ಕಥೆ ಮತ್ತು ವಿಶೇಷ ಲೇಖನಗಳು

ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮೇಲಾದುದು

ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮೇಲಾದುದು

- ಡಾ. ಹೇಮಾವತಿ ಸೊನ್ನೊಳ್ಳಿ 

ಅಶ್ವಥ ಎಂ.ಬಿ.ಎ ಪದವೀಧರನಾಗಿದ್ದನು ಶಹರದಲ್ಲಿ  ಒಂದು ಕಂಪನಿಯಲ್ಲಿ ಒಳ್ಳೆ ಹುದ್ದೆಯಲ್ಲಿದ್ದ. ಅವನ ಮದುವೆಗಾಗಿ ತಂದೆ ತಾಯಿಯರು ವಧುವಿನ ಅನ್ವೇಷಣೆ ನಡೆಸಿದ್ದರು. ಅವನು ಉದ್ಯೋಗ ಮಾಡುವ ಶಹರದಲ್ಲಿಯೇ ಇರುವ ಸನ್ಮತಿ ಎಂಬ ಕನ್ಯೆಯ ಮಾಹಿತಿಯನ್ನು ಅಶ್ವಥನ ತಂದೆ ತಾಯಿ ಪಡೆದುಕೊಂಡಿದ್ದರು. ಸನ್ಮತಿ ಒಳ್ಳೆ ಮನೆತನದವಳಿದ್ದಳು. ಅವಳೂ ಎಂ.ಬಿ.ಎ ಪದವಿಧರೆ ಅವಳೂ ಕೂಡಾ ಒಳ್ಳೆ ಉದ್ಯೋಗದಲ್ಲಿದ್ದಳು ಎತ್ತರ ಮತ್ತು ಅವಳ ವ್ಯಕ್ತಿತ್ವ ಅಶ್ವಥನಿಗೆ ತುಂಬಾ ಹೊಂದಿಕೆಯಾಗುವಂತಿತ್ತು. ಸನ್ಮತಿ ತುಂಬಾ ಗುಣವಂತೆಯಾಗಿದ್ದಳು. ಆದರೆ ನೋಡಲು ಅವಳು ಸ್ವಲ್ಪ ಕಪ್ಪಗಿದ್ದರೇನಂತೆ ಮೊದಲೇ ಅವಳನ್ನು ನೋಡಿ ಬಂದಿದ್ದ ಅವರು ಅವಳಲ್ಲಿ ಒಳ್ಳೆ ಗುಣಗಳಿವೆ ನೀನೂ ನೋಡು  ನಿನಗೆ ಒಪ್ಪಿಗೆಯಾದರೆ ನೋಡೋಣ ಎಂದು ಹೇಳಿ  ಸನ್ಮತಿಯನ್ನು ನೋಡಲು ಕರೆದುಕೊಂಡು ಹೋದರು. ನೋಡಿ ಮನೆಗೆ ಬಂದ ಮೇಲೆ  ಅಶ್ವಥನ ಅಭಿಪ್ರಾಯವನ್ನು ಕೇಳಿದರು. ಹುಡುಗಿ ಕಪ್ಪಗಿದ್ದಾಳೆ ನನಗೆ ಒಪ್ಪಿಗೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟ.

