ಮಹಲಿಂಗಪುರ

ಪುರಸಭೆ 19ಲಕ್ಷ 84ಸಾವಿರ ರೂಗಳ ಉಳಿತಾಯ ಬಜೆಟ ಮಂಡನೆ.

ಪುರಸಭೆ 19ಲಕ್ಷ 84ಸಾವಿರ ರೂಗಳ ಉಳಿತಾಯ ಬಜೆಟ ಮಂಡನೆ.

ಮಹಾಲಿಂಗಪುರ : 19ಲಕ್ಷ 84ಸಾವಿರದ 66ರೂಗಳ ಉಳಿತಾಯ ಬಜೆಟನ್ನು ಪುರಸಭಾ ಅಧ್ಯಕ್ಷೆ ಶ್ರೀಮತಿ ಸ್ನೇಹಲ್ ಅಂಗಡಿ ಮಂಡಿಸಿ, ಪಟ್ಟಣದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು.  

ಗುರುವಾರ ಮುಂಜಾನೆ ಸ್ಥಳೀಯ ಪುರಸಭೆಯಲ್ಲಿ 2021-22 ನೇ ಸಾಲಿನ ಪರಿಷ್ಕ್ರತ ಆಯವ್ಯಯ ಅಂದಾಜು ಮತ್ತು 2022-23ನೇ ಸಾಲಿನ ಆಯವ್ಯಯ ಅಂದಾಜು ಪತ್ರಿಕೆಯನ್ನು ತಮ್ಮ ಅಧ್ಯಕ್ಷತೆಯಲ್ಲಿ ಬಿಡುಗಡೆಗೊಳಿಸಿ ಒಟ್ಟು ಆದಾಯ 21,39,77,216 ರೂ ಗಳು ಮತ್ತು ಒಟ್ಟು ಖರ್ಚು 21,19,93,150 ಸೇರಿದಂತೆ ಇನ್ನಿತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. 

ಪುರಸಭೆಗೆ ವಿವಿಧ ಮೂಲಗಳಿಂದ ಆದಾಯ : ಕಂದಾಯ ವಿಭಾಗದಿಂದ ಆಸ್ತಿ ತೆರಿಗೆ 1ಕೋ.20ಲಕ್ಷ, ಸಂಕಿರ್ಣಗಳ ಬಾಡಿಗೆ 50.31 ಸಾವಿರ, ಅಭಿವೃದ್ದಿ ಶುಲ್ಕ 23ಲಕ್ಷ, ಕಟ್ಟಡಗಳ ಅನುಮತಿ ಪತ್ರ 4ಲಕ್ಷ, ಲೈಸೆನ್ಸ ಫೀ, 5.10ಸಾವಿರ, ಟೆಂಡರ ಇತರೆ 80ಸಾವಿರ, ನೀರಿನ ದರ 33. 39 ಸಾವಿರ, ಜಾತ್ರೆ ಮತ್ತು ಉರುಸುಗಳಿಂದ 4.50ಸಾವಿರ, ಮಾರುಕಟ್ಟೆ ಫೀ, 10ಲಕ್ಷ, ಬಡ್ಡಿ ಮತ್ತು ದಂಡ 2.80 ಸಾವಿರ, ಇತರೆ ತೆರಿಗೆ ಜಿ.ಎಸ್‌.ಟಿ, ನೌಕರರ ವೇತನ ಖಡಿತ ಮತ್ತು ಇತರೆ 7ಕೋ74ಲ51 ಸಾವಿರ, ವೇತನ ಅನುದಾನ 2ಕೋ10ಲಕ್ಷ, ಎಸ್‌.ಎಫ್‌.ಸಿ ಮುಕ್ತ ನಿಧಿ 1ಕೋ, ಪ್ರೋತ್ಸಾಹ ಧನ 10ಲಕ್ಷ, ವಿದ್ಯುತ ಬಿಲ್ 2ಕೋ10ಲಕ್ಷ, 15ನೇ ಹಣಕಾಸು ಯೋಜನೆ 1ಕೋ90ಲಕ್ಷ , ಬರ ಪರಿಹಾರ 01ಕೋಟಿ, ಸ್ವರ್ಣ ಜಯಂತಿ ಮತ್ತು ಇತರೆ 2ಲಕ್ಷ50ಸಾವಿರ, ಗಣತಿಯಿಂದ 4 ಲಕ್ಷ, ಸ್ವಚ್ಚ ಭಾರತ 25ಲಕ್ಷ, ಎಸ್‌.ಸಿ.ಪಿ.ಟಿ.ಎಸ್‌.ಪಿ ವಿಶೇಷ ಅನುದಾನ 75ಲಕ್ಷ, ಕೆರೆಗೆ 1ಕೋಟಿ, ಪಟ್ಟಣದ ಅಭಿವೃದ್ಧಿಗೆ 1ಕೋ50ಲಕ್ಷ ಹೀಗೆ ಒಟ್ಟು ಆಧಾಯ 21ಕೋ14ಲಕ್ಷ91 ಸಾವಿರ ಇದ್ದು ಆರಂಬಿಕ ಶುಲ್ಕ 24ಲಕ್ಷ86ಸಾವಿರ216 ರೂ.ಗಳಿರುತ್ತವೆ.  

