ಭವ್ಯ ಭಾರತದ ಭವ್ಯ ವ್ಯಕ್ತಿತ್ವದ ಲೋಹ ಪುರುಷ
-ದೀಪಿಕಾ ಚಾಟೆ
ಬೆಳಗಾವಿ
ಇತ್ತೀಚೆಗೆ ಂಕಅಯ ಕಾರ್ಯಕ್ರಮಕ್ಕಾಗಿ ಗುಜರಾತ್ ರಾಜ್ಯದ ಅಹಮದಾಬಾದ್ಗೆ ಹೋಗುವ ಸದವಕಾಶ ನನಗೊದಗಿತ್ತು. ನಮ್ಮ ದೇಶದ ಸ್ವತಂತ್ರ್ಯಕ್ಕಾಗಿ ಪರಿಶ್ರಮಿಸಿದ ಮಹಾತ್ಮಾ ಗಾಂಧೀಜಿಯವರ ಜನ್ಮಸ್ಥಳ, ಇಡೀ ದೇಶವನ್ನು ನೂರೆಂಟು ಸಾಮಂತ ರಾಜರಲ್ಲಿ ಹರಿದು ಹಂಚಿಹೋದ ರಾಜ್ಯಗಳನ್ನೆಲ್ಲ ಒಟ್ಟುಗೂಡಿಸಿ ಒಂದಾಗಿ ಬೆಸೆದು ಅನೇಕತೆಯಲ್ಲಿ ಏಕತೆಯನ್ನು ಮೆರೆದ ನಮ್ಮ ಸ್ವಾತಂತ್ರ್ಯದ ನಂತರದ ಭಾರತ ದೇಶದ ಡೆಪ್ಯುಟಿ ಪ್ರೈಮ್ ಮಿನಿಸ್ಟರ್ ಆದ ವಲ್ಲಭಭಾಯ್ ಪಟೇಲ್ರ ಜನ್ಮ ಸ್ಥಳವೂ ಆದ ಹಾಗೂ ನಮ್ಮೆಲ್ಲರ ಪ್ರೀತಿಯ, ಆದರಣೀಯ ಪ್ರಧಾನಮಂತ್ರಿ ಯಾದ ನರೇಂದ್ರ ಮೋದಿಯವರ ಜನ್ಮ ಸ್ಥಳವಾದ ಗುಜರಾತ್ನ್ನು ನೋಡುವ, ಸ್ಪಶರ್ಿಸುವ, ಕಣ್ಣಲ್ಲಿ ತುಂಬಿಕೊಳ್ಳುವ ಮನದಾಸೆ ನಮ್ಮದಾಗಿತ್ತು.
ಅಲ್ಲಿ ಹೋಗಿ ತಲುಪಿದಾಗ ರಾತ್ರಿ 8.20 ಗಂಟೆ ಯಾಗಿತ್ತು. ರೇಲ್ವ್ವೆ ಸ್ಟೇಶನ್ನಿಗೆ ನಮ್ಮನ್ನು ಕರೆದೊಯ್ಯಲು ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಕರ್ಮಚಾರಿಗಳು ಬಂದಿದ್ದರು. ನಮಗೆ ಭಾಗವತ ಆಶ್ರಮದಲ್ಲಿ ಇಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು ಊರಿನಿಂದ ಬಹುದೂರದ ದಟ್ಟ ಕಾಡಿನ ಮಧ್ಯದಲ್ಲಿ ತುಂಬ ಸುಂದರ, ಪ್ರಶಾಂತ ವಾತಾವರಣದಲ್ಲಿತ್ತು ಆಶ್ರಮ. ಬೆಳಗ್ಗೆಯೇ ಸಾಕಷ್ಟು ನವಿಲುಗಳು ಗರಿಬಿಚ್ಚಿ ಕುಣಿಯುತ್ತಿದ್ದಂಥ ಸುಂದರ ದೃಶ್ಯಕಾವ್ಯ ನೋಡಿ ಮನಸ್ಸು ಪ್ರಫುಲ್ಲಿತಗೊಳ್ಳುತ್ತಿತ್ತು.ಹತ್ತಿರದಲ್ಲೇ ಇದ್ದ ನಾರಾಯಣ ಮಂದಿರ ಮನದಲ್ಲಿ ಭಕ್ತಿರಸವನ್ನು ಹರಿಸುತ್ತಿತ್ತು. ನಂತರ ಕಾನಫರನ್ಸ್ ಇದ್ದ ಡಾ ಅಂಬೇಡ್ಕರ್ ವಿಶ್ವವಿದ್ಯಾನಿಲಯಕ್ಕೆ ಕರೆದೊಯ್ಯಲು ಬಸ್ಸಿನ ವ್ಯವಸ್ಥೆ ಯಾಗಿತ್ತು. ಬೆಳಗ್ಗೆ 8ಕ್ಕೆ ಹೋದವರು ಅಲ್ಲಿಯೇ ಟಿಫಿನ್, ಊಟರಾತ್ರಿಯ ಊಟ ಮಾಡಿಯೇ ಭಾಗವತ ಆಶ್ರಮಕ್ಕೆ ಹಿಂತಿರುಗುತ್ತಿದ್ದೆವು.
