುವ ಹಾಗೇ ಕ್ಷೇತ್ರಕ್ಕೆ ಕಳಂಕ ತಂದಿದ್ದ ಕಿಡಿಗೇಡಿಗಳು ಕಳಂಕಕ್ಕಿತರು ಅಡ್ರೆಸ್ ಇಲ್ಲದೇ, ನಾಪತ್ತೆಯಾಗಿದ್ದಾರೆ ಅಥವಾ ಪರಾರಿಯಾಗಿದ್ದಾರೆ. ಆ ಕಿಡಿಗೇಡಿಗಳು ಇನ್ನೂ ಮೇಲೆ ಏನು ಹೇಳಿದರೂ ಯಾರೂ ನಂಬಲ್ಲ. ನಂಬಿಕೆ ಕಳೆದುಕೊಂಡು, ಜನರು, ಸಾರ್ವಜನಿಕರ ದೃಷ್ಟಿಯಲ್ಲಿ ಶತ್ರುಗಳಾಗಿದ್ದಾರೆ. ಎಸ್‌.ಐ.ಟಿ ರಚನೆ ಮಾಡಿದ್ದು ಒಳ್ಳೆಯದೇ ಆಯಿತು. ಜನರಿಗೆ, ಸಾರ್ವಜನಿಕರಿಗೆ ಸತ್ಯ ದರ್ಶನವಾಯಿತು. ಒಂದು ರೀತಿಯಲ್ಲಿ ಹೇಳುವುದಾದರೆ ಧರ್ಮಸ್ಥಳ ಶಾಂತ ಗ್ರಾಮ ಎಂತಲೂ ಕರೆಯಲ್ಪಡುವುದು.

            ಏಕೆಂದರೆ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ನೆಲೆಸಿರುವ ಅತ್ಯಂತ ಪವಿತ್ರ ಕ್ಷೇತ್ರ.ಭಕ್ತರ ಆರಾಧ್ಯ ದೈವ ಮಂಜುನಾಥ್ ಸ್ವಾಮಿ, ಅಣ್ಣಪ್ಪ ಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಲಕ್ಷಾಂತರ ಭಕ್ತರು  ಮಂಜುನಾಥ್ ಸ್ವಾಮಿಯ ಭಕ್ತರ ಇದ್ದಾರೆ. ದಿನನಿತ್ಯವೂ ಜನನಿಬಿಡ ಪ್ರದೇಶದಿಂದ ಕೂಡಿದೆ. ಅಲ್ಲದೇ ಶಾಂತ ರೀತಿಯಲ್ಲಿ ದೇವರ ದರ್ಶನ ಪಡೆದು, ಅನ್ನದಾಸೋಹ ಸೇವಿಸುತ್ತಾರೆ.  ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಕರ್ನಾಟಕದ ಪ್ರತಿಯೊಬ್ಬರ ಮನೆಯಲ್ಲೂ ಪೋಟೋ ಸಹಿತ ಮಂಜುನಾಥ ಸ್ವಾಮಿ ಪೂಜೆಸಲು ಪಡುತ್ತಾನೆ ಎಂದರೆ ತಪ್ಪಾಗಲಾರದು. ನಾನು ಮತ್ತು ನನ್ನ ತಾಯಿ  ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನಿತರಾಗಿ ವಾಸ್ತವಾಂಶ ಸತ್ಯವನ್ನು ತಿಳಿವಂತಾಯಿತು. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಮಂಜುನಾಥ್ ಸ್ವಾಮಿ ದೇವಸ್ಥಾನ ಮತ್ತು ಸುಳ್ಳ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಕರ್ನಾಟಕ ರಾಜ್ಯದ ಎರಡು ಕಣ್ಣುಗಳು ಇದ್ದ ಹಾಗೇ ಎಂದರೆ ತಪ್ಪಾಗಲಾರದು. ವೀರೇಶ ಧೂಪದಮಠ 


ಸುದ್ದಿ ಓದಿ