ಅಂತರರಾಷ್ಟ್ರೀಯ

ಕಾಬೂಲ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿಯ ಸ್ಥಳಾಂತರ ಕಾರ್ಯಾಚರಣೆ ಪೂರ್ಣ

ಕಾಬೂಲ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿಯ ಸ್ಥಳಾಂತರ ಕಾರ್ಯಾಚರಣೆ ಪೂರ್ಣ

ವಾಷಿಂಗ್ಟನ್, ಆ 30: ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯ ಎಲ್ಲಾ ಸ್ಥಳೀಯ ಅಫ್ಘಾನ್ ಸಿಬ್ಬಂದಿ ಹಾಗೂ ಅವರ ಕುಟುಂಬಗಳನ್ನು ಅಮೆರಿಕ ಸ್ಥಳಾಂತರಿಸಿದೆ ಎಂದು ಎಬಿಸಿ ನ್ಯೂಸ್ ಆಂತರಿಕ ವರದಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಒಟ್ಟು 2,800 ಅಫ್ಗನ್‌ ಪ್ರಜೆಗಳು ಭಾನುವಾರ ರಾಜಧಾನಿ ನಗರದ ವಿಮಾನ ನಿಲ್ದಾಣದಿಂದ ಮಧ್ಯರಾತ್ರಿ 12.30ಕ್ಕೆ ನಿರ್ಗಮಿಸಿದ್ದಾರೆ ಮತ್ತು ಸದ್ಯ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಈ ತಂಡದ ಯಾವುದೇ ವ್ಯಕ್ತಿ ಸ್ಥಳಾಂತರಗೊಳ್ಳಲು ಎದುರು ನೋಡುತ್ತಿಲ್ಲ ಎಂದು ಆಂತರಿಕ ವರದಿ ತಿಳಿಸಿದೆ.

ವರದಿಯ ಪ್ರಕಾರ, ಅಮೆರಿಕದ ರಾಜತಾಂತ್ರಿಕ ಸಿಬ್ಬಂದಿ ಇನ್ನೂ ನಿರ್ಗಮನದ ಹಂತದಲ್ಲಿದ್ದು, ಈಗಾಗಲೇ ಸ್ಥಳಾಂತರಗೊಂಡ ಹೆಚ್ಚಿನ ಸಂಖ್ಯೆಯ ಜನರನ್ನು ಸ್ವಾಗತಿಸಿರುವ ವರ್ಜೀನಿಯಾದ ಫೋರ್ಟ್ ಲೀ ಬೇಸ್ ಸನಿಹದಲ್ಲಿಯೇ ಇದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಮಂಗಳವಾರ, ಆಗಸ್ಟ್ 31 ರೊಳಗೆ  ಎಲ್ಲಾ ರಾಜತಾಂತ್ರಿಕ ಸಿಬ್ಬಂದಿಯನ್ನು ಸ್ಥಳಾಂತರಿಸಲು ಯೋಜಿಸಿದ್ದಾರೆ ಎಂದು  ಮಾಧ್ಯಮ ವರದಿಗಳು ತಿಳಿಸಿವೆ.

ಅಫ್ಗಾನ್‌ ಕುರಿತು ಭವಿಷ್ಯದಲ್ಲಿ ಅಮೆರಿಕದ ನಿಲುವು ಹೇಗಿರಬಹುದು ಎಂಬುದರ ಕುರಿತು ಬೈಡೆನ್‌ ಇನ್ನೂ ಯಾವುದೇ ಅಂತಿಮ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ.

ಸುದ್ದಿ ಓದಿ