ಸಂಗಮೇಶ ತಂದೆ ತಾಯಿಯರಿಗೆ ಒಬ್ಬನೇ ಮಗ ತಂದೆಯ ವ್ಯಾಪಾರ ವೃತ್ತಿಯನ್ನು ಮುನ್ನಡೆಸಿಕೊಂಡು ತುಂಬಾ ಗಳಿಸಿದ್ದ ಅವನ ತಂದೆತಾಯಿಯರು ತಮ್ಮ ಸಂಬಂಧಿಕರಲ್ಲಿಯೇ ಶ್ರೀಮಂತ ಮನೆತನದ ಕಾಮಾಕ್ಷಿ ಎಂಬ ಹುಡುಗಿಯೊಂದಿಗೆ  ವಿವಾಹ ಮಾಡಿದ್ದರೂ. ಕಾಮಾಕ್ಷಿ ತನಗಿಂತ ತುಂಬಾ ಗಿಡ್ಡ ಇದ್ದಾಳೆ ಅವಳೊಂದಿಗೆ ನಾನು ಮದುವೆ ಆಗಲ್ಲ ಎಂದು ಸಂಗಮೇಶ ಅಂದರೂ ಕೂಡಾ ಗಿಡ್ಡ ಇದ್ದರು ಏನಾತು ನೋಡಾಕ ತುಂಬಾ ಸುಂದರವಾಗಿದ್ದಾಳೆ ಹಾಗೂ ನಡೆನುಡಿ ಎಲ್ಲ ಚೆನ್ನಾಗಿದೆ ಎಂದು ಹಿರಿಯರೆಲ್ಲ ಹೇಳಿ ಸ್ಪಲ್ಪ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸಿದ್ದರು. ಕಾಮಾಕ್ಷಿ ಗಂಡನ ಮನೆಗೆ ಬಂದಾಗಿನಿಂದ ಸಂಗಮೇಶ ಅವಳು ಗಿಡ್ಡ ಇರುವಳೆಂದು ಅವಳೊಂದಿಗೆ ಪ್ರೀತಿಯಿಂದ ಬೆರೆಯುತ್ತಲೆ ಇರಲಿಲ್ಲ. ಅವಳನ್ನು ಕಂಡರೆ ಸಿಡಿಮಿಡಿಗೊಳ್ಳುವುದು ನೀನು ನನಗೆ ಅನುರೂಪಳಾದ ಹೆಂಡತಿ ಅಲ್ಲಾ ಅವಳು ಊಟಕ್ಕೆ ಬಡಿಸಲು ಬಂದರೆ ನೀ ಬೇಡ ಹೋಗು ಅವ್ವ ಬಡಿಸುತ್ತಾಳೆ ಎಂದು ಅವ್ವನ ಕೈಯಿಂದಲೇ ಊಟ ಬಡಿಸಿಕೊಳ್ಳುತ್ತಿದ್ದ. ಅವಳನ್ನು ಸಿನೆಮಾ, ಹೋಟೆಲ್, ತಿರುಗಾಡಲು ಹೀಗೆ ಎಲ್ಲಿಯೂ ಕೆರದುಕೊಂಡು ಹೋಗುತ್ತಿರಲಿಲ್ಲ. ಆನೆ ಜೊತೆ ಆಡಿನಮರಿ ಬಂದ  ಹಾಗಾಗುತ್ತೆ ಅಂತ ಅನ್ನುತ್ತಿದ್ದ. ನಿನ್ನ ಜೊತೆ ನನಗೆ ಹೊರಗೆಲ್ಲಿಯೂ  ಹೋಗಬೇಕೆಂದರೆ ತುಂಬಾ ಅಸಹ್ಯವೇನುಸುತ್ತೆ ಎನ್ನುತ್ತಿದ್ದ. ಕಾಮಾಕ್ಷಿಗೆ ಇದೆಲ್ಲ ಮನಸ್ಸಿಗೆ ನೋವಾಗುತ್ತಿತ್ತು ಹೊಸದಾಗಿ ಮದುವೆಯಾದ ಜೋಡಿಗಳು  ಆನಂದದಿಂದ ಜೋಡಿಯಾಗಿ ತಿರುಗಾಡುವುದನ್ನು ನಕ್ಕು ನಲಿಯುವುದನ್ನು ಕಂಡು ಮನದಲ್ಲೆ  ದುಃಖಸುತ್ತಿದ್ದಳು. ಆದರೂ ಏನ ಮಾಡೋದು ನನ್ನ  ಹಣೆಬರಹ ಎಂದು  ಸುಮ್ಮನಿರುತ್ತಿದ್ದಳು. ಸಂಗೆಮೇಶನಿಗೆ ಹಾಗೂ ಕಾಮಾಕ್ಷಿಗೆ ಒಂದು ಮಗುವೂ ಆಯಿತು. ಮಗುವಾದರೂ ಕೋಡಾ ಸಂಗಮೇಶ ಮನಸ್ಥಿತಿ ಬದಲಾಗಲಿಲ್ಲ ಕಾಮಾಕ್ಷಿಯನ್ನು ಕಂಡರೆ ಸಾಕು ಬೆಂಕಿಯ ಉಂಡೆಗಳನ್ನು ಉಗುಳುತ್ತಿದ್ದ. ನನಗೆ ಇವಳು ಬೇಡವೇ ಬೇಡ ಇವಳಿಗೆ  ವಿಚ್ಛೇದನ ಕೊಟ್ಟು ಎತ್ತರಿದ್ದ ಬೇರೆಯವಳನ್ನು ಮದುವೆಯಾಗುತ್ತೇನೆ ಎಂದು ಜಗಳ ತೆಗೆದು ಕುಳಿತಿದ್ದ ಆವಾಗ ತಂದೆ ತಾಯಿ ಹಿರಿಯರು  ನಮ್ಮದ ತಪ್ಪ ಆಗೈತಿ ಪಾಪ ಕಾಮಾಕ್ಷಿದೆನ ತಪ್ಪ ಐತಿ ಹಿಂಗ ಮಾಡೋದು ಚುಲೋ ಅಲ್ಲಾ ಅಂತ ಹೇಳಿ ಅವನನ್ನು ಶಾಂತಗೊಳಿಸಿದ್ದರು.