ಹೀಗೇ ಮೂರು ದಿನಗಳವರೆಗೂ ಕಾವ್ಯಧಾರೆಯಲ್ಲಿ, ವಿವಿಧ ಭಾಷಾಕಾವ್ಯಧಾರೆಯಲ್ಲಿ, ಗುಜರಾತ್ ಭಾಷಾ ಕಾವ್ಯಧಾರೆಯಲ್ಲಿ ಮುಳುಗಿ ಬಿಟ್ಟಿರುತ್ತಿದ್ದೆವು ಒಂದೇ ವಿಷಯವಾದರೂ ಎಷ್ಟು ವಿಭಿನ್ನವಾದ ಕಲ್ಪನೆ ಗಳು, ವಿಚಾರಗಳು, ಅನುಭೂತಿಗಳು...ನಿಜಕ್ಕೂ ಆಶ್ಚರ್ಯ ವಾಗುತ್ತದೆ. ಹೆಣ್ಣಿನ ಅಸ್ಮಿತೆಯ ಬಗ್ಗೆ ಬರೆದ ಕವನಗಳು ಭಾಷೆ ನಮಗೆ ಅಪರಿಚಿತವಾಗಿರಬಹುದು ಆದರೆ ಭಾವನೆಗಳು ನಮ್ಮ ಮನಸ್ಸಿಗೆ ತಟ್ಟುತ್ತಿದ್ದವು! ನಾವು ಅವುಗಳ ಮತಿತಾರ್ಥದಲ್ಲಿ ಹಿಂದೆ ಬೀಳುತ್ತಿರಲಿಲ್ಲ.
ಎಲ್ಲರೂ ಅಭಿವೃದ್ಧಿ ಹೊಂದಿದ ಗುಜರಾತ್ ಬಗ್ಗೆ ಹೇಳುವುದನ್ನು ಕೇಳುತ್ತಿದ್ದೆವು ಅದು ಹೇಗೆ ಮಾದರಿ ಎಂಬುದನ್ನು ಕಣ್ಣಾರೆ ಕಾಣ ಬೇಕೆಂಬ ಕುತೂಹಲ, ಹಂಬಲ ನಮಗೆ. ಅಲ್ಲಿಯ ರಸ್ತೆಗಳಂತೂ ನುಣುಪಾದ ರೇಷ್ಮೆಯ ಮಕಮಲ್ಲಿನಂತೆ ಉದ್ದಾನು ಉದ್ದಕೆ ಬಿದ್ದುಕೊಂಡಿದ್ದು, ರಸ್ತೆಯ ಅಕ್ಕಪಕ್ಕದಲ್ಲೆಲ್ಲೂ ಹೊಲಸು, ಗಲೀಜು ಕಾಣಬರುತ್ತಿರಲಿಲ್ಲ.ಮುಖ್ಯವಾಗಿ ರಸ್ತೆಯಲ್ಲಿ ನಡೆದರೆ ಮಣ್ಣಿನ ಲವಲೇಶವೂ ನಮಗೆ ಗೋಚರಿಸಲಿಲ್ಲ. ನಾಲ್ಕೈದು ಲೇನುಗಳು ಹಾಗೆ ಒಂದೇ ದಿಕ್ಕಿನಲ್ಲಿ ಗಾಡಿಗಳನ್ನು ಹೊತ್ತೊಯ್ಯುತ್ತಿದ್ದರೆ ಅದರ ಪಕ್ಕದ ನಾಲ್ಕೈದು ಲೇನುಗಳು ಉದ್ದಕ್ಕೆ ಇತ್ತಕಡೆಗೆ ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದವು. ಎಲ್ಲಿಯೂ ಹಂಪ್ಸ ಇಲ್ಲ., ಟ್ರಾಫಿಕ್ ಸಿಗ್ನಲ್ಗಳಿಲ್ಲ.ಹೆಜ್ಜೆ ಹೆಜ್ಜೆಗೆ ನಿಲ್ಲುತ್ತಾ, ನಿಲ್ಲಿಸುತ್ತಾ ನಡೆವ ಪ್ರಮೇಯವೇ ಇಲ್ಲ. ಒಮ್ಮೆ ಗಾಡಿಯಲ್ಲಿ ಕುಳಿತರೇ ನಮ್ಮ ಗಮ್ಯ ಬಂದಾಗಲೇ ಗಾಡಿ ನಿಲ್ಲುತ್ತಿದ್ದದ್ದು ಸೋಜೀಗವೇ ಸರಿ!
