ಭಾವೈಕ್ಯತೆಯೊಂದಿಗೆ ಸಂಭ್ರಮಿಸಿದ ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ
ರಾಣೆಬೆನ್ನೂರ 26: ಸ್ಪಟಿಕ ಲಿಂಗದ ಮೂಲಕ ಇಡೀ ವಿಶ್ವಕ್ಕೆ ಹೆಸರುವಾಸಿಯಾಗಿರುವ ಸುಕ್ಷೇತ್ರ ಲಿಂಗದಹಳ್ಳಿಯಲ್ಲಿ ಗುರುವಾರದಂದು ರಂಭಾಪುರಿ ಶಾಖಾ ಮಠದ ವತಿಯಿಂದ ಪಂಚಪೀಠಾಧೀಶರರ ಅಡ್ಡಪಲ್ಲಕ್ಕಿ ಮಹೋತ್ಸವವು ಸಹಸ್ರಾರು ಭಕ್ತರೊಂದಿಗೆ, ಅಭಿಮಾನಿಗಳೊಂದಿಗೆ ಸಡಗರ ಸಂಭ್ರಮದೊಂದಿಗೆ ಅದ್ದೂರಿಯಾಗಿ ನೆರವೇರಿತು.
ರಂಭಾಪುರಿ ಪೀಠದ ಡಾ. ವೀರ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಉಜ್ಜೈನಿಯ ಸಿದ್ದಲಿಂಗರಾಜ ದೇಶ ಕೇಂದ್ರ ಮಹಾಸ್ವಾಮಿಗಳು, ಶ್ರೀಶೈಲ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮಿಗಳು, ಕಾಶಿ ಪೀಠದ ಡಾ. ಚಂದ್ರಶೇಖರ ಮಹಾಸ್ವಾಮಿಗಳು ಹಾಗೂ ಕಾಶಿಯ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಭಾಗವಹಿಸಿ ಭಕ್ತರಿಗೆ ಆಶೀರ್ವಾದ ಮಾಡಿದರು. ಮಹೋತ್ಸವದ ಕೇಂದ್ರ ಬಿಂದು ಲಿಂಗದಹಳ್ಳಿ ರಂಭಾಪುರಿ ಪೀಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಯಡೆಯೂರಿನ ರೇಣುಕಾ ಶಿವಾಚಾರ್ಯ ಸ್ವಾಮಿಗಳು, ಸಿಂದಗಿಯ ಡಾ. ಪ್ರಭು ಸಾರಂಗದೇವಸ್ವಾಮಿಗಳು, ಮುಕ್ತಿಮಂದಿರದ ವಿಮಲ ರೇಣುಕ ಸ್ವಾಮಿಗಳು, ಎಮ್ಮಿಗನೂರಿನ ವಾಮದೇವ ಮಹಾಂತ ಶ್ರೀಗಳು, ಶಿವಗಂಗಾದ ಡಾ ಮಲಯ ಶಾಂತಮುನಿ ಸ್ವಾಮಿಗಳು, ಹಾವೇರಿ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು, ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಹರಪನಹಳ್ಳಿಯ ವರ ಸದ್ಯೋಜಾತ ಸ್ವಾಮಿಗಳು, ದಿಂಡದಹಳ್ಳಿಯ ಪಶುಪತಿ ಶಿವಾಚಾರ್ಯ ಮಹಾಸ್ವಾಮಿಗಳು, ಪಂಚಗಣ್ಣಿಗೆಮಠದ ಚನ್ನವೀರ ದೇಶಿಕೇಂದ್ರ ಸ್ವಾಮಿಗಳು, ಭದ್ರಾವತಿಯ ರಾಚೋಟೇಶ್ವರ ಸ್ವಾಮಿಗಳು, ಶಿವನಳ್ಳಿಯ ನಾಲ್ವಡಿ ಶಾಂತಲಿಂಗ ಸ್ವಾಮಿಗಳು, ಹೂಲಿಯ ಶಿವ ಸಿದ್ದರಾಮೇಶ್ವರ ಸ್ವಾಮಿಗಳು, ಮುಳವಾಡದ ಸಿದ್ದಲಿಂಗ ಶಿವಾಚಾರ್ಯರು, ಆಳವಂಡಿಯ ಮರುಳಾರಾಧ್ಯ ಸ್ವಾಮಿಗಳು, ನರೇಗಲ್ದದ ಮಲ್ಲಿಕಾರ್ಜುನ ಸ್ವಾಮಿಗಳು, ಮಣಕೂರಿನ ಮಲ್ಲಿಕಾರ್ಜುನ ಸ್ವಾಮಿಗಳು, ಕಂಕಳಿಯ ಸೋಮಶೇಖರ ಶ್ರೀಗಳು, ನರಸಾಪುರದ ಶಿವಕುಮಾರ್ ಶಿವಶರಣರು ಮದ್ದರಕಿ ಗಚ್ಚಿನಮಠದ ಶ್ರೀ ಶಿವಯೋಗಿ ಶ್ರೀಗಳು ಸೇರಿದಂತೆ ಮತ್ತಿತರರು ಸ್ವಾಮಿಗಳು ಇದ್ದರು.
ಎಸ್. ಎಸ್. ರಾಮಲಿಂಗಣ್ಣನವರ , ವಿ.ಎಸ್.ಹಿರೇಮಠ, ಗಂಗಾಧರ ಸ್ವಾಮಿ ಹಿರೇಮಠ, ಸಿ.ಎನ್. ಪೂಜಾರ, ಟಿ ಚಿದಾನಂದಪ್ಪ, ನಾಗನಗೌಡ ಪಾಟೀಲ, ರುದ್ರಗೌಡ ಪಾಟೀಲ, ಶಿವಣ್ಣ ನಂದಿಹಳ್ಳಿ, ಸಿದ್ದಲಿಂಗಪ್ಪ ಕೋಳಿ, ನಿತ್ಯಾನಂದ ಕುಂದಾಪುರ, ಮಲ್ಲಿಕಾರ್ಜುನಪ್ಪ ಪೂಜಾರ, ಚನ್ನಬಸಪ್ಪ ದೊಡಗೌಡ್ರ, ಕರಿಯಪ್ಪ ಜೋಗೇರ ಸೇರಿದಂತೆ ಲಿಂಗದಹಳ್ಳಿಯ ಹಾಗೀ ಸುತ್ತಮುತ್ತಲಿನ ಸಹಸ್ರಾರು ಭಕ್ತರು, ಹರ ಗುರು ಚರಮೂರ್ತಿಗಳು ಇದ್ದರು.