ತನ್ಮಯ ಹಾಗೂ ಶ್ರೀಲತಾರ ಮದುವೆಯಾಗಿ ನಾಲ್ಕು  ವರ್ಷಗಳಾಗಿದ್ದವು. ಮದುವೆಯಾದ ಒಂದು ವರ್ಷಕ್ಕೆ ಒಂದು ಹೆಣ್ಣು ಮಗು ಹುಟ್ಟತು. ಅದು ಬೆಳ್ಳಗೆ ತುಂಬಾ ಸುಂದರವಾಗಿತ್ತು. ಆ ಮೇಲೆ  ಮತ್ತೊಂದು ಹೆಣ್ಣು ಮಗನೇ ಹುಟ್ಟಿತು ಅದು ಕಪ್ಪಗೆ ಇತ್ತು. ತನ್ಮಯನಿಗೆ ಗಂಡಾಗಲಿಲ್ಲವಲ್ಲಾ ಎಂದು ಕೇಳಿ ಇನ್ನೂ ಹೆಚ್ಚಿನ ಬೇಸರ  ಅವನಿಗೆ ಆಯಿತು. ತನ್ಮಯ ಮಗು ಕಪ್ಪಗಿದೆ ಅಂತಾ ಹೆರಲು ತವರು ಮನೆಗೆ ಹೋದ ಶ್ರೀಲತಾ ಹಾಗೂ ಮಗುವನ್ನು ನೋಡಲು ತನ್ಮಯ ಹೋಗುವೇ ಇಲ್ಲ. ಐದನೇ ತಿಂಗಳಿಗೆ ಮಗುವಿನೊಂದಿಗೆ ಶ್ರೀಲತಾ ಗಂಡನ ಮನೆಗೆ ಬಂದ ದಿನ  ತನ್ಮಯ ಮನೆ ಬಿಟ್ಟು ಹೊರಗೆ ಹೋದವ ಮಾರನೇ ದಿನ ಬಂದ. ಮನೆ ಬಂದ ಮೇಲೆ ಮಗುವನ್ನು ನೋಡಿ ಹೆಂಡತಿಗೆ ಎಂಥಾ ಮಗಳನ್ನು ಹೆತ್ತಿದೆಯಾ ನಿನ್ನ ಕಟಗೊಂಡ ನನ್ನ ಬಾಳ ಕೆಟ್ಟ ಹೋತು. ಎಂಥ ಪೀಡೆ ಎಂಥ ಶನಿಯನ್ನು ಹೆತ್ತಿದಿಯಾ ಅಂತಾ ಹಿಡಿಪಾಶ ಹಾಕುತ್ತಿದ್ದ. ಬಂಧು ಬಾಂದವರು ನೆರೆಹೊರೆಯವರು ಮಗುವನ್ನು ನೋಡಿ ದೊಡ್ಡ ಮಗು ಎಂಥಾ  ಚೆಂದ ಬೆಳ್ಳಗೆ ಐತಿ ಸಣ್ಣ ಮಗು ಹಿಂಗ್ಯಾಕ ಕಪ್ಪಗ ಹುಟೈತಿ ಅಂದ ಮೇಲಂತೂ ತನ್ಮಯನಿಗೆ ಆ ಮಗುವಿನ ಬಗ್ಗೆ ಇದ್ದ ತಾತ್ಸಾರ ಭಾವನೆ ಇನ್ನೂ ಹೆಚ್ಚಾಗುತ್ತಿತ್ತು. ದೊಡ್ಡ ಮಗುವನ್ನು ಎತ್ತಿಕೊಂಡು ಅಡ್ಡಾಡಿಸಿಕೊಂಡು ಮುದ್ದಿನ ಮಳೆ ಸುರಿಸುತ್ತಿದ್ದ. ಸಣ್ಣ ಮಗುವನ್ನು  ಹೊರಳಿ ಕೂಡಾ ನೋಡುತ್ತಿರಲಿಲ್ಲ. ಹೆಂಡತಿ ಹಿಂಗ್ಯಾಕ ಮಾಡತಿರಿ ಎರಡೂ ಮಕ್ಕಳು ನಮ್ಮೂನ ಅಲ್ಲೇನ್ರಿ ಅಂದರೆ ಹೆಂಡತಿಯನ್ನು ಕೋಪದಿಂದ ನನಗ ಬುದ್ಧಿ ಹೇಳಾಕ ಬರತಿ ಎರಡ ಬಿಟ್ಟನೆಂದ್ರ ಮ್ಯಾಲ ಹೋಕ್ಕಿ ನೋಡ ಅಂತ ಅನ್ನುತ್ತಿದ್ದ.

