ರಬಾಕಾವಿಬನಹಟ್ಟಿ

ಶ್ರೀಕ್ಷೇತ್ರ ಇಂಚಗೇರಿ ಮಠದ ಸಪ್ತಾಹ ರದ್ದು

ಶ್ರೀಕ್ಷೇತ್ರ ಇಂಚಗೇರಿ ಮಠದ ಸಪ್ತಾಹ ರದ್ದು

ರಬಕವಿ-ಬನಹಟ್ಟಿ 16 : ಚಡಚಣ  ತಾಲೂಕಿನ  ಕ್ಷೇತ್ರ ಇಂಚಗೇರಿ ಮಠದಲ್ಲಿ ಶನಿವಾರ  19  ರಿಂದ ಸೋಮವಾರ 21 ಜೂನ್ 2021 ವರೆಗೆ  ಕ್ಷೇತ್ರ ಇಂಚಗೇರಿ ಮಠದಲ್ಲಿ  ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ  ದಿವ್ಯ ಸಾನಿಧ್ಯದಲ್ಲಿ ಜರುಗಬೇಕಾಗಿದ್ದ ದೇವರ ಸಪ್ತಾಹವೆಂದೆ ಖ್ಯಾತವಾದ  ಸದ್ಗುರು ಸಮರ್ಥ ಮಾಧವಾನಂದ  ಪ್ರಭೂಜಿಯವರ 41 ನೇಯ ಪುಣ್ಯ ಸ್ಮರಣೋತ್ಸವದ ಸಪ್ತಾಹವನ್ನು ಸರಕಾರದ ನಿಯಮದಂತೆ ರದ್ದು ಪಡಿಸಲಾಗಿದೆ. 

ಸಪ್ತಾಹವು ಅತ್ಯಂತ ಸರಳ ಸಂಕ್ಷಿಪ್ತವಾಗಿ ಪುಣ್ಯಸ್ಮರಣೋತ್ಸವದ ಮಿತಿಯಂದು ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ಗದ್ದುಗೆಗಳ ಪೂಜೆ ಹಾಗೂ ನಿತ್ಯ ನೇಮ ಭಜನೆ ಮಾತ್ರ  ಜರಗುವವು. ಸಪ್ತಾಹದ ನಿಮಿತ್ಯ  ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರಗುವದಿಲ್ಲ ಹಾಗೂ ಜಾತ್ರೆ ಅಂಗಡಿ ಹೊಟೆಲಗಳು ಮುಂಗಟ್ಟುಗಳಿಗೆ ಅನುಮತಿ ಇರುವುದಿಲ್ಲ. 

ಮಠದ ಸರ್ವ ಸದ್ಭಕ್ತರು ಮಠಕ್ಕೆ ಬರದೆ ತಮ್ಮ ತಮ್ಮ ಮನೆಗಳಲ್ಲಿ ಹಾಗೂ ತಮ್ಮ ಊರಿನ ಆಶ್ರಮಗಳಲ್ಲಿ ಸರ್ಕಾರದ ನಿಯಮದಂತೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಕ್ಕೆ ಮಾಸ್ಕ ಧರಿಸಿ  ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ ಪುಣ್ಯ ಸ್ಮರಣೋತ್ಸವ ಸಪ್ತಾಹವನ್ನು ಆಚರಿಸಿ, ಭೂಮಂಡಲ ಕೋರೋನಾ ರೋಗದಿಂದ ಮುಕ್ತವಾಗಲಿ ಸಕಲರೂ ಸುಖವಾಗಿ ಬಾಳಲಿ ಸಕಲ ಸಂಕಟ ನೀಗಲಿ ಸಕಲರಿಗೂ ಕಲ್ಯಾಣವಾಗಲಿ ಸಕಲರ ದುಃಖವು ಸರಿಯಲಿ ಎಂಬ ಮಹಾ ಸಂಕಲ್ಪದೊಂದಿಗೆ  ಧ್ಯಾನ ಉಪಾಸನೆಯೊಂದಿಗೆ ಸಪ್ತಾಹ ಆಚರಿಸಿ,  ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವ ಕೃಪೆಗೆ ಪಾತ್ರರಾಗಬೇಕೆಂದು ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರು  ತಿಳಿಸಿದ್ದಾರೆ. 


ಸುದ್ದಿ ಓದಿ