ಪುರಸಭೆಯ ಖರ್ಚಿನ ವಿವರ : ನಿವೃತ್ತಿ ವೇತನ, ಸಿಬ್ಬಂದಿಗಳ ರಜೆ ಇತರೆ 2ಕೋ60ಲಕ್ಷ 46ಸಾವಿರ, ಲೆಕ್ಕ ಪರಿಶೋಧನ ವೆಚ್ಚ 7ಲಕ್ಷ 50ಸಾವಿರ, ವಾಹನಗಳ ಬಾಡಿಗೆ 5ಲ????50ಸಾವಿರ, ಕಾನೂನು ವೆಚ್ಚ 2ಲಕ್ಷ, ಸಾಮಾನ್ಯ 5ಲಕ್ಷ 90ಸಾವಿರ ಜನಗಣತಿ ಗೌರವಧನ 4 ಲಕ್ಷ, ಜಾಹಿರಾತು 5 ಲಕ್ಷ, ಸಾಮಾನ್ಯ, ಇತರೆ 54ಲಕ್ಷ, ನೀರಿನ ನಿರ್ವಹಣೆ 96ಲಕ್ಷ 70ಸಾವಿರ, ದಾರಿ ವಿದ್ಯುತ ಬಿಲ್ 2ಕೋ10ಲಕ್ಷ, ದುರಸ್ಥಿ 25 ಲಕ್ಷ ಹೀಗೆ ಇತರೆ ಖರ್ಚುಗಳು ಸೇರಿ ಒಟ್ಟು 21 ಕೋಟಿ 19ಲಕ್ಷ 93ಸಾವಿರ 150ರೂ ಖರ್ಚಾದರೆ ಒಟ್ಟು ಆದಾಯ 21ಕೋ 39ಲಕ್ಷ 77 ಸಾವಿರ 216 ರೂ ಗಳಾದರೆ ಇದರಲ್ಲಿ ಉಳಿದ 19 ಲಕ್ಷ 84 ಸಾವಿರ 66 ರೂಗಳ ಉಳಿತಾಯದ ಬಜೆಟ್ ಇದಾಗಿದೆ ಎಂದು ಅಧ್ಯಕ್ಷೆ ಶ್ರೀಮತಿ ಸ್ನೇಹಲ್ ಅಂಗಡಿಯವರು ಸಭೆಗೆ ತಿಳಿಸಿದರು.  

ಸಭೆಯಲ್ಲಿ ಸ್ಥಾಯಿ ಸಮಿತಿಯ ಮತ್ತು ಹಿಂದಿನ ನಡುವಳಿಕೆ ಓದಿ ಡಿಸೆಂಬರ 2021 ರ ಜಮಾ ಖರ್ಚಿಗೆ ಅನುಮೋದನೆ, ಪುರಸಭೆ ನಿಧಿಯಲ್ಲಿ ಅಧ್ಯಕ್ಷರು ಮತ್ತು ಸಭೆ ಕಾಮಗಾರಿಗಳಿಗೆ ಮಂಜೂರಾತಿ ನೀಡಿತು.ಮುಖ್ಯ ಮಂತ್ರಿ ಅಮೃತ ನಗರೋತ್ಥಾನ 10 ಕೋ ಕ್ರಿಯಾ ಯೋಜನೆ ತಯಾರಿಸಲು ಚರ್ಚಿಸಲಾಯಿತು. ಉದ್ದಿಮೆ ಪರವಾಣಿಗೆ ಟ್ರೇಡ್ ಲೈಸೆನ್ಸ ದರಕ್ಕೆ ಅನುಮೋದನೆ. 2021-2022 ಸಾಲೀನ ಎನ್‌.ಎಪ್‌.ಸಿ ಮತ್ತು ಸ್ಥಳೀಯ ನಿಧಿ 24.10ಅ 7.25 ಅ ಮತ್ತು 5ಅ ಫಲಾನುಭವಿಗಳ ಆಯ್ಕೆಗೆ ನಿರ್ಧರಿಸಲಾಯಿತು. 

