ರಾಷ್ಟ್ರಪತಿಗಳಿಂದ ಮಹಾಲಿಂಗಪುರದ ಸಪನಾಗೆ ರಾಷ್ಟ್ರ ಪ್ರಶಸ್ತಿ ಪ್ರದಾನ.
ಮಹಾಲಿಂಗಪುರ: ಸ್ಥಳೀಯ ಎಸ್ ಸಿ ಪಿ, ಕೆಎಲ್ಈ ಪೌಢ ಶಾಲೆಯ ವಿಜ್ಞಾನ ಶಿಕ್ಷಕಿ ಸಪನಾ ಶ್ರೀಶೈಲ ಅನಿಗೋಳ ಇವರಿಗೆ ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದರು.
ವಿಜ್ಞಾನದ ವಿಷಯದ ಕ್ರಿಯಾಶೀಲ ಶಿಕ್ಷಕರಾಗಿ ಮಕ್ಕಳ ಕಲಿಕೆಗೆ ವಿಭಿನ್ನ ಮಾರ್ಗದರ್ಶಕರಾಗಿ, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಮತ್ತು ಪ್ಲಾಸ್ಟಿಕ್ ಮುಕ್ತ ವಿಶ್ವದ ಕನಸುಗಾರಿಕೆ ಮತ್ತು ಸಾಕಾರಕ್ಕಾಗಿ ಮಾಡಿದ ಸೇವೆ ಪರಿಣಿಸಿ ಮಹಾಲಿಂಗಪುರದ ಹೆಮ್ಮೆಯ ಶಿಕ್ಷಕಿ ಸಪನಾ ಅನಿಗೋಳ ಅವರಿಗೆ ಮಂಗಳವಾರ ನವ ದೆಹಲಿ ವಿಜ್ಞಾನ ಭವನದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾರತ ಸರ್ಕಾರ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಪ್ರಾಧಾನಿ ಮೋದಿಯವರ ಜೊತೆ ಸಂವಾದ ನಡೆಸಿ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.