ಇತ್ತೀಚೆಗಷ್ಟೇ ಲೋಕಾರ್ಪಣೆ ಗೊಂಡ ವಲ್ಲಭಭಾಯ್ ಪಟೇಲ್ರ ಮೂತರ್ಿಯನ್ನು ವೀಕ್ಷಿಸುವುದೇ ಒಂದು ಸಂಭ್ರಮ. ಬರೋಡಾದಿಂದ ಸುಮಾರು ಒಂದೂವರೆ ತಾಸಿನ ಅದೇ ನುಣ್ಣಗಿನ ರಸ್ತೆ. ಒಂದು ದೊಡ್ಡ ಗುಡ್ಡವನ್ನೇ ಕೊರೆದು ಮಧ್ಯ ರಸ್ತೆ ನಿಮರ್ಿಸಿದ್ದು ನೋಡಲು ಎರಡು ಕಣ್ಣು ಸಾಲದು. ಇಡೀ ಜಗತ್ತಿನಲ್ಲೇ ಎತ್ತರವಾದ ಅಪ್ರತಿಮ ಲೋಹಪುರುಷನ ಮೂತರ್ಿ, ಸುಮಾರು 600 ಫೀಟ್ ಎತ್ತರ ದ ಅಂದರೆ 182 ಮೀಟರ್ ಎತ್ತರದ ನರ್ಮದಾ ಜಿಲ್ಲೆಯಲ್ಲಿ ವಿಂಧ್ಯಾಚಲ ಹಾಗೂ ಸಾತುಪುರಾ ಪರ್ವತಮಾಲೆಯ ತಪ್ಪಲಲ್ಲಿ ಸ್ಥಿತಗೊಂಡಿದೆ.
ನಾವು ಕಾರನ್ನು ಕಾರ ಪಾಕರ್್ನಲ್ಲಿ ನಿಲ್ಲಿಸಿ ಒಳನಡೆದಾಗ ನಮ್ಮನ್ನು ಒಳಕ್ಕೆ ಕರೆದೊಯ್ಯಲು ಬಸ್ಸು ರೆಡಿಯಾಗಿ ನಿಂತಿರುತ್ತದೆ. ಒಳಗೆ ಜಟಿಣಡಿಥಿ ಜಿಜಜ 350ರೂ ಆದರೆ, ಬಸ್ಸಿಗಾಗಿ 30 ರೂಗಳು ಮಾತ್ರ. ಸುಮಾರು ಎರಡ್ಮೂರು ಗಂಟೆಗಳವರೆಗೂ ಒಳಗೆ ಎಲ್ಲ ಸುತ್ತಾಡಿ ಬರಬಹುದು. ಎಲ್ಲಿಯೂ ನಾವು ಮೆಟ್ಟಿಲು ಹತ್ತುವ ಹಾಗೇ ಇಲ್ಲ. ಎಲ್ಲ ಕಡೆಗೂ ಜಥಜಟಚಿಣಜಡಿಗಳನ್ನು ಅಳವಡಿಸಲಾಗಿದೆ. ಅಲ್ಲಿ ಣಠಟಜಣ, ಬಾಥರೂಂಗಳ ಸ್ವಚ್ಛತೆಯ ಬಗ್ಗೆಯೇ ಒಂದೀಡೀ ಎಪಿಸೋಡ್ ಬರೆಯಬಹುದು. ಸುಮಾರು ಐದಾರು ಕರ್ಮಚಾರಿಗಳು ತಮ್ಮ ಡ್ರೆಸ್ಸಿನೊಂದಿಗೆ ಬಾಥರೂಂ ಹತ್ತಿರವೇ ಇರುತ್ತಾರೆ. ಯಾರೇ ಒಳಗೆ ಹೋಗಿ ಹೊರಬಂದರೆ ಅವರು ಅಲ್ಲಿಗೆ ಹೋಗಿ ಸ್ವಚ್ಛಗೊಳಿಸಿ ಫಿನಾಯಿಲ್ದಿಂದ ಒರೆಸಿ ಬರುತ್ತಿರುತ್ತಾರೆ.