ಸೌದಾಮುನಿ ತುಂಬಾ ಸುಂದರವಾಗಿದ್ದಳು ಅವಳನ್ನು ನೋಡಲು ಬಂದ ವರಮಹಾಶಯರೆಲ್ಲರೂ ಸೌದಾಮಿನಿಯನ್ನು ಮದುವೆಯಾಗಲು ಬಯಸಿದರು. ಆದರೆ ಸೌದಾಮನಿಯು ತಂದೆ ತಾಯಿಯರು  ಸೌಂದರ್ಯಕ್ಕಿಂತ ಸಾಮಥ್ರ್ಯವೇ ಪುರುಷರಿಗೆ ಭೂಷಣ ಎಂದು ಸ್ವಲ್ಪ ನೋಡಲು ಕಪ್ಪ ಹಾಗೂ ಅಷ್ಟೊಂದು ಆಕರ್ಷಕ ವ್ಯಕ್ತಿತ್ವ ಇರದ ಆದರೆ ಸದ್ಗುಣಗಳ ಋಣಿಯಾದ ಅಖಿಲೇಶನಿಗೆ  ಸೌದಾಮಿನಿಯನ್ನು ಒಪ್ಪಿಸಿ ಮದುವೆ ಮಾಡಿ ಕೊಟ್ಟರು. ಆದರೆ ಸುಂದರಕಾಯದ ವರನನ್ನು ಬಯಸಿದ್ದ ಸೌದಾಮಿನಿಗೆ ವಿಧಿ ಇಲ್ಲದೆ ಮದುವೆಯಾಗಿ ನಿರಾಸೆಯ ಕಾಮೋಡ ಕವಿದಿತು. ಅವನನ್ನು ಕಂಡರೆ ಅವಳಿಗೆ ಪ್ರೀತಿಸಿ ಹುಟ್ಟುತ್ತಿರಲಿಲ್ಲ. ಅವನ ಜೊತೆಗೆ ಹೊರಗೆ ತಿರುಗಾಡಲು ಹೋಗುಲಿ ಅವಳಿಗೆ ಆಗುತ್ತಿರಲಿಲ್ಲ. ಏನಾದರೂ ನೆಪ ಹೇಳಿ ಅದನ್ನು ತಪ್ಪಿಸುತ್ತಿದ್ದಳು ಎಲ್ಲಿಯಾದರೂ ಇಬ್ಬರೂ ಕೂಡಿ ಹೋದರೆ ಪರಿಚಯದವರಾದರೂ ಬೆಟ್ಟಿಯಾದರೆ ಇಂವ ನನ್ನ ಗಂಡಾ ಅಂತ ಅವಳಿಗೆ ಹೇಳಿಕೊಳ್ಳಲು ಮುಜುಗುರವಾಗುತ್ತಿತ್ತು. ಪ್ರೀತಿಯಿಂದ ಇವಳ ಸೆರಗು ಹಿಡಿದುಕೊಂಡು ಓಡಾಡಬೇಕೆನ್ನುವ ಪತಿಯನ್ನು ಇವಳಾಗೋ ದೂರ ದೂರ ಸರಿಸುತ್ತಿದ್ದಳು.

