ಸಾಲದ ಬಾಧೆ: ಯುವ ರೈತನ ಆತ್ಮಹತ್ಯೆ

ಸಾಲದ ಬಾಧೆ: ಯುವ ರೈತನ ಆತ್ಮಹತ್ಯೆ

ಲೋಕದರ್ಶನವರದಿ

ಮಹಾಲಿಂಗಪೂರ : ಸಮೀಪದ ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ರೈತನೊಬ್ಬ ಸಾಲದ ಬಾಧೆಯಿಂದ ಬೇಸತ್ತು ತನ್ನ ಜಮೀನಿನ ಮರವೊಂದಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

               ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಚಿಮ್ಮಡ ಗ್ರಾಮದ ಸುಮಾರು 35 ವರ್ಷದ ಪ್ರಕಾಶ( ಸುತಾರ) ಬಡಿಗೇರ ಎಂಬ ರೈತ  ಕೆಲವು ವರ್ಷಗಳ ಹಿಂದೆ ಎರಡು ಬ್ಯಾಂಕುಗಳಲ್ಲಿ ಮಾಡಿದ ಸಾಲವನ್ನು ಸುಮಾರು  ತಿಂಗಳುಗಳಿಂದ  ಮರು ಪಾವತಿ ಮಾಡಲಾಗದೆ  ಸಮಾಜದಲ್ಲಿ ತಲೆ ಎತ್ತಿ ಬದುಕಲು ಸ್ವಾಭಿಮಾನ ಕಾಡುತಿತ್ತು ಇದರಿಂದ ಬೇಸತ್ತು    ರಾತ್ರಿ  ಸಮಯದಲ್ಲಿ ಎಲ್ಲರೂ ಊಟ ಮಾಡಿ ಮಲಗಿದ ನಂತರ ತನ್ನ ಜಮೀನಿನಲ್ಲಿರುವ ಮಾವಿನ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

             ಈತ ಅವಿಭಕ್ತ ಕುಟುಂಬದ ಸದಸ್ಯ ಇಬ್ಬರು ಗಂಡು ಮಕ್ಕಳಿದ್ದು ಒಬ್ಬ ಒಂದನೇಯ ಹಾಗೂ ಇನ್ನೊಬ್ಬ ಆರನೆ ತರಗತಿಯಲ್ಲಿ ಓದುತಿದ್ದಾರೆ ಇವರ ಖಚರ್ಿನ ಜೊತೆ ವೃದ್ಧ ತಾಯಿ ಇನ್ನೋರ್ವ ತಮ್ಮ ಹಾಗೂ ಇಬ್ಬರು ಹಿರಿಯ ಸಹೋದರಿಯರಿದ್ದಾರೆ. 

           ಇವರಿಗೆ ಪಿತ್ರಾಜರ್ಿತ ಆಸ್ಥಿಯಲ್ಲಿ ಬರತಕ್ಕಂಥ  01 ಎಕರೆ 30 ಗುಂಟೆ ಜಮೀನಿದೆ. ತಂದೆ ಸಾವಿನ ನಂತರ ಮನೆ ಜವಾಬ್ದಾರಿ ಈತನ ಮೇಲೆ ಬಿದ್ದು ಕುಟುಂಬದ ಬದುಕಿನ ಬಂಡಿ ಸಾಗಿಸಲು ಸ್ಥಳೀಯ ಪಿಕೆಪಿಎಸ್ ಸೊಸೈಟಿಯಲ್ಲಿ 66 ಸಾವಿರ ಹಾಗೂ ರಬಕವಿ ಸ್ಟೇಟ್ ಬ್ಯಾಂಕಿನಲ್ಲಿ 1 ಲಕ್ಷ 66 ಸಾವಿರ ಸಾಲ ಮಾಡಿಕ್ಕೊಂಡಿದ್ದ ಎಂದು ಕುಟುಂಬದ  ಮೂಲಗಳು ತಿಳಿಸಿವೆ.            ಬನಹಟ್ಟಿಯ  ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ. 

ನಾವು ಸಣ್ಣ ರೈತರು ನಮಗ ಸುಮಾರು ದೀಡ ಎಕರೆ ಭೂಮಿ ಐತ್ರಿ.ಭಯಂಕರ ಮಳಿ ಬಂದ ಇಳುವರಿನೂ ಕಡಿಮಿ ಬರುವ ಲಕ್ಷಣ .ಮಾಡಿದ ಸಾಲಾ ಹೆಂಗ ತೀರುಸೂದು ಅಂತ ನಮ್ಮಣ್ಣ ಹಗಲ ರಾತ್ರಿ ಚಿಂತಿ ಮಾಡಿ ಹುಚ್ಚನಂತಾಗಿದ್ರಿ.ಪರಿವಾರದಾವರ್ ನಾವೆಲ್ಲಾ ಧೈರ್ಯ ಹೇಳಿದ್ರೂ ಈ ಕೆಲಸಾ ಮಾಡಕ್ಕೊಂಡ ಎರಡ ಬಂಗಾರಂತಾ ಮಕ್ಕಳನ್ ಬೀದಿಗೆ ಹಾಕಿ ಹೋಗ್ಯಾನ್ರಿ.ಮುಂದ್ ಹೆಂಗ್ರಿ ನಮ್ಮ ಗತಿ. 

-ಚಿದಾನಂದ ಬಡಿಗೇರ ಮೃತನ ಸಹೋದರ

ನಾನು ಹಾಗೂ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ಮೃತನ ಗದ್ದೆಗೆ ಭೆಟ್ಟಿ ನೀಡಿ ವಿವರಣೆ ಪಡೆದಿದ್ದೇವೆ.ಈ ಪ್ರಕರಣ ಎ.ಸಿ. ಯವರ ಸಮೀತಿಯಲ್ಲಿ ಪೋಲಿಸ್,ಅಗ್ರಿಕಲ್ಚರ್, ಕಂದಾಯ ಇಲಾಖೆಯ ವರದಿಗಳನ್ನು ಕೂಲಂಕೂಷವಾಗಿ ಪರಿಶಿಲಿಸಿ ಮೃತನ ಕುಟುಂಬಕ್ಕೆ 05 ಲಕ್ಷ ಪರಿಹಾರ ಒದಗಿಸಲಾಗುತ್ತದೆ.ಮೃತನ ಪತ್ನಿಗೆ ಮಾಸಿಕ 2000 ಸಾವಿರ,ಮಕ್ಕಳ ವಿದ್ಯಾಭ್ಯಾಸ ಎಲ್ಲಿಯವರೆಗೆ ಮುಂದುವರೆಯುತ್ತೋ ಅಲ್ಲಿಯವರೆಗೆ ಖಚರ್ು ವೆಚ್ಚ ಮತ್ತು ಕುಟುಂಬ ಸದಸ್ಯರಿಗೆ 1ಲಕ್ಷ 50 ಸಾವಿರ ವರೆಗೆ ಆರೋಗ್ಯ ಭದ್ರತೆ  ಸರಕಾರದಿಂದ ದೊರೆಯುತ್ತದೆ.

-ಪಿ.ಚನಗೊಂಡ, ತಹಶಿಲ್ದಾರ ರಬಕವಿ ಬನಹಟ್ಟಿ

 

ಸುದ್ದಿ ಓದಿ