ತಾಲಿಬಾನ್ ಸರ್ಕಾರಕ್ಕೆ ತರಾತುರಿಯ ಮನ್ನಣೆ ಇಲ್ಲ; ಅಮೆರಿಕ
ವಾಷಿಂಗ್ಟನ್, ಆ 31: ತಾಲಿಬಾನ್ (ರಷ್ಯಾದಲ್ಲಿ ನಿಷೇಧಿತ) ಅನ್ನು ಅಫ್ಘಾನಿಸ್ತಾನದ ಕಾನೂನುಬದ್ಧ ಆಡಳಿತಗಾರರೆಂದು ಗುರುತಿಸಲು ಅಮೆರಿಕ ಸರ್ಕಾರ ಮತ್ತು ಅಂತರಾಷ್ಟ್ರೀಯ ಸಮುದಾಯಕ್ಕೆ ಯಾವುದೇ ತರಾತುರಿಯಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಮಂಗಳವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸನ್ನಿವೇಶದಲ್ಲಿರುವಂತೆಯೇ, ಇದು ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದರು.
ಆದರೆ ತಾಲೀಬಾನ್ ಸರ್ಕಾರವನ್ನು ಪರಿಗಣಿಸಲು, ಮನ್ನಣೆ ನೀಡಲು ಅಮೆರಿಕ ಹಾಗೂ ಅಂತರಾಷ್ಟ್ರೀಯ ಸಮುದಾಯಕ್ಕೆ ಯಾವುದೇ ತರಾತುರಿಯಿಲ್ಲ. ಪರಿಸ್ಥಿತಿ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.