ನೆಲ ಕಚ್ಚಿರುವ ಚಂಡುವಿನ ತೋಟ ನೋಡಿ ಕಣ್ಣೀರಿಟ್ಟ ರೈತ
ಲೋಕದರ್ಶನ ವರದಿ
ಯಲಬುರ್ಗಾ 30: ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿರುವುದರಿಂದ ರೈತರು ಕಣ್ಣೀರಿಡುತ್ತಿರುವ ಘಟನೆ ಪಟ್ಟಣದ ವ್ಯಾಪ್ತಿಯಲ್ಲಿ ನಡೆದಿದೆ.
ಅತಿಯಾದ ಮಳೆಗೆ ಮೆಕ್ಕೆಜೋಳ, ಸೂರ್ಯಕ್ರಾಂತಿ, ಅತ್ತಿ ಕೊಳೆತು ಹೋಗಿದ್ದು ನೋಡಿದ್ದೇವೆ. ಈಗ ಅಕಾಲಿಕ ಮಳೆಗೆ ಚಂಡುವಿನ ತೋಟ ಸಂಪೂರ್ಣ ನಾಶವಾಗಿವೆ ಎಂದು ರೈತರು ಕಣ್ಣೀರಿಡುತ್ತಿದ್ದಾರೆ.
ಹೌದು ನಿನ್ನೆ ಸುರಿದ ಅಕಾಲಿಕ ಭಾರಿ ಮಳೆಗೆ ಅನ್ನದಾತರ ಬದುಕು ಸರ್ವನಾಶವಾಗಿದ್ದು, ತಡ ರಾತ್ರಿ ಸುರಿದ ಬಾರಿ ಮಳೆಗೆ 2000ಸಾವಿರಕೂ ಹೆಚ್ಚು ಚಂಡುವಿನ ಬೆಳೆ ಅಪಾರ ಪ್ರಮಾಣದ ನೆಲಕ್ಕುರುಳಿದೆ. ಮುಂಜಾನೆ ತಮ್ಮ ಜಮೀನುಗಳತ್ತ ಓಡಿದ ರೈತರಿಗೆ, ಹೊಲದಲ್ಲಿ ಭೂಮಿ ಕಚ್ಚಿರುವ ಬೆಳೆ ನೋಡಿ ಆಕಾಶವೇ ತಲೆಯ ಮೇಲೆ ಬಿದ್ದಂತ್ತಾಗಿದೆ