ಬಸ್ಸಿನಲ್ಲಿ ಆಸನದ ವ್ಯವಸ್ಥೆ ಚೆನ್ನಾಗಿದೆ.ಹೊಚ್ಚ ಹೊಸದು ಬಸ್ಸು ಇದೆ ಮತ್ತು ಎಷ್ಟುಸೀಟ್ ಇದೆಯೋ ಅಷ್ಟು ಜನ ರನ್ನು ಮಾತ್ರ ಹತ್ತಿಸಿಕೊಳ್ಳುತ್ತಾರೆ. ಸುಮಾರು ಐದಾರು ಬಸ್ಸು ಇರುವುದರಿಂದ ಧಾವಂತಕ್ಕೆ ಅವಕಾಶವಿಲ್ಲ. ಪ್ರತಿ ಬಸ್ಸಿನಲ್ಲೂ ಒಬ್ಬ ಮಹಿಳಾ ಹಾಗೂ ಪುರುಷ ಗೈಡು ಇರುತ್ತಾರೆ. ಪ್ರತಿಯೊಂದನ್ನು ಸವಿವರವಾಗಿ ವಿವರಿಸುತ್ತಿರುತ್ತಾರೆ!
ಮೂತರ್ಿಯ ಹತ್ತಿರ ಹೋದಾಗಲೂ ಸಾಕಷ್ಟು ಜನ ಗೈಡುಗಳು ನಮಗೆ ಸಿಗುತ್ತಾರೆ. ಒಳಗೆ ವಲ್ಲಭಭಾಯ್ ಪಟೇಲ್ರ ಸಾಕಷ್ಟು ಫೋಟೋಗಳು, ಅವರ ಕುರಿತಾಗಿ ಡಾಕ್ಯುಮೆಂಟರಿ, ಹಾಗೂ ಮೂತರ್ಿ ತಯಾರಿಸುವಾಗಿನ ಬ್ಲುಪ್ರಿಂಟ್, ಏನೇನೆಲ್ಲ ಇಡೀ ದೇಶದ ಜನತೆಯಿಂದ ಕ್ರೋಢೀಕರಿಸಿದ ಕಬ್ಬಿಣದ ರಾಡು, ಸೈಕಲ್ ಚೈನು, ಹತೋಡೆ, ಕುರೂಪಿ, ಕೊಡಲಿ ಕಳಿಸಿದ್ದನ್ನೆಲ್ಲಾ ಯಥಾವತ್ತಾಗಿ ಅಲ್ಲಿ ಹಾಕಿಟ್ಟಿದ್ದಾರೆ. ಮೂತರ್ಿಯನ್ನು ಯಾವರೀತಿಯಾಗಿ ಡಿಸೈನ್ ಮಾಡಿದ್ದು ಎಂಬುದನ್ನೆಲ್ಲ ವಿವರಿಸುತ್ತಿದ್ದರೆ ನಮಗೆ ತುಂಬ ಖುಷಿಯಾಗುತ್ತಿತ್ತು.