ಇದೇಕೆ ಹೀಗೆ ಅಂತಾ? ಕಣ್ಣಾರೆ ಕಂಡ ಘಟನೆಗಳನ್ನೇ ಬರೆದದ್ದು. ಬಾಹ್ಯ ಸೌಂದರ್ಯ ಶಾಶ್ವತವೇ? ಅಲ್ಲ ಇದು ಕ್ಞಣಿಕವಾದದ್ದು. ಹರೆಯದಲ್ಲಿ ಎದ್ದು ಕಾಣುವ ಸೌಂದರ್ಯ ಮುಪ್ಪು ಅವರಿಸಿದಾಗ ಎಲ್ಲರೂ ಒಂದೇ ಕಾಣುತ್ತಾರೆ. ಕಾಮ ಕರ್ರನೆ ಕಂದಿದರೇನು? ಕಾಯ ಮಿರ್ರನೆ ಮಿಂಚಿದರೇನು? ಎಂಬುದು ಶರಣರ ಸೂಳ್ನುಡಿ ಶಿವಕೊಟ್ಟ ಕಾಯಾ ಅವನ ಕೈಯಲ್ಲಿಯೇ ಇದು ಮಾಯ ಮನುಷ್ಯ ಸುಂದರವಾಗಿದ್ದರೆ ಸುಂದರವಾಗಿ ಕಾಣುವುದಿಲ್ಲ ಅವನು ಹೊಂದಿದ ಒಳ್ಳೆಯ ಗುಣ ನಡತೆ ಹಾಗೂ ವಿಚಾರಗಳಿಂದ ಸುಂದರವಾಗಿ ಕಾಣುತ್ತಾನೆ. ಚರ್ಮವೆಂಬ ಶರೀರದ ಮೇಲಿನ ಹೊದಿಕೆಗೆ ನಾವು ಮರುಳಾಗಬಾರದು. ಮಾನವನ ಆಂತಿರಿಕ ಸೌಂದರ್ಯದೆಡೆಗೆ ನಾವು ಇಣುಕಿ ನೋಡಬೇಕು ನಾನು ಏನು ಶಾರೀಕಕ ಸೌಂದರ್ಯ ಅಂತ ತಿಳಿದುಕೊಂಡಿರುವೆವೋ ಅದು ನಶ್ವರವಾದುದು ಯಾವ ಶರೀರವಾದರೂ ಮಣ್ಣಿನೊಂದಿಗೆ ಮಣ್ಣಾಗಿ ಹೋಗುವುದು ಈ ಶಾಶ್ವತ ಸತ್ಯವನ್ನು ನಾವು  ಯಾವಾಗಲೂ ನಾವು ಅರಿತುಕೊಳ್ಳಬೇಕು ಯಾರ ಶರೀರ ಹೇಗೆ ಇರಲಿ ಪ್ರತಿಯೊಬ್ಬರ ಶಾರೀರಿಕ ರಚನೆಯಲ್ಲಿ ದಯಾಘನ ಪರಮಾತ್ಮನು ಒಂದೊಂದು ವಿಶಿಷ್ಟ ರೀತಿಯ ಸೌಂದರ್ಯವನ್ನು ನೀಡಿರುತ್ತಾನೆ. ಇಂಗ್ಲೀಷನಲ್ಲಿ "ಃಜಚಿಣಣಥಿ ಟಜ ಟಿ ಠಛಜಠತಜಡಿ ಜಥಿಜ" ಎಂದು ಅಂದರೆ ಸೌಂದರ್ಯ ಅನ್ನುವುದು ನೋಡುಗರ ದೃಷ್ಟಿಯಲ್ಲಿದೆ" ಸುಂದರವಾದ ದೃಷ್ಟಿಯಿಂದ ನೋಡಿದರೆ ಸೃಷ್ಟಿಕರ್ತ ಸೃಷ್ಟಿಸಿದ್ದೆಲ್ಲ ಸುಂದರವಾಗಿಯೇ ಕಾಣುತ್ತವೆ. ಪ್ರತಿ ವ್ಯಕ್ತಿಯಲ್ಲಿರುವ ಒಳಗಿನ ಸದ್ಗುಣಗಳನ್ನು ಅರಿತು ನಾವು ಕ್ಷಣಕ ಬಾಹ್ಯ ಸೌಂದರ್ಯಕ್ಕಿಂತ ಶಾಶ್ವತವಾದ ಆಂತರಿಕ ಸೌಂದರ್ಯ ಮೇಲಾದುದು'' ಎಂದು ತಿಳಿಯರಿ ಎಂಬುದೇ ನನ್ನ ಮನದ ಮಾತು.



ಸುದ್ದಿ ಓದಿ