ಮಹಲಿಂಗಪುರ

ಮಕ್ಕಳು ಪಡೆದ ಶಿಕ್ಷಣ ಅಕ್ಷಯ ಪಾತ್ರೆ ಇದ್ದಂತೆ: ಸವದಿ

ಮಕ್ಕಳು ಪಡೆದ ಶಿಕ್ಷಣ ಅಕ್ಷಯ ಪಾತ್ರೆ ಇದ್ದಂತೆ: ಸವದಿ


ಮಹಾಲಿಂಗಪುರ 30 : ಮಕ್ಕಳು ಪಡೆದ ಶಿಕ್ಷಣ ಅಕ್ಷಯ ಪಾತ್ರೆ ಇದ್ದಂತೆ ಅವರು ವೆಚ್ಚ ಮಾಡಿದಷ್ಟು ಗಳಿಕೆ ಹೆಚ್ಚು ಅಲ್ಲದೆ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು. 

 ಸ್ಥಳೀಯ ಪ್ರೆಸಿಡೆಂಟ್ ಹೋಟೆಲ್ ಸಭಾಭವನದಲ್ಲಿ ಶನಿವಾರ ಸಂಜೆ ಬ್ರಹ್ಮಾವರದ ಜಿ.ಎಂ. ಗ್ಲೋಬಲ್ ಸ್ಕೂಲ್ ಏರಿ​‍್ಡಸಿದ ಸ್ಥಳೀಯ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಖಾಸಗಿ ಶಾಲೆಗಳು ಉದಾತ್ತ ಗುರಿ ಹೊಂದಬೇಕೇ ವಿನಃ ಹಣ ಗಳಿಸುವತ್ತ ಮುಖ ಮಾಡಬಾರದು, ಅಂತಹ ಸಂಸ್ಥೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತವೆ. ಆ ನಿಟ್ಟಿನಲ್ಲಿ ಜಿ.ಎಂ. ಗ್ಲೋಬಲ್ ಸ್ಕೂಲ್ ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡುತ್ತಾ ಅವರ ಭವಿಷ್ಯದ ಸವಾಂರ್ಗೀಣ ಅಭಿವೃದ್ಧಿಯನ್ನು ಬಯಸಿರುವುದು ಸಂಸ್ಥೆ ಅಭಿನಂದನಾರ್ಹವಾಗಿದೆ ಎಂದರು.  

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥೆಯ ಅಧ್ಯಕ್ಷ 2005ರಲ್ಲಿ ಕೇವಲ 5 ಮಕ್ಕಳಿಂದ ಆರಂಭವಾದ ಜಿಎಂ ಗ್ಲೋಬಲ್ ವಸತಿ ಸ್ಕೂಲ್ ಇಂದು ಸುಮಾರು 3ಸಾವಿರ ಮಕ್ಕಳನ್ನು ಹೊಂದಿದ್ದು ಸಂಸ್ಥೆಯ ಯಶಸ್ಸಿನ ಹಾದಿಗೆ ಹೆಚ್ಚಿನ ಸಹಕಾರ ಈ ಭಾಗದಿಂದಲೇ ದೊರೆಯುತ್ತಿದೆ ಎಂದು ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಹಳ್ಳಿ, ಪಟ್ಟಣಗಳ ಹೆಸರುಗಳನ್ನು ಮೆಲಕು ಹಾಕಿದರು. 

 ಕೇಂದ್ರ ಸರ್ಕಾರ ಭವಿಷ್ಯದ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುತ್ತಿದ್ದು ಮುಂಚಿತವಾಗಿ ನಮ್ಮ ಸಂಸ್ಥೆಯಿಂದ ಅದರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಮಕ್ಕಳಿಗೆ ಅದೇ ತೆರನಾದ ಶಿಕ್ಷಣ ಕೊಡುವಲ್ಲಿ ನಮ್ಮ ಸಂಸ್ಥೆ ಅನಿಯಾಗುತ್ತಿದೆ ಈ ವ್ಯವಸ್ಥೆಗೆ ತಮ್ಮೆಲ್ಲರ ಸಹಕಾರವೂ ಅಷ್ಟೇ ಅಗತ್ಯವಾಗಿದೆ ಎಂದರು. 

ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ್, ಮಹಾಲಿಂಗಪ್ಪ ಕೌಜಲಗಿ ಮುಂತಾದವರಿದ್ದು, ಜಿ.ಎಂ.ಗ್ಲೋಬಲ್ ಸಂಸ್ಥೆಯ ಪ್ರಾಂಶುಪಾಲ ಪ್ರವೀಣ ಶೆಟ್ಟಿ ಸ್ವಾಗತಿಸಿ, ಚೇರ್ಮನ್ ಪ್ರಕಾಶ್ಚಂದ್ರ ಶೆಟ್ಟಿ ವಂದಿಸಿದರು. 


ಸುದ್ದಿ ಓದಿ