ವಾರ್ಡ್ಗಳಲ್ಲಿ ಸದಸ್ಯರ ಅಳಲು : ಕಾಂಗ್ರೆಸ್ ಹಿರಿಯ ಮುಖಂಡರಾದ ಯಲ್ಲಗೌಡ ಪಾಟೀಲ್, ಜಾವೇದ್ ಭಾಗವಾನ್, ಬಲವಂತಗೌಡ ಪಾಟೀಲ್ ಹಾಗೂ ಮುಸ್ತಾಖ ಚಿಕ್ಕೋಡಿ ಪ್ರತಿವಾರ್ಡಿಗೂ ಅನುದಾನ, ಆಸನಗಳು ಒಟ್ಟಾರೆ ಅಭಿವೃದ್ಧಿ ಕಾರ್ಯಗಳಲ್ಲಿ ತಾರತಮ್ಯ ಸಲ್ಲ ಎಂದು ಮುಖ್ಯಾಧಿಕಾರಿಗಳಿಗೆ ತಿಳಿಸಿದರು. ಬಸವನಗರ ವಾರ್ಡ್‌ ನಂಬರ್ 6ರಲ್ಲಿ ಅನುದಾನವಿಲ್ಲದೆ ಅಭಿವೃದ್ಧಿ ಕೆಲಸಗಳು ಕುಂಟಿತಗೊಂಡಿವೆ.ಲೈಟ್ ವ್ಯವಸ್ಥೆ ಸರಿಯಾಗಿಲ್ಲ ಹಾಗೂ ರಸ್ತೆ, ಚರಂಡಿ ಸ್ವಚ್ಛತೆ ಬಗ್ಗೆ ಗಮನಹರಿಸಲು ಸವಿತಾ ಹುರಕಡ್ಲಿ ಮುಖ್ಯಾಧಿಕಾರಿಗಳಿಗೆ ತಿಳಿಸಿದರು. ಟ್ವಾಯಿಲೆಟ್ ಗುತ್ತಿಗೆ ನಿಂತುಹೋದ ಬಗೆಗೆ ಸದಸ್ಯ ರಾಜು ಚಮಕೇರಿ ಸಭೆಯ ಗಮನ ಸೆಳೆದರು ಮುಖ್ಯ ಅಧಿಕಾರಿಗಳಿಗೆ ಆರಂಭಿಸಲು ಒತ್ತಾಯಿಸಿದರು. ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಈಗಲೇ ಅದಕ್ಕೆ ಕ್ರಮ ತೆಗೆದುಕೊಳ್ಳಿ ಎಂದು ಹಲವು ಸದಸ್ಯರು ತಿಳಿಸಿದರು. ಎಲ್ಲ ಸದಸ್ಯರ ಪ್ರಶ್ನೆಗೆ ಮುಖ್ಯಾಧಿಕಾರಿ ಎಚ್‌.ಎಸ್ ಚಿತ್ತರಗಿ ಉತ್ತರಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಇದಕ್ಕೆ ಪುರಸಭೆ ಸದಸ್ಯ ಶೇಖರ್ ಅಂಗಡಿ ಸಹಮತ ವ್ಯಕ್ತಪಡಿಸಿದರು. 

ಇತ್ತೀಚೆಗೆ ಪುರಸಭೆಗೆ ನಾಮನಿರ್ದೇಶನಗೊಂಡ ಸದಸ್ಯರಾದ ಜೈವಂತ ಕಾಗಿ, ಅರ್ಜುನ್ ಮೋಪಗಾರ, ತಿಪ್ಪಣ್ಣ ಬಂಡಿವಡ್ಡರ, ಈರ​‍್ಪ ಚುನುಮರಿ ಇವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಇತ್ತೀಚಿಗೆ ನಿಧನರಾದ ಹಿನ್ನೆಲೆ ಗಾಯಕಿ ಲತಾಮಂಗೇಶ್ಕರ್, ಆಧ್ಯಾತ್ಮ ಲೋಕದ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಹಾಗೂ ಕವಿ ಚೆನ್ನವೀರ ಕಣವಿಯವರನ್ನು ಒಂದು ನಿಮಿಷದ ಮೌನ ಆಚರಿಸಿ ಗೌರವ ನಮನ ಸಲ್ಲಿಸಲಾಯಿತು.ಪುರಸಭೆ ಉಪಾಧ್ಯಕ್ಷೆ ಗೋದಾವರಿ ಬಾಟ, ಸ್ಥಾ.ಸಮಿತಿ ಚೇರ್ಮನ್ ಸಜನಸಾಬ ಪೆಂಡಾರಿ, ಪುರಸಭೆ ಸದಸ್ಯರು, ಅಧಿಕಾರಿಗಳು ಸಿಬ್ಬಂದಿಗಳು ಇನ್ನು ಮುಂತಾದವರು ಉಪಸ್ಥಿತರಿದ್ದರು. 

ಸುದ್ದಿ ಓದಿ