ಅಂತರರಾಷ್ಟ್ರೀಯ

ಕೋವಿಡ್-19: ಜಾಗತಿಕ ಪ್ರಕರಣಗಳ ಸಂಖ್ಯೆ 6.26 ಕೋಟಿಗೆ ಏರಿಕೆ

ಕೋವಿಡ್-19: ಜಾಗತಿಕ ಪ್ರಕರಣಗಳ ಸಂಖ್ಯೆ 6.26 ಕೋಟಿಗೆ ಏರಿಕೆ

ವಾಷಿಂಗ್ಟನ್, ನವೆಂಬರ್ 30: ವಿಶ್ವದಾದ್ಯಂತ ಕೊರೋನಾವೈರಸ್ ನ ಒಟ್ಟು ಪ್ರಕರಣಗಳ ಸಂಖ್ಯೆ 6 ಕೋಟಿ 20 ಲಕ್ಷಕ್ಕೆ ಏರಿದ್ದು, ಸಾವಿನ ಸಂಖ್ಯೆ 14 ಲಕ್ಷ 50ಕ್ಕೆ ಮುಟ್ಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಸೋಮವಾರ ತಿಳಿಸಿದೆ.

ಸದ್ಯ ಜಾಗತಿಕವಾಗಿ ಕೋವಿಡ್-19ನ ಒಟ್ಟು ಪ್ರಕರಣಗಳ ಸಂಖ್ಯೆ 6,26,70,153ರಷ್ಟಿದ್ದು, ಸಾವಿನ ಸಂಖ್ಯೆ 14,58,360 ರಷ್ಟಿದೆ.

ಅಮೆರಿಕದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿವೆ. ಈ ಸಂಖ್ಯೆ ಕ್ರಮವಾಗಿ 1,33,74,162 ಮತ್ತು 2,66,838 ರಷ್ಟಿದೆ ಎಂದು ವಿಶ್ವವಿದ್ಯಾಲಯದ ವರದಿ ತಿಳಿಸಿದೆ.

93,92,919 ಪ್ರಕರಣಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದ್ದು, ದೇಶದಲ್ಲಿ ಸಾವಿನ ಸಂಖ್ಯೆ  1,36,696ಕ್ಕೆ ಏರಿದೆ.

ಹೆಚ್ಚು ಪ್ರಕರಣಗಳು ವರದಿಯಾಗಿರುವ ಇತರ ದೇಶಗಳಲ್ಲಿ ಬ್ರೆಜಿಲ್ (63,14,740), ಫ್ರಾನ್ಸ್ (22,70,573), ರಷ್ಯಾ (22,49,890), ಸ್ಪೇನ್ (16,28,208) ಮತ್ತು ಬ್ರಿಟನ್ (16,21,305) ಸೇರಿವೆ.

ಬ್ರೆಜಿಲ್ ನಲ್ಲಿ ಇದುವರೆಗೆ 1,72,833 ಸಾವುಗಳು ವರದಿಯಾಗುವುದರೊಂದಿಗೆ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ.

30,000ಕ್ಕೂ ಹೆಚ್ಚು ಸಾವುಗಳು ವರದಿಯಾಗಿರುವ ದೇಶಗಳ ಪೈಕಿ ಮೆಕ್ಸಿಕೋ (1,05,459), ಬ್ರಿಟನ್ (58,342), ಇಟಲಿ (54,904), ಫ್ರಾನ್ಸ್ (52,410), ಇರಾನ್ (47,874), ಸ್ಪೇನ್ (44,668) ಮತ್ತು ರಷ್ಯಾ (39,127) ಸೇರಿವೆ.

ಸುದ್ದಿ ಓದಿ