ಅಂತರರಾಷ್ಟ್ರೀಯ

ವಿಮಾನ ಕದ್ದು ಪತನಗೊಳಿಸುವುದಾಗಿ ಪೈಲಟ್ ಬೆದರಿಕೆ; ಹೈ ಅಲರ್ಟ್

ವಿಮಾನ ಕದ್ದು ಪತನಗೊಳಿಸುವುದಾಗಿ ಪೈಲಟ್ ಬೆದರಿಕೆ; ಹೈ ಅಲರ್ಟ್

ಟ್ಯುಪೆಲೊ: ಸೆಪ್ಟೆಂಬರ್ 03: ಓರ್ವ ವ್ಯಕ್ತಿಯು ಕದ್ದ ವಿಮಾನದೊಂದಿಗೆ ಮಿಸ್ಸಿಸ್ಸಿಪ್ಪಿಯ ಟುಪೆಲೋದಲ್ಲಿ ಸುಳಿದಾಡುತ್ತಿದ್ದು ಉದ್ದೇಶಪೂರ್ವಕವಾಗಿ ವಿಮಾನವನ್ನು ಅಪ್ಪಳಿಸಿ ಪತನಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ಮಿಸ್ಸಿಸ್ಸಿಪ್ಪಿಯಲ್ಲಿರುವ ವಾಲ್‌ಮಾರ್ಟ್ ಅಂಗಡಿಗೆ ಅಪ್ಪಳಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿದ್ದ ವಾಲ್‌ಮಾರ್ಟ್ ಮತ್ತು ಇತರ ಅಂಗಡಿಗಳನ್ನು ಸ್ಥಳಾಂತರಿಸಲಾಗಿದೆ. ಪೈಲಟ್ ಜೊತೆ ನೇರವಾಗಿ ಮಾತನಾಡಲು ಸಾಧ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಎಲ್ಲಾ ಸ್ಪಷ್ಟತೆ ನೀಡುವವರೆಗೆ ಆ ಪ್ರದೇಶವನ್ನು ತೊರೆಯುವಂತೆ ನಾಗರಿಕರಿಗೆ ಹೇಳಲಾಗಿದೆ. ವಿಮಾನದ ಚಲನಶೀಲತೆಯೊಂದಿಗೆ ಅಪಾಯದ ವಲಯವು ಟ್ಯುಪೆಲೋಗಿಂತಲೂ ದೊಡ್ಡದಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಒಂದು ವರದಿಯ ಪ್ರಕಾರ, ಟ್ಯುಪೆಲೋ ಮೇಲೆ ಪೈಲಟ್ ವಿಮಾನವನ್ನು ಹಾರಿಸುತ್ತಿರುವ ಬಗ್ಗೆ ಅಧಿಕಾರಿಗಳು ಮೊದಲು 5 ಗಂಟೆಗೆ (ಸ್ಥಳೀಯ ಕಾಲಮಾನ) ಎಚ್ಚರಿಸಿದರು. ವಿಮಾನವು ಮುಂಜಾನೆ 5 ಗಂಟೆಗೆ ಸುತ್ತಲು ಪ್ರಾರಂಭಿಸಿ,  ಮೂರು ಗಂಟೆಗಳ ಕಾಲ ಗಾಳಿಯಲ್ಲಿ ಹಾರಾಡಿತ್ತು.  ಪೈಲಟ್ 911 ಗೆ ಕರೆ ಮಾಡಿ ವೆಸ್ಟ್ ಮೇನ್‌ನಲ್ಲಿರುವ ವಾಲ್-ಮಾರ್ಟ್‌ಗೆ ಉದ್ದೇಶಪೂರ್ವಕವಾಗಿ ಅಪ್ಪಳಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ತುರ್ತು ಸೇವೆಗಳನ್ನು ಅಲರ್ಟ್ ಮಾಡಲಾಗಿದೆ . ಪೈಲಟ್ ಟುಪೆಲೋ ವಿಮಾನ ನಿಲ್ದಾಣದಿಂದ ಸಣ್ಣ ವಿಮಾನವಾದ ಬೀಚ್‌ಕ್ರಾಫ್ಟ್ ಕಿಂಗ್ ಏರ್ 90 ಅನ್ನು ಅಪಹರಿಸಿದ್ದಾರೆ ಎಂದು ವರದಿಯಾಗಿದೆ. ವಿಮಾನವು ಒಂಬತ್ತು ಆಸನಗಳಾಗಿದ್ದು ಎರಡು ಎಂಜಿನ್‌ಗಳನ್ನು ಹೊಂದಿದೆ.

ರಾಜ್ಯ ಕಾನೂನು ಜಾರಿ ಮತ್ತು ತುರ್ತು ನಿರ್ವಾಹಕರು ಈ ಅಪಾಯಕಾರಿ ಪರಿಸ್ಥಿತಿಯನ್ನು ನಿಕಟವಾಗಿ ಟ್ರ್ಯಾಕ್ ಮಾಡುತ್ತಿದ್ದಾರೆ” ಎಂದು ಗವರ್ನರ್ ಟೇಟ್ ರೀವ್ಸ್ ಹೇಳಿದರು

ಸುದ್ದಿ ಓದಿ