ಮುಧೋಳ

ದೇಶ ಕಂಡ ಮಹಾನ್ ನಾಯಕ: ಮಲಘಾಣ

ದೇಶ ಕಂಡ ಮಹಾನ್ ನಾಯಕ: ಮಲಘಾಣ

ಮುಧೋಳ: ಭಾರತ ಕಂಡ ಶ್ರೇಷ್ಠ ನಾಯಕ, ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ಡಾ.ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿಯಾಗಿದೆ ಎಂದು ಮಾಜಿ ಜಿ.ಪಂ ಅಧ್ಯಕ್ಷ ಶಿವಕುಮಾರ ಎಸ್ ಮಲಾಘಾಣ ಹೇಳಿದರು. 

ನಗರದ ಶ್ರೀ ಸಂಗಮನಾಥ ಶಾಲೆಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ 131ನೇ ಜನ್ಮ, ದಿನೋತ್ಸವ ಹಾಗೂ ಮಹಾವೀರ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ದೇಶಕಂಡ ಮಹಾನ್ ನಾಯಕ ಎಂದು ತ್ರಿವೇಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿಶಿರ ಎಸ್ ಮಲಘಾಣ ಹೇಳಿದರು. 

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಮಲ್ಲು ಕಳ್ಳೆನ್ನವರ,ಪ್ರಾಚಾರ್ಯ ಡಾ.ಎಸ್‌.ಖಾನ್,ಮುಖ್ಯೋಫಾಧ್ಯಾಯ ವೆಂಕಟೇಶ ಗುಡೆಪ್ಪನವರ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. 

ಪೋಟೋ;ಎಮ್‌ಡಿಎಲ್‌-14-5;ಮುಧೋಳ ನಗರದ ಶ್ರೀ ಸಂಗಮನಾಥ ಶಾಲೆಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ 131ನೇ ಜನ್ಮ, ದಿನೋತ್ಸವ ಹಾಗೂ ಮಹಾವೀರ ಜಯಂತಿಯ ಕಾರ್ಯಕ್ರಮ ಜರುಗಿತು. ಆಡಳಿತಾಧಿಕಾರಿ ಮಲ್ಲು ಕಳ್ಳೆನ್ನವರ,ಪ್ರಾಚಾರ್ಯ ಡಾ.ಎಸ್‌.ಖಾನ್,ಮುಖ್ಯೋಫಾಧ್ಯಾಯ ವೆಂಕಟೇಶ ಗುಡೆಪ್ಪನವರ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