ಧುಲೇ ಊರಿನವನಾದ ರಾಮವೀ ಸುತಾರ ಎಂಬ ಭಾರತೀಯನು ಚೈನಾದಲ್ಲಿಯ ಬುದ್ಧನ ಮೂತರ್ಿಯನ್ನು ತಯಾರಿಸಿದವನು. ವಲ್ಲಭಭಾಯಿ ಅವರ ಮೂತರ್ಿಯನ್ನೂ ಅವನೇ ತಯಾರಿಸಿದ್ದಾನೆ. ಸುಮಾರು 200 ಜನ ಚೈನಾ ಕಾಮರ್ಿಕರು, 250 ಜನ ಭಾರತೀಯ ಕಾಮರ್ಿಕರು ಸತತವಾಗಿ 42 ತಿಂಗಳವರೆಗೂ ದುಡಿದಿದ್ದಾರೆ.ದುಬೈಯ ಬುಜರ್್ ಖಲೀಫಾದ ಆಕರ್ಿಟೆಕ್ಟ ನ ನಿಗರಾಣಿಯಲ್ಲಿ ಮೂತರ್ಿಯ ಮೇಲಿನ ಭಾಗವನ್ನು ತಯಾರಿಸಲಾಯಿತು. ಈ ಮೂತರ್ಿಯ ಪ್ಲಾನಿಂಗ್ನಲ್ಲಿದ್ದವ ಕನರ್ಾಟಕದ ಇಂಜನೀಯರ ನೆಂದು ಕೇಳಿ ನಮಗೆ ತುಂಬ ಅಭಿಮಾನವೆನಿಸಿತು.
ಅಕ್ಟೋಬರ್ 31ಕ್ಕೆ ಉದ್ಘಾಟನೆಗೊಂಡ ಈ ಮೂತರ್ಿ ಒಂದು ತಿಂಗಳಲ್ಲೇ ಎರಡು ಕೋಟಿ ಗಿಂತ ಅಧಿಕ ಗಳಿಸಿದೆ ಎಂದರೆ ಮೋದಿಯವರ ಮುಂದಾಲೋಚನೆಗೆ ಆಶ್ಚರ್ಯವೆನಿಸಿತು. 182 ಫೀಟ್ ಎತ್ತರದ ಮೂತರ್ಿಧೋತಿ, ಚೆಕ್ಸ್ ಜಾಕೀಟು ಹಾಕಿಕೊಂಡಿದ್ದಂತೆ ಹೊರಗಿನಿಂದ ಕಾಣಿಸುತ್ತದೆ. ಆದರೆ ನಮಗೆ ಒಳಗಿನಿಂದ ಲಿಫ್ಟ್ ಮೂಲಕ ಅದರ ಎದೆಯವರೆಗೂ ಅಂದರೆ 45 ನೇ ಮಜಲಿಯವರೆಗೂ ಕೆವಲ 37 ಸೆಕೆಂಡುಗಳಲ್ಲಿ ತಲುಪಿದೆವು. ಅದೂ ಲಿಫ್ಟನಲ್ಲಿ ಒಮ್ಮೆಲೇ 27 ಜನ ಪ್ಲಸ್ ಗೈಡ್ ಹೋಗಬಹುದು. ನಮಗೆಲ್ಲ ಆಶ್ಚರ್ಯವೆನಿಸಿದ್ದೇನೆಂದರೆ ಹೊರಗಿನಿಂದ ಕೆಳಗೆ ನಿಂತು ನೋಡಿದಾಗ ಚೆಕ್ಸ್ ಜಾಕೀಟು ಹಾಕಿಕೊಂಡಿದ್ದಂತೆ ಕಾಣುವುದು ಒಳಗಿನಿಂದ ಅವೆಲ್ಲ ಚೌಕಾಕಾರದ ಕಿಟಕಿಗಳಿವೆ! ಆ ಕಿಟಕಿಯ ಮೂಲಕ ನೋಡಿದರೆ ಎಡಕ್ಕೆ ವಿಂಧ್ಯ ಪರ್ವತ,ಬಲಕ್ಕೆ ಸಾತಪುರಾ ಪರ್ವತ ,ಮಧ್ಯ ಸರದಾರ ಸರೋವರ, ಡ್ಯಾಂ, ನರ್ಮದಾ ನದಿಯ ವಿಹಂಗಮ ನೋಟ ಕಂಡುಬರುತ್ತದೆ.ಜಾಕೀಟಿಗೆ ಹಾಕಿದ ಬಟನ್ಗಳಂತೂ ಒಂದೊಂದು ಫ್ಲೋರ್ನಲ್ಲಿ ಒಂದೊಂದು ದೊಡ್ಡದೊಡ್ಡ ಲೋಹದ ಸರ್ಕಲ್ನಂತಿವೆ.ವಲ್ಲಭಭಾಯ್ ಯವರ ವಿಶಾಲವಾದ ಎದೆಯ ತುಂಬಾ ಅಡ್ಡಾಡಿ, ಓಡಾಡಿ ಫೋಟೋ ಕ್ಲಿಕ್ಕಿಸಿಕೊಂಡು ಬಂದೆವು.!
