ಮಹಲಿಂಗಪುರ

ಸಾಹಿತ್ಯ ಲೋಕಕ್ಕೆ ವಚನ ಸಾಹಿತ್ಯ ನೀಡಿದ ಶ್ರೇಷ್ಠ ಕವಿ ಸರ್ವಜ್ಞ: ಡಾ. ಎಚ್‌.ಎಂ. ಕುಂಬಾರ

ಸಾಹಿತ್ಯ ಲೋಕಕ್ಕೆ ವಚನ ಸಾಹಿತ್ಯ ನೀಡಿದ ಶ್ರೇಷ್ಠ ಕವಿ ಸರ್ವಜ್ಞ: ಡಾ. ಎಚ್‌.ಎಂ. ಕುಂಬಾರ

ಮಹಾಲಿಂಗಪುರ 22 :  ಕನ್ನಡ ಸಾಹಿತ್ಯ ಜಗತ್ತಿಗೆ ವಚನಗಳ ಮೂಲಕ ಶ್ರೇಷ್ಠ ಸಾಹಿತ್ಯದ ಕೊಡುಗೆ ನೀಡಿದ ಸರ್ವಜ್ಞರು ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ವಚನಕಾರರಾಗಿದ್ದಾರೆಂದು ಪ್ರಾದ್ಯಾಪಕ ಡಾ; ಎಚ್‌.ಎಂ. ಕುಂಬಾರ ಹೇಳಿದರು.  

ಚಿಮ್ಮಡಗ್ರಾಮದ ಗದ್ದಿಗೆ ಗುಡಿಯಲ್ಲಿ ಬುಧವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ತ್ರಿಪದಿ ಕವಿ ಸರ್ವಜ್ಞರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವರು ಸಮಾಜದ ಜ್ಞಾನವನ್ನು ಅರಿತವರು, ಸರ್ವರಿಗೂ ತಿಳಿಯುವಂತೆ ಆಡುಭಾಷೆಯಲ್ಲಿ ರಚಿಸಿದ ತ್ರಿಪದಿಗಳು ಇಂದಿಗೂ ಪ್ರಸ್ತುತವಾಗಿದ್ದು ಸಮಾಜವನ್ನು ತಿದ್ದುವ ಮೂಲಕ ಅವರು ಸಮಾಜ ಸುಧಾರಕರಾಗಿದ್ದಾರೆ. ಅವರ ಸಾಹಿತ್ಯದ ಮೂಲಕ ಇಂದಿನ ಯುವಕರಲ್ಲಿ ಅರಿವು ಮೂಡಿಸುವ ಕಾರ್ಯ ಸರಕಾರ ಮಾಡಬೇಕಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಶಿಕ್ಷಕ ಎಸ್‌.ಟಿ. ಕುಂಬಾರ, ಮಹಾಲಿಂಗ ಬರಗಲ್, ಕೃಷ್ಣಾ ಕುಂಬಾರ, ಪಾರಿಜಾತ ಕಲಾವಿದ ಯಮನಪ್ಪಾ ಕುಂಬಾರ, ಶ್ರೀಶೈಲ ಕುಂಬಾರ, ಸುಧಾಕರ ಕುಂಬಾರ, ಹಣಮಂತ ಕುಂಬಾರ ಸೇರಿದಂತೆ ಹಲವಾರು ಜನ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