ಅಲ್ಲಾಹ್ ರಸೂಲರ ಆದರ್ಶ ಪ್ರತಿಯೊಬ್ಬರೂ ಜೀವನದಲ್ಲಿ ಪಾಲಿಸಬೇಕು
ಸಿರಗುಪ್ಪ 12: ನೂರಾನಿ ರಾತ್ ಶಬ್ಏ- ಮೇರಾಜ್ ಉನ್ ನಬಿ ಸೋ ಆಚರಣೆ ಸಿರುಗುಪ್ಪ ಅಲ್ಲಾಹ್ ರಸೂಲರ ಆದರ್ಶ ತತ್ತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಪಾಲಿಸಬೇಕು ಎಂದು ಮೌಲ್ವಿ ಕಾಮಿಲ್ ಜಾಮಿಯಾ ನಿಜಾಮಿಯಾ ಮೌಲಾನಾ ಹಾಜಿ ಎಸ್ ಅಬ್ದುಲ್ ಸಮದ್ ನಿಜಾಮಿ ಹೇಳಿದರು ಸಿರುಗುಪ್ಪ ನಗರದ ಸೌದಾಗರ್ ಜುಮ್ಮಾ ಸುನ್ನಿ ಮಸೀದಿಯಲ್ಲಿ ಹಮ್ಮಿಕೊಂಡ ನೂರಾನಿ ರಾತ್ರಿ ಶಬ್ಬೇಮೇ ರಾಜ್ ಉನ್ ನಬಿ ಸೋ ಅವರ ಪೈಗಂಬರ್ ಅವರ ವಿಶೇಷ ಉಪನ್ಯಾಸ ಭಾಷಣದಲ್ಲಿ ಮಾತನಾಡುತ್ತಾ ನಾತೇ ರಸೂಲ್ ದರೂದೊ ಸಲಾಮ್ ಖುರಾನ್ ವಿಶೇಷವಾಗಿ ಇಡೀ ರಾತ್ರಿ ನಮಾಜ್ ದೊಂದಿಗೆ ದುವಾ ಮಾಡಿದರು .
ಮಸೀದಿಯ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ ಈದ್ಗಾ ಖಬರಸ್ತಾನ್ ಕಮಿಟಿ ಅಧ್ಯಕ್ಷ ಹ0ಡಿ ಹಾಶಿಮ್ ಮಾಜಿ ಜಿಲ್ಲಾ ಕರ್ನಾಟಕ ವಕ್ಫ್ ಬೋರ್ಡ್ ಸದಸ್ಯ ಹಾಜಿ ಅಬ್ದುಲ್ ನಬಿ ಸಮುದಾಯದವರು ಹಾಜರಿದ್ದರು ಸಿಹಿ ಪ್ರಸಾದ ವಿತರಿಸಲಾಯಿತು ಸಿರುಗುಪ್ಪ ತಾಲ್ಲೂಕಿನ ಜಾಮಿಯಾ ನಿಜಾಮಿಯಾ ಬಡಿ ಜಾಮಿಯಾ ವಲ್ಲೂರು ಹಾಜಿ ದರಗಾ ಬಿಲಾಲ್ ಅಕ್ಬರಿ ಹಾಜಿರಾ ಗೌಸಿಯಾ ಮರ್ಕಜ ಮೊಹಮ್ಮದೀಯಾ ಮದೀನಾ ತಾಲ್ಲೂಕಿನ ಎಲ್ಲಾ ಮಸೀದಿಗಳಲ್ಲಿ ಶ್ರದ್ಧಾ ಭಕ್ತಿಯಿಂದ ನಮಾಜ್ ದುವಾ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಅಲ್ಲಾಹನಲ್ಲಿ ಕೋರಿ ಶುಭ ಹಾರೈಸಿದರು ಎಲ್ಲಾ ಕಡೆ ಮೊಳಗಿದ ಶಿವನಾಮ ಮಹಾ ಶಿವರಾತ್ರಿಯ ಸ್ಮರಣೆ ಜಾಗರಣೆಸಿರುಗುಪ್ಪ ಶ್ರದ್ಧಾ ಭಕ್ತಿಯಿಂದ ಮಹಾ ಶಿವರಾತ್ರಿ ಅಂಗವಾಗಿ ನಗರದ ಶ್ರೀ ಶಂಭು ಲಿಂಗೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷವಾಗಿ ಭಕ್ತರು ಬೆಳಗಿನ ಜಾವದಿಂದಲೇ ಸಾಲುಗಟ್ಟಿ ನಿಂತು ಶಿವನ ಪ್ರಿಯವಾದ ಬಿಲ್ವ ಪತ್ರಿ ಫಲ ಪುಷ್ಪ ತಾಂಬೂಲ ನೈವೇದ್ಯ ದಿಂದ ಶಿವ ಧ್ಯಾನ ದರ್ಶನ ಪಡೆದು ಪುನೀತರಾಗಿ ಬಹುತೇಕ ಭಕ್ತರು ಉಪವಾಸ ವ್ರತ ಆಚರಿಸಿದರು ಇಡೀ ರಾತ್ರಿ ಶಿವನಾಮ ಸ್ತುತಿ ಜಾಗರಣೆ ಮಾಡಿದರು