ಪ್ರತಿ ಫ್ಲೋರನಲ್ಲೂ ಗೈಡುಗಳು ನಮಗೆ ಮಾಹಿತಿ ನೀಡಲು ಇರುತ್ತಿದ್ದರು. ತಳಪಾಯದಲ್ಲಿ ಬಂದರೆ ಅವರ ಪಾದದ ಹತ್ತಿರ ಬಂದು ನಿಂತರೆ ನಾವೆಲ್ಲ ಚಿಕ್ಕ ಚಿಕ್ಕ ಮಕ್ಕಳಂತೆ ಕಾಣುತ್ತಿದ್ದೆವು. ಹೆಬ್ಬೆಟ್ಟು 9 ಫೀಟ್ ಆದರೆ, ಎರಡನೇ ಬೆಟ್ಟು 8 ಫೀಟ್, ಮೂರನೇ ಬಟ್ಟು 7 ಫೀಟ್, ಕೊನೆಯ ಎರಡು ಬೆಟ್ಟುಗಳು 6 ಫೀಟ್ಗಳಾಗಿದ್ದವು. ಕಾಲಲ್ಲಿಯ ಚಪ್ಪಲಿ ಕೂಡ ಲೋಹದ್ದಾಗಿದ್ದು ಅತ್ಯಂತ ನೈಜವಾಗಿ, ನಾಜೂಕಾಗಿ ಕುಶಲ ಕಮರ್ಿಯಿಂದ ಮಾಡಲ್ಪಟ್ಟಿದೆ.
ಅಲ್ಲಿಂದ ಬಸ್ಸಿನಿಂದಲೇ ನರ್ಮದಾ ನದಿಯ ಡ್ಯಾಂ, ಸರೋವರ, ತುಂಬ ಸುಂದರವಾದ ಹೂವಿನ ಗಾರ್ಡನ್( ಅವುಗಳ ಸಸಿಗಳನ್ನು ವಿದೇಶದಿಂದಲೇ ತಂದು ನೆಟ್ಟಿರುವರು), ಪಾವರ್ ಸ್ಟೇಶನ್ ಮುಂತಾದ ಸ್ಥಳಗಳನ್ನು ತೋರಿಸುತ್ತಾರೆ.ಸರೋವರದ ಉದ್ದವೇ 14.5 ಕಿಲೋಮೀಟರು.ಅದರ ಪಕ್ಕದಿಂದಲೇ ಬಸ್ಸಿನಿಂದ ಹೋಗುತ್ತಿರುತ್ತೇವೆ.
ಸುಸಜ್ಜಿತ ಏಪರ್ೊಟರ್ಿನಲ್ಲಿರುವಂಥ ಮಾಲ್ಗಳಿವೆ ತಿಂಡಿ ಕಾಫಿ, ಕೋಲ್ಡ್ರಿಂಕ್ಸ್ ಇರುತ್ತವೆ ಒಳ್ಳೆಯ ಟೀಶಟ್ರ್ಸಮತ್ತಿತರ ಸಾಮಾನೂ ಇಟ್ಟಿರುತ್ತಾರೆ.ಮತ್ತು ಎಲ್ಲಕಡೆಗೂ ಶುಭ್ರ ಸ್ವಚ್ಛವಾದ ಕುಡಿಯುವ ನೀರನ್ನಿಟ್ಟಿರುತ್ತಾರೆ.ನಮ್ಮ ಬಾಟಲ್ ಖಾಲಿಯಾದರೆ ನಾವು ತುಂಬಿಸಿಕೊಳ್ಳಬಹುದು. ಅದಕ್ಕೇನೂ ದುಡ್ಡಿಲ್ಲ!!. ಸಾಯಂಕಾಲ 7 ಗಂಟೆಗೆ ತುಂಬ ಸುಂದರವಾದ ಅದ್ಭುತವಾದ ಲೇಸರ್ ಶೋಕೂಡ ವೀಕ್ಷಣೆಗೆ ಇರುತ್ತದೆ.
