ಮಹಲಿಂಗಪುರ

ಸಂಘದ ಪ್ರತಿ ಆಸ್ತಿಯ ಸದ್ಬಳಕೆ ಮತ್ತು ಉತ್ತಮ ಸೇವೆಯ ಗುರಿ: ಬಸನಗೌಡ ಪಾಟೀಲ.

ಸಂಘದ ಪ್ರತಿ ಆಸ್ತಿಯ ಸದ್ಬಳಕೆ ಮತ್ತು ಉತ್ತಮ ಸೇವೆಯ ಗುರಿ: ಬಸನಗೌಡ ಪಾಟೀಲ.

ಮಹಾಲಿಂಗಪುರ17:  ನಮ್ಮ ಸಂಘವು 2020-21 ನೇ ಸಾಲಿನಲ್ಲಿ 5,35,203 ರೂ. ಲಾಭ ಗಳಿಸಿದ್ದು ಶೇ.14  ಡೆವಿಡೆಂಡ್ ಘೋμÀಣೆ ಮಾಡಲಾಗಿದೆ ಎಂದು ಅಧ್ಯಕ್ಷ ಬಸನಗೌಡ ಪಾಟೀಲ ಹೇಳಿದರು.

ಸ್ಥಳೀಯ ಪಿಕೆಪಿಎಸ್ 2020-21 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಬೆಳೆ ಸಾಲ, ವಾರ್ಷಿಕ ಶೇ.3ರ ದರದಲ್ಲಿ ಮಧ್ಯಮಾವಧಿ ಟ್ರ್ಯಾಕ್ಟರ್ ಸಾಲದಲ್ಲಿ ಪ್ರಸಕ್ತ ಸಾಲಿನಲ್ಲಿ 4ಟ್ರ್ಯಾಕ್ಟರ್ ಗಳು ಸೇರಿದಂತೆ 4 ವರ್ಷಗಳಲ್ಲಿ ಒಟ್ಟು 20 ಟ್ರ್ಯಾಕ್ಟರ್ ಗಳಿಗೆ ಸಾಲ ನೀಡಲಾಗಿದೆ.

 ನೇಕಾರಿಕೆ ಸಾಲ, ಬಿನ್ನಶೇತ್ಕಿ ಸಾಲ, ವಾಹನ ಸಾಲ, ಹೈನುಗಾರಿಕೆ ಮತ್ತು ಪೈಪ್ ಲೈನ್ ಸಾಲ, ಅಪಘಾತ ವಿಮೆ, ಮರಣೋತ್ತರ ಸಹಾಯಧನ 5 ಸಾವಿರ ಹಾಗೂ ಮುಂತಾದ ಜನಪರ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ರೈತರ ಅಭಿವೃದ್ಧಿಗೆ ಶ್ರಮಿಸುತ್ತಾ ಸಾಕμÀ್ಟು ಉತ್ತಮ ಸಾಧನೆಯೊಂದಿಗೆ ಮುಂದೆಯೂ ಸಹ 1.03 ಕೋಟಿ ಅಂದಾಜು ವೆಚ್ಚದ ವಾಣಿಜ್ಯ ಮಳಿಗೆ ನಿರ್ಮಾಣದೊಂದಿಗೆ ಸಂಘದ ಪ್ರತಿ ಆಸ್ತಿಯ ಸದ್ಬಳಕೆ ಮಾಡಿಕೊಂಡು ಇನ್ನೂ ಹೆಚ್ಚು ಲಾಭ ಮತ್ತು ಉತ್ತಮ ಸೇವೆಯನ್ನು ನೀಡುವ ಗುರಿಯೊಂದಿಗೆ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಸಮಾರಂಭದಲ್ಲಿ ಬ್ಯಾಂಕ್ ಶೇರುದಾರರ 25 ಪ್ರತಿಭಾವಂತ ಹಾಗೂ ಪಟ್ಟಣದ ಇತರೆ 5 ಬಡ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವ ಧನ 2ಸಾವಿರ ರೂ.ಗಳೊಂದಿಗೆ ಮೆಡಲ್ ಗಳನ್ನು ನೀಡಲಾಯಿತು.

ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಕೆ.ಗಿಂಡೆಯವರನ್ನೂ ಸಹ ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಮತ್ತು ನಂತರ ಲೆಕ್ಕಪತ್ರ ಅಲ್ಲದೇ ಇತರೆ ವಿಷಯಗಳನ್ನು ಪರಿಶೀಲಿಸಿ ಶೇರುದಾರರ ಚಪ್ಪಾಳೆಯ ಮೂಲಕ ಅನುಮೋದಿಸಲಾಯಿತು.

ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ಈರಣ್ಣ ಬೆಟಗೇರಿ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ಸಾಯವ್ವ ಸಂಶಿ, ನಿರ್ದೇಶಕರಾದ ಈರಪ್ಪ ದಿನ್ನಿಮನಿ, ಅಶೋಕಗೌಡ ಪಾಟೀಲ, ಮಲ್ಲಿಕಾರ್ಜುನ ಕುಳ್ಳೊಳ್ಳಿ, ವಿಷ್ಣುಗೌಡ ಪಾಟೀಲ, ಶಿವಲಿಂಗ ಘಂಟಿ, ಸಂಗಪ್ಪ ಡೋಣಿ, ಹನುಮಂತ ಬುರುಡ, ಅಲ್ಲಪ್ಪ ಪೂಜಾರಿ, ಶೈಲಾ ಪವಾರ ಹಾಗೂ ನೀಲವ್ವ ಪೂಜಾರಿ, ಪ್ರಧಾನ್ಯಪ್ಪ ಗೋಲಭಾವಿ, ದೀಪಾ ಇಂಗಳಗಾವಿ ಮುಂತಾದವರು ಇದ್ದರು.

ಸುದ್ದಿ ಓದಿ