ಸಮಾಜದ ಸಭೆಯಲ್ಲಿ ಕುಲಕರ್ಣಿ ವಿಷಯ ಬೇಡ : ಬಸವಜಯ ಮೃತ್ಯುಂಜಯ ಶ್ರೀ
ಲೋಕದರ್ಶನ ವರದಿ
ಬೆಳಗಾವಿ : ಮಾಜಿ ಮಂತ್ರಿ ವಿನಯ ಕುಲಕರ್ಣಿ ಅವರ ಬಿಡುಗಡೆ ಹಿನ್ನೆಲೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಿರಾಕರಿಸಿದರು.
ಶನಿವಾರದಂದು ಬೆಳಗಾವಿಯಲ್ಲಿ ಪಂಚಮಸಾಲಿ ಲಿಂಗಾಯಿತರಿಗೆ ಪ್ರವರ್ಗ 2ರಲ್ಲಿ ಮೀಸಲಾತಿ ನೀಡಲೂ ಸರ್ಕಾರ ಕೇಳಿರುವ ಸಮಯಾವಕಾಶದ ವೇಳೆ ಸರಕಾರ ಗಮನ ಸೆಳೆಯಲು ಸಭೆಯನ್ನ ಕರೆಯಲಾಗಿತ್ತು. ಈ ವೇಳೆ ಸಮಾಜ ಸಭೆಯಲ್ಲಿ ವಿನಯ ಕುಲಕರ್ಣಿ ಅವರ ಕುರಿತು ಮಾತನಾಡುವುದು ಸೂಕ್ತವಲ್ಲ ಎಂದರು. ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬಿಡುಗಡೆ ಹಿನ್ನೆಲೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಿರಾಕರಿಸಿದರು. ಪಂಚಮಸಾಲಿ ಲಿಂಗಾಯತರಿಗೆ ಪ್ರವರ್ಗ 2ರಲ್ಲಿ ಮೀಸಲಾತಿ ನೀಡಲು ಸರ್ಕಾರ ಸೆಪ್ಟೆಂಬರ್ 15ರ ವರೆಗೆ ಕಾಲಾವಕಾಶವನ್ನ ಕೇಳಿದೆ. ಆದ್ಧರಿಂದ ಸರ್ಕಾರಕ್ಕೆ ನಮ್ಮ ವಿಚಾರವನ್ನು ಮನದಟ್ಟಾಗಿಸುವ ಉದ್ಧೇಶದಿಂದ ಆಗಸ್ಟ್ 26ರಿಂದ ಅಕ್ಟೋಬರ್ ಒಂದರ ವರೆಗೂ ರಾಜ್ಯ ಮಟ್ಟದ ಅಭಿಯಾನವನ್ನ ಹಮ್ಮಿಕೊಳ್ಳಲಾಗಿದೆ.
ಚಾಮರಾಜ ನಗರದ ಮಲೇಮಹಾದೇಶ್ವರ ಬೆಟ್ಟದಿಂದ ಈ ಪಂಚಮಸಾಲಿ ಪತ್ರಿಜ್ಞಾ ಪಂಚಾಯಿತಿ ಎಂಬ ಅಭಿಯಾನ ಆರಂಭಗೊಳ್ಳಲಿದೆ. ಇದರಲ್ಲಿ ಗೌಡ ಲಿಂಗಾಯಿತರು, ದೀಕ್ಷ ಲಿಂಗಾಯಿತರು, ಪಂಚಮಸಾಲಿ ಲಿಂಗಾಯಿತರು ಭಾಗಿಯಾಗಲಿದ್ದಾರೆ. ಇನ್ನು ಈ ಅಭಿಯಾನ ಎಲ್ಲೆಡೆ ಸಂಚರಿಸಿ ಜಾಗೃತಿ ಮೂಡಿಸಲಿದೆ. ಈ ಅವಧಿಯಲ್ಲೇ ಸರ್ಕಾರ ಪ್ರವರ್ಗ 2ರಲ್ಲಿ ಮೀಸಲಾತಿಯ ಭರವಸೆಯನ್ನ ಈಡೇರಿಸಬೇಕೆಂದರು. ಈಗಾಗಲೇ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದು, ಅವರು ಕಾಲಾವಕಾಶ ಕೇಳಿದ್ದಾರೆ. ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡುತ್ತಾರೆಂಬ ವಿಶ್ವಾಸವಿದೆ ಎಂದರು.
ಇನ್ನು ಪಂಚಮಸಾಲಿ ಲಿಂಗಾಯಿತರನ್ನ ಬೇರೆ-ಬೇರೆ ಹೆಸರುಗಳಿಂದ ಕರೆಯುತ್ತಾರೆ ಅವರೆಲ್ಲರನ್ನ ಒಗ್ಗೂಡಿಸಿ ಹಕ್ಕೋತ್ತಾಯ ಮಂಡಿಸಲೆಂದೆ ಮಲೆ ಮಹಾದೇಶ್ವರ ಬೆಟ್ಟದಿಂದ ಅಭಿಯಾನವನ್ನ ಆರಂಭಿಸಲಾಗುತ್ತಿದೆ ಎಂದು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.