ನಿಜಕ್ಕೂ ಇಂಥ ಒಂದು ಅಪ್ರತಿಮ, ಅದ್ಭುತ ಪ್ರತಿಮೆ ವೀಕ್ಷಣೆ ಗುಜರಾತಿನ ಟಿಛಿಠಟಜ ಠಣಡಿಛಿಜ ಆಗಿದೆ ಎಂದರೆ ಅತಿಶಯೋಕ್ತಿಯೇನಲ್ಲ. ದಿನವೂ ದೇಶ ವಿದೇಶದಿಂದ ಸಾಕಷ್ಟು ಜನರು ಇಲ್ಲಿ ಭೆಟ್ಟಿ ಕೊಡುತ್ತಾರೆ.
ನಮ್ಮ ದೇಶವನ್ನು ನಿಜವಾದ ಅರ್ಥದಲ್ಲಿಒಂದಾಗಿಸಿ ಕಟ್ಟಿದವರು ವಲ್ಲಭಭಾಯ್ ಪಟೇಲ್ರು. ಅವರಂಥ ಧೀಮಂತ ವ್ಯಕ್ತಿತ್ವವನ್ನು ಬರೀ ಬಾಯಿ ಮಾತಿನಲ್ಲಿ ಕೊಂಡಾಡಿದರೆ ಸಾಲದು. ಇಡೀ ದೇಶದ ಜನತೆ ಕೇವಲ ಒಂದು ವಂಶವನ್ನೇ ಹಾಡಿ ಕುಣಿದಾಡಿ ಇಂಥ ವ್ಯಕ್ತಿತ್ವವನ್ನು ಮರೆಗೆ ಸರಿಸಿದ್ದು ನಿಜಕ್ಕೂ ಖೇದವೇ. ಆ ಖೇದವನ್ನು ಹೋಗಲಾಡಿಸಿ ಜನರ ಮನದಲ್ಲಿ ಅಚ್ಚಳಿಯದಂತೆ ಶತಶತಮಾನಗಳ ವರೆಗೂ ನಿಚ್ಚಳವಾಗಿ ಉಳಿಯುವಂತೆ ಮಾಡಿದ್ದು ನರೇಂದ್ರಮೋದಿಯವರು. ಕೇವಲ ನಾಲ್ಕು ವರ್ಷದಲ್ಲಿ ಇಂಥ ಅಮೋಘ ಕಾರ್ಯ ಮುಗಿಸಿದ್ದಲ್ಲದೇ ಸುಮಾರು 14.5 ಕಿ.ಮೀ ಉದ್ದದ ಸರೋವರದಲ್ಲಿ ಬೋಟಿಂಗ್ ಮಾಡುತ್ತ ಮೂತರ್ಿ ವೀಕ್ಷಣೆ ಮಾಡುವ ಕೆಲಸವೂ ಪ್ರಾರಂಭವಾಗಿದೆ. ಇನ್ನೈದಾರು ತಿಂಗಳಲ್ಲಿ ಅದೂ ಮುಗಿಯಬಹುದು. ಇಂಥ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ನಿಮರ್ಿಸಿ ಗುಜರಾತ್ ರಾಜ್ಯವನ್ನು ಸುಶೋಭಿತಗೊಳಿಸಿ ಆದಾಯವನ್ನು ಹೆಚ್ಚುವಂತೆ ಮಾಡಿದ ಹೆಗ್ಗಳಿಕೆ ನರೇಂದ್ರ ಮೋದಿಯವರಿಗೇ ಸಲ್ಲಬೇಕು.