ಶೆಲ್ಲಿಂಗ್ ದಾಳಿ ಮುಂದುವರಿದರೆ ರಾಜತಾಂತ್ರಿಕ ಸಂಬಂಧ ಹಾಳು: ಪ್ರಧಾನಿ
ಕೈರೋ, ಸೆಪ್ಟೆಂಬರ್ 30: ಇರಾಕಿನಲ್ಲಿ ಶೆಲ್ಲಿಂಗ್ ಮುಂದುವರಿದರೆ ಅಮೆರಿಕ ರಾಯಭಾರ ಕಚೇರಿಯನ್ನು ಮುಚ್ಚಬಹುದು ಎಂದು ಇರಾಕಿ ಪ್ರಧಾನಿ ಪ್ರಧಾನಿ ಮುಸ್ತಫಾ ಅಲ್-ಕಧಿಮಿ ಹೇಳಿದ್ದಾರೆ.
ಶೆಲ್ ದಾಳಿ ಮುಂದುವರೆದರೆ ಹಲವು ದೇಶಗಳು , ವಿಶೇಷವಾಗಿ ಅಮೆರಿಕ ಬಾಗ್ದಾದ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚಲಿದ್ದು ರಾಜತಾಂತ್ರಿಕ ಸಂಬಂಧಗಳು ಹಾಳಾಗಲಿದೆ ಎಂಬ ಆತಂಕವನ್ನು ತೋಡಿಕೊಂಡರು .
ಇದಕ್ಕೂ ಮೊದಲು ಅಲ್-ಕಧಿಮಿ ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬಗ್ಗೆ ತಕ್ಷಣ ತನಿಖೆಗೆ ಆದೇಶಿಸಿದ್ದರು ದುರಂತದಲ್ಲಿ ಕನಿಷ್ಠ ಐವರು ನಾಗರಿಕರು ಹತರಾಗಿದ್ದರು.
ನಿನ್ನೆಯೂ ರಾಕೆಟ್ ದಾಳಿಗೆ ಮಕ್ಕಳು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಹಲವು ದೇಶಗಳು ರಾಯಭಾರ ಕಚೇರಿಗಳನ್ನು ಮುಚ್ಚುವ ಬಗ್ಗೆ ಒತ್ತಾಯಿಸಿವೆ, ಈ ಪ್ರದೇಶದಲ್ಲಿ ಭದ್ರತೆಯನ್ನು ಖಾತ್ರಿಪಡಿಸದಿದ್ದರೆ, ಅವರು ಇರಾಕಿನಲ್ಲಿ ಕೆಲಸ ಮಾಡಲು ಸಾಧ್ಯವಾಗದು ಎಂದೂ ಅಲ್-ಕಧಿಮಿ ಹೇಳಿದರು.