ಗ್ರಾಮೀಣ ಮಟ್ಟದಲ್ಲಿ ಪ್ರತಿಭೆಗಳ ವಿಕಾಸ ರಾಷ್ಟ್ರದ ಪ್ರಗತಿಯ ಸಂಕೇತ

ಗ್ರಾಮೀಣ ಮಟ್ಟದಲ್ಲಿ ಪ್ರತಿಭೆಗಳ ವಿಕಾಸ ರಾಷ್ಟ್ರದ ಪ್ರಗತಿಯ ಸಂಕೇತ

ಶಾಸಕ ಸಿದ್ದು ಸವದಿ ಅಭಿಮತ ಽಽ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸತ್ಕಾರ  

ತೇರದಾಳ 30: ನಾಗಾಲೋಟದಲ್ಲಿ ಸಾಗುತ್ತಿರುವ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ 100 ಕ್ಕೆ 99 ಪ್ರತಿಶತ ಅಂಕಗಳನ್ನು ಪಡೆಯುವುದರೊಂದಿಗೆ ನಗರವಾಸಿಗಳಿಗೆ ಸವಾಲೊಡ್ಡುತ್ತಿರುವ ಪ್ರತಿಭಾವಂತ ಮಕ್ಕಳ ಪ್ರಯತ್ನ ನಿಜವಾಗಲು ಪ್ರಶಂಸನೀಯ.ಇಂತಹ ಮಕ್ಕಳನ್ನು ನಾಡಿಗೆ ಉಡುಗೊರೆಯಾಗಿ ನೀಡುತ್ತಿರುವ ಶಿಕ್ಷಕ ಹಾಗೂ ಶಿಕ್ಷಣ ಸಂಸ್ಥೆಗಳ ಕಾರ್ಯ ಅವಿಸ್ಮರಣೀಯ ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರು ಶ್ರದ್ಧೆಯಿಂದ ನಿರಂತರ ಪ್ರಯತ್ನ ಪಟ್ಟಲ್ಲಿ ಇಂತಹ ಅಮೋಘ ಸಾಧನೆ ಮಾಡಲು ಸಾಧ್ಯವೆಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು. 

ತೇರದಾಳ ಮತಕ್ಷೇತ್ರದಾದ್ಯಂತ ಭಾಜಪ ಪಕ್ಷದ ವತಿಯಿಂದ ಆಯೋಜಿಸಿದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಮೋಘ ಸಾಧನೆ ತೋರಿದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದ ಪ್ರಯುಕ್ತ ಸಮೀಪದ ಹಳಿಂಗಳಿ ಗ್ರಾಮದ ಶ್ರೀ ಸದ್ಗುರು ಶರಣಬಸವೇಶ್ವರ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿದ ಅವರು ಪ್ರತಿಭೆ ಅರಳಲು ಪ್ರತಿಭಾವಂತ ಶಿಕ್ಷಕ ಸಮೂಹ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಪ್ರತಿಭೆಗಳನ್ನು ಸೃಜಿಸುತ್ತಿರುವ ಶಿಕ್ಷಕರ ಕಾರ್ಯ ಪ್ರಶಂಸನೀಯ ಇಂತಹ ಪ್ರತಿಭೆಗಳ ಪ್ರತಿಬಿಂಬ ಇನ್ನೂಳಿದ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆಯಾಗಲೆಂಬ ಸದುದ್ದೇಶದಿಂದ ಇಂದು ಇವರೆಲ್ಲರನ್ನು ಸತ್ಕರಿಸುತ್ತಿದ್ದು ಮುಂದೆ ಎಲ್ಲರೂ ಇವರಂತೆ ಉತ್ತಮ ಅಂಕಗಳನ್ನು ಪಡೆದು ಹೆತ್ತವರಿಗೆ ಕಲಿತ ಶಾಲೆಗೆ ಹಾಗೂ ನಾಡಿಗೆ ಕೀರ್ತಿ ತರುವಂತವರಾಗಬೇಕೆಂದು ಕಿವಿಮಾತು ಹೇಳಿದ ಅವರು ಗ್ರಾಮೀಣ ಮಟ್ಟದಲ್ಲಿ ಇಂತಹ ಪ್ರತಿಭೆಗಳು ಉದಯವಾಗುತ್ತಿರುವುದು ರಾಷ್ಟ್ರದ ಪ್ರಗತಿಯ ಸಂಕೇತವಾಗಿದೆಯಂದು ಹೆಮ್ಮೆ ವ್ಯಕ್ತಪಡಿಸಿದರು. 

ಅಹಿಂಸಾ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸತ್ಕಾರ : ಅಹಿಂಸಾ ವಿದ್ಯಾ ವರ್ಧಕ ಸಂಘದ ಅಹಿಂಸಾ ಪ್ರೌಢ ಶಾಲೆಯ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಮೋಘ ಸಾಧನೆ ತೋರಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. 

ತಮದಡ್ಡಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸತ್ಕಾರ ಹಾಗೂ ಆಯುಷ್ಮಾನ್ ಕಾರ್ಡ ವಿತರಣೆ : ಸಮೀಪದ ತಮದಡ್ಡಿ ಸರಕಾರ ಪ್ರೌಢ ಶಾಲೆಯಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಮೋಘ ಸಾಧನೆ ತೋರಿದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸತ್ಕರಿಸಿ ವಿದ್ಯಾರ್ಥಿಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ ವಿತರಿಸಿದರು. 

ಸಮಾರಂಭದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಸದ್ಗುರು ಶಿವಾನಂದ ಮಹಾಸ್ವಾಮಿಗಳು ಕಮರಿಮಠ ಹಳಿಂಗಳಿ ವಹಿಸಿದ್ದರು.ಅತಿಥಿಗಳಾಗಿ ಮಾಜಿ ಜಿ.ಪಂ ಸದಸ್ಯ ದೇವಲ ದೇಸಾಯಿ,ಮಾಜಿ ತಾ.ಪಂ ಸದಸ್ಯ ಬಿ.ಬಿ ವೆಂಕಟಾಪೂರ,ಗಂಗಪ್ಪ ಗನವಾಡಿ,ಮಾಜಿ ಗ್ರಾ.ಪಂ ಅಧ್ಯಕ್ಷ ಪರ​‍್ಪ ಹಿಪ್ಪರಗಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನ್ಯಾಯವಾದಿ ಕಿರಣಕುಮಾರ ದೇಸಾಯಿ,ಬಿಜೆಪಿ ಯುವ ಮೋರ್ಚಾ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ,ಅಹಿಂಸಾ ವಿದ್ಯಾ ವರ್ಧಕ ಸಂಘದ ಚೇರ್ಮನ್ ಬಿ.ಬಿ ಬಿರಾದಾರ ಪಾಟೀಲ,ಕಾರ್ಯದರ್ಶೀ ಅಪ್ಪಾಸಾಬ ದೇಸಾಯಿ,ಮುಖಂಡರಾದ ಮಾಧವರಾವ ಪಾಟೀಲ,ಈರಣ್ಣ ತೇಲಿ,ಕಲ್ಯಾಣಕುಮಾರ ಯಲ್ಲಟ್ಟಿ,ಮಲ್ಲಪ್ಪ ತೇಲಿ,ಸುರೇಶ ತೇಲಿ,ರಾವಸಾಬ ಪಾಟೀಲ,ಕೃಷ್ಣಪ್ಪ ಯಡೂರಿ,ಅಪ್ಪುಗೌಡ ಪಾಟೀಲ,ಸಚೀನ ಹುಲಕುಂದ,ಪದ್ಮಣ್ಣ ಲೋಕಾಪೂರ,ಬನಗೌಡ ಪಾಟೀಲ ಸೇರಿದಂತೆ ಶಾಲೆಗಳ ಸಿಬ್ಬಂದಿ ಹಾಗೂ ಇತರರು ಇದ್ದರು.ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ ಕಲಿಸಿದ ಗುರುವೃಂದಕ್ಕೆ ಅಭಿನಂದನೆಯನ್ನು ಸಲ್ಲಿಸಲಾಯಿತು. 


ಸುದ್ದಿ ಓದಿ