ಜನಗಣತಿಯಲ್ಲಿ ಸ್ಪಷ್ಟವಾಗಿ ಸಮುದಾಯ ಗುರುತಿಸಿಕೊಳ್ಳಬೇಕಿದೆ: ಗಾಳೆಮ್ಮನವರ

ಜನಗಣತಿಯಲ್ಲಿ ಸ್ಪಷ್ಟವಾಗಿ ಸಮುದಾಯ ಗುರುತಿಸಿಕೊಳ್ಳಬೇಕಿದೆ: ಗಾಳೆಮ್ಮನವರ

ಹಾವೇರಿ 09:  ಜಿಲ್ಲೆಯ ಪ್ರಸಿದ್ಧ ನಾಲ್ಕರ ಕ್ರಾಸ್ ಮಾಕೋಪದ  ಭೊತೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಪ್ರದೇಶ ಚಲವಾದಿ ಚೆನ್ನಯ್ಯ ಮಹಾಸಂಸ್ಥಾನ, ಅಕ್ಕಿಆಲೂರು ವತಿಯಿಂದ ಆಯೋಜಿಸಿದ ವಿಚಾರ ಸಂಕಿರಣ ಹಾಗೂ  ಸಾಂಸ್ಕೃತಿಕ  ಕಾರ್ಯಕ್ರಮವನ್ನು  ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಜಾಗೃತಿ ಸಮಿತಿ ಸದಸ್ಯರಾದ ಎನ್ ಎನ್ ಗಾಳೆಮ್ಮನವರ ಉದ್ಘಾಟಿಸಿದರು.  

ನಂತರ  ಮಾತನಾಡಿದ ಅವರು  ರಾಜ್ಯದಲ್ಲಿ 42ಕ್ಕೂ ಹೆಚ್ಚು ಜಾತಿಯಿಂದ ಕರೆಯುವ ಚಲವಾದಿ ಸಮುದಾಯ ಸ್ವತಂತ್ರ ಪೂರ್ವದಲ್ಲಿ ರಾಜ್ಯದ ಉದ್ದಗಲಕ್ಕೂ ಹಬ್ಬಿತ್ತು. ಮೈಸೂರು ರಾಜರು ಕನ್ನಡವನ್ನು ಮಾತನಾಡುವ ಜನರನ್ನು ಆದಿ ಕರ್ನಾಟಕವೆಂದು ತಮಿಳು  ಮಾತನಾಡುವ ಜನರನ್ನು ಆದಿದ್ರಾವಿಡ ಎಂದು ತೆಲುಗು ಮಾತನಾಡುವವರನ್ನು ಆದಿ ಆಂಧ್ರ ಹೀಗೆ ಸಮಾಜವನ್ನು ವಿವಿಧ ಪ್ರಾದೇಶಿಕವಾಗಿ ಹೆಸರನ್ನು ಅದಲು-ಬದಲು ಮಾಡಿ ಮೈಸೂರು ರಾಜರು ಅಸ್ಪೃಶ್ಯತೆ ಜಾತಿಯನ್ನು ಹೋಗಲಾಡಿಸಲು ಪ್ರಯತ್ನ ಮಾಡಿದವರು.  

ನಾಲ್ವಡಿ ಕೃಷ್ಣರಾಜ ಒಡೆಯರು ಶೋಷಿತ ಸಮುದಾಯಕ್ಕೆ ಹಾಸ್ಟೆಲ್ ವ್ಯವಸ್ಥೆ ಶಿಕ್ಷಣ,ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸಮುದಾಯವನ್ನು ಕಳಕಳಿಯಿಂದ ಅಭಿವೃದ್ಧಿಗೆ ಶ್ರಮಿಸಿ, ಮೈಸೂರು ರಾಜರು ಇಟ್ಟ ಹೆಸರುಗಳನ್ನು ನಮ್ಮ ಸಮುದಾಯಗಳು ಸ್ವೀಕರಿಸಿದ್ದಾರೆ. ಜಾತಿ ಜನಗಣತಿಯಲ್ಲಿ ಬರಿಸುವಾಗ ಆದಿಕರ್ನಾಟಕ ಆದಿದ್ರಾವಿಡ ಆದಿ ಆಂಧ್ರ ಬರೆದಿರುವುದೇ ಹಿಂದಿನ ಸ್ಪಷ್ಟವಾದ ಜಾತಿಯ ಜನಸಂಖ್ಯೆ ತೊಡಕಾಗಿರುವುದು ವಿಷಾದಕರ. ಚಲವಾದಿ ಸಮುದಾಯದ ಹೆಸರಿನಲ್ಲಿ ಬೆಳೆದಂತಹ ಸಮುದಾಯದ ನಾಯಕರುಗಳು, ಸರ್ಕಾರಿ ನೌಕರಿಯನ್ನು ಪಡೆದವರು ಸರ್ಕಾರದ ಸೌಲಭ್ಯವನ್ನು ಪಡೆದವರು ಕಟ್ಟಕಡೆ ಇರತಕ್ಕಂತಹ ಸಮುದಾಯದವರನ್ನು ಗುರುತಿಸಿ ಸಂಘಟಿಸದೇ ಇರುವುದು ರಾಜ್ಯದಲ್ಲಿ ಚಲುವಾದಿ ಸಮುದಾಯ ಮುಖ್ಯವಾಹಿನಿಗೆ ಬರದೇ ಹಿಂದುಳಿಯಲು ಕಾರಣವಾಗಿದೆ. ರಾಜ್ಯದ ಉದ್ದಗಲಕ್ಕೂ ಅಪಾರ ಸಂಖ್ಯೆಯಲ್ಲಿ ಈ ಸಮುದಾಯವು ವ್ಯಾಪ್ತಿಯಲ್ಲಿ 10 ಲಕ್ಷಕ್ಕೂ ಅಧಿಕ ಜನರು ಬೌದ್ಧ ಧರ್ಮವನ್ನು ಅನುಸರಿಸುವರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಜಾತಿಯನ್ನು ಹೇಳದೇ ಇರುವುದು ಜನಾಂಗದ ಅಂಕಿಸಂಖ್ಯೆ  ಗೊಂದಲವಾಗುತ್ತಿದೆ. ಮುಂಬರುವ ಜನಗಣತಿಯಲ್ಲಿ ಸ್ಪಷ್ಟವಾಗಿ ಸಮುದಾಯವು ರಾಜ್ಯದ ಉದ್ದಗಲಕ್ಕೂ ಒಂದೇ ಸಮುದಾಯದಲ್ಲಿ ಗುರುತಿಸಿ ಕೊಂಡಾಗ ಮಾತ್ರ ರಾಜ್ಯದಲ್ಲಿ  ಜನಸಂಖ್ಯೆಯನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಾಧ್ಯ ಎಂದು ಎನ್ ಎನ್ ಗಾಳೆಮ್ಮನವರ ಹೇಳಿದರು. 

ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾ ತಂಡಗಳಿಂದ ಕಲಾ ಪ್ರದರ್ಶನಗೊಂಡವು. ಮುಖಂಡರಾದ ಕೆ.  ಅಶೋಕ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಯಾಗಿ ಧರ್ಮಣ್ಣ ಉಳವಪ್ಪ ಕಲಾದಗಿ.ಮಾರುತಿ ಚಲವಾದಿ ಸೇರಿದಂತೆ ಅನೇಕರಿದ್ದರು. 


ಸುದ್ದಿ